Just In
- 46 min ago
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- 1 hr ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
Don't Miss
- Finance
Post Office scheme: ಮಾಸಿಕ 9,000 ರೂ ಆದಾಯ ಪಡೆಯುವುದು ಹೇಗೆ?
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2020 ಕ್ಕೆ ಈ ಲೇಸರ್ ಪ್ರಿಂಟ್ ಗಳು ಬೆಸ್ಟ್
2020 ನೇ ಇಸವಿಗೆ ಕಾಲಿಡುತ್ತಿರುವ ಈ ಸಂದರ್ಬದಲ್ಲಿ ಹಳೆಯ ಕಾಲದ ಪ್ರಿಂಟರ್ ಗಳಿಗೆ ಗುಡ್ ಬಾಯ್ ಹೇಳಿ ಹೊಸ ಜಮಾನದ ಲೇಸರ್ ಪ್ರಿಂಟರ್ ಗಳಿಗೆ ಹಾಯ್ ಹೇಳುವ ಕಾಲ ಬಂದಿದೆ. ಹೌದು 2020 ರಲ್ಲಿ ನೀವು ಖರೀದಿಸಬಹುದಾದ ಬೆಸ್ಟ ಲೇಸರ್ ಪ್ರಿಂಟರ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಕಲರ್ ಪ್ರಿಂಟ್ ಮತ್ತು ಮೋನೋ ಪ್ರಿಂಟಿಂಗ್ ಗೆ ಇವು ಹೇಳಿ ಮಾಡಿಸಿದ ಪ್ರಿಂಟರ್ ಗಳಾಗಿವೆ. ಲೇಸರ್ ಪ್ರಿಂಟರ್ ಗಳು ಇದೀಗ ಕೈಗೆಟುಕುವ ಬೆಲೆಯಲ್ಲಿಯೂ ಕೂಡ ಸಿಗುತ್ತಿದೆ. ಅಷ್ಟೇ ಅಲ್ಲ ಫ್ಲೆಕ್ಸಿಬಲ್ ಆಗಿ ಕೂಡ ಇವೆ. ಅಂದರೆ ಇವುಗು ಮನೆ ಮತ್ತು ಆಫೀಸ್ ಬಳಕೆಗೆ ಯೋಗ್ಯವೆನಿಸುವ ಡಿಸೈನ್ ಜೊತೆಗೆ ವೈಶಿಷ್ಟ್ಯತೆಗಳನ್ನು ಒಳಗೊಂಡಿವೆ. ಬೇರೆಬೇರೆ ಗಾತ್ರ ಮತ್ತು ಆಕಾರಗಳಲ್ಲಿ ಲೇಸರ್ ಪ್ರಿಂಟರ್ ಗಳು ಲಭ್ಯವಿದ್ದು ನಾವಿಲ್ಲಿ ಪ್ರಮುಖ 10 ಲೇಸರ್ ಪ್ರಿಂಟರ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

1. ಜೆರಾಕ್ಸ್ ವೆರ್ಸಾಲಿಂಕ್ B600DN ಲೇಸರ್ ಪ್ರಿಂಟರ್
ವರ್ಗ: ಮೋನೋ ಲೇಸರ್ ಪ್ರಿಂಟರ್ | ಪ್ರಿಂಟ್ ವೇಗ: 55ppm | ಪೇಪರ್ ಗಾತ್ರ: A4 ವರೆಗೆ|ಪೇಪರ್ ಸಾಮರ್ಥ್ಯ: 550 | ತೂಕ: 22.3kg
ಒಂದು ನಿಮಿಷಕ್ಕೆ 55 ಪೇಜ್ ಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯ ಈ ಪ್ರಿಂಟರ್ ಗೆ ಇದೆ. ದೊಡ್ಡ ಪ್ರಿಂಟಿಂಗ್ ಕೆಲಸಗಳನ್ನು ನಿರಂತರವಾಗಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಮೋನೋಕ್ರೋಮ್ ನ ಪ್ರಾರಂಭಿಕ ವೆಚ್ಚ ದುಬಾರಿ ಎಂದು ಅನ್ನಿಸುತ್ತದೆ. ಆದರೆ ಪ್ರೀಮಿಯಂ ಯಂತ್ರವು ಆರ್ಥಿಕವಾಗಿ ಉತ್ತಮವೆನಿಸುತ್ತದೆ ಮತ್ತು ಅದರ ಬೆಲೆಯು ಪ್ರಿಂಟ್ ನ ಗುಣಮಟ್ಟವನ್ನು ಸಮರ್ಥಿಸಿಕೊಳ್ಳುವಂತಿದೆ. 5 ಇಂಚಿನ ಟಚ್ ಸ್ಕ್ರೀನ್ ಇಂಟರ್ಫೇಸ್ ನಿಮ್ಮ ಆಪರೇಟಿಂಗ್ ಸಮಯವನ್ನು ಉಳಿತಾಯ ಮಾಡುತ್ತದೆ.

2. ಬ್ರದರ್ HL-L5100DN ಲೇಸರ್ ಪ್ರಿಂಟರ್
ವರ್ಗ: ಮೊನೋ ಲೇಸರ್ ಪ್ರಿಂಟರ್| ಪ್ರಿಂಟ್ ವೇಗ: 40ppm | ಪೇಪರ್ ಗಾತ್ರ: A4 ವರೆಗೆ |ಪೇಪರ್ ಸಾಮರ್ಥ್ಯ: 300 | ತೂಕ: 10.7kg
ಒಂದು ಸಣ್ಣ ಬೂದು ಬಣ್ಣದ ಬಾಕ್ಸ್ ಅದರ ಗಾತ್ರಕ್ಕಿಂತ ಆಶ್ಚರ್ಯವೆನಿಸುವ ಕೆಲಸವನ್ನು ಮಾಡುತ್ತದೆ. ಇದು ಸಾಕಷ್ಟು ಪೇಪರ್ ಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸಣ್ಣ ಆಫೀಸ್ ಕೆಲಸಗಳಿಗೆ ಹೇಳ ಮಾಡಿಸಿದ ಪ್ರಿಂಟರ್ ಆಗಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಡಾಕ್ಯುಮೆಂಟ್ ಗಳನ್ ಪ್ರಿಂಟ್ ಮಾಡುವುದಾದರೆ ಉತ್ತಮವೆನಿಸಿರುವ ಡಿವೈಸ್ ಆಗಿದೆ. ಪ್ರತಿ ಪೇಜಿಗೆ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.

3. ಕ್ಯೋಸೆರಾ ಇಕೋಸಿಸ್ ಪಿ 6230 ಸಿಡಿಎನ್ ಲೇಸರ್ ಪ್ರಿಂಟರ್
ವರ್ಗ: ಕಲರ್ ಲೇಸರ್ ಪ್ರಿಂಟರ್ | ಪ್ರಿಂಟ್ ವೇಗ: 30ppm | ಪೇಪರ್ ಗಾತ್ರ: A4 ವರೆಗೆ |ಪೇಪರ್ ಸಾಮರ್ಥ್ಯ: 500 | ತೂಕ: 28.3kg
500 ಹಾಳೆಗಳ ಸಾಮರ್ಥ್ಯ ಮತ್ತು ಟೋನರ್ ಕ್ಯಾಟ್ರಿಯೇಜ್ ಗಳಿಗೆ ಉತ್ತಮ ಸಾಮರ್ಥ್ಯವಿದೆ. ಇದು ದೊಡ್ಡ ಆಫೀಸ್ ಗಳಿಗೆ ಮತ್ತು ನಿರಂತರ ಕೆಲಸವಿರುವ ಗೃಹಕಛೇರಿಗೆ ಸೂಕ್ತವಾಗಿದೆ. ಇದು ಡುಪ್ಲೆಕ್ಸ್ ಮೋಡ್ ನಲ್ಲಿ ಬಹಳ ವೇಗವಾಗಿ ಮುದ್ರಿಸುತ್ತದೆ ಮತ್ತು ವೇಗವಾಗಿ ರನ್ ಆಗುತ್ತದೆ. ಡಿಸ್ಪ್ಲೇ ಬಟನ್ ಗಳು ಚಿಕ್ಕದಿದ್ದರೂ ಕೂಡ ಉತ್ತಮವಾಗಿ ಹೊಂದಿಸಲ್ಪಟ್ಟಿದೆ. ಭದ್ರತಾ ವೈಶಿಷ್ಟ್ಯತೆಗಳು ಚೆನ್ನಾಗಿದ್ದು ನಿಮ್ಮ ವಯಕ್ತಿಕ ಮುದ್ರಣಕ್ಕೆ ಬಹಳ ಸೂಕ್ತವಾಗಿದೆ.

4. ಜೆರಾಕ್ಸ್ B215 ಲೇಸರ್ ಪ್ರಿಂಟರ್
ವರ್ಗ: ಮೊನೋ ಲೇಸರ್ ಪ್ರಿಂಟರ್| ಪ್ರಿಂಟ್ ವೇಗ: 30ppm | ಪೇಪರ್ ಗಾತ್ರ: A4 |ಪೇಪರ್ ಸಾಮರ್ಥ್ಯ: 250 | ತೂಕ: 11.5kg
ಸಣ್ಣದಾಗಿರುವ ಮತ್ತು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಈ ಡಿವೈಸ್ ನಿಮಗೆ ಪ್ರಿಂಟ್, ಸ್ಕ್ಯಾನ್, ಕಾಪಿ ಮತ್ತು ಫ್ಯಾಕ್ಸ್ ಫಂಕ್ಷನ್ ಗಳನ್ನು ಮಾಡುವುದಕ್ಕೆ ಅವಕಾಶ ನೀಡುತ್ತದೆ. ಕಡಿಮೆ ಬೆಲೆಯದ್ದೇ ಆದರೂ ಕೂಡ ಇದರ ಟಚ್ ಸ್ಕ್ರೀನ್ ದೊಡ್ಡದಾಗಿದ್ದು ಆಪರೇಟಿಂಗ್ ಗೆ ಅನುಕೂಲಕರವಾಗಿದೆ. ಪ್ರಮುಖ ಪೇಪರ್ ಟ್ರೇಯಲ್ಲಿ 250 ಹಾಳೆಗಳನ್ನು ಹಿಡಿಸಬಹುದು ಮತ್ತು 1500 ಮೋನೋಕ್ರೋಮ್ ಪೇಜ್ ಗಳಿಗೆ ಅನುಕೂಲವಾಗುವಂತ ಟೋನರ್ ನ್ನು ಹೊಂದಿದೆ ಮತ್ತು ಪ್ರತಿ ಪೇಜಿಗೆ ತಗುಲುವ ವೆಚ್ಚವೂ ಕೂಡ ಅತ್ಯಂತ ಕಡಿಮೆಯಾಗಿದೆ.

5.ಕೆನಾನ್ ಐ-ಸೆನ್ಸಿಸ್ MF735Cx ಲೇಸರ್ ಪ್ರಿಂಟರ್
ವರ್ಗ: 4-ಇನ್-1 ಕಲರ್ ಇಂಕ್ ಜೆಟ್ ಪ್ರಿಂಟರ್ | ಪ್ರಿಂಟ್ ವೇಗ: 27ppm | ಪೇಪರ್ ಗಾತ್ರ: A4 ವರೆಗೆ |ಪೇಪರ್ ಸಾಮರ್ಥ್ಯ: 250 | ತೂಕ: 26.5kg
ಕೆನಾನ್ ಮಲ್ಟಿ ಫಂಕ್ಷನ್ ಲೇಸರ್ ಪ್ರಿಂಟರ್ ಅತ್ಯುತ್ತಮ ಡಿಸೈನ್ ನ್ನು ಹೊಂದಿದೆ ಮತ್ತು ಇದರ ಪ್ರದರ್ಶನವು ಅತ್ಯುತ್ತಮವಾಗಿದೆ. ದೊಡ್ಡ ವರ್ಕ್ ಗ್ರೂಪ್ ನಲ್ಲಿ ಅಥವಾ ಸ್ಕ್ಯಾನಿಂಗ್, ಕಾಪಿ ಮಾಡುವುದು ಮತ್ತು ಫ್ಯಾಕ್ಸ್ ನ್ನು ವಯರ್ ಲೆಸ್ ಆಗಿ ಮಾಡುವುದರಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ದೊಡ್ಡ ಟಚ್ ಸ್ಕ್ರೀನ್ ಪೆನಲ್ ಎಲ್ಲಾ ಫಂಕ್ಷನ್ಸ್ ನ್ನು ಆಕ್ಸಿಸ್ ಮಾಡುವುದಕ್ಕೆ ಅನುಕೂಲಕರವಾಗಿದೆ. 6,300 ಮೋನೋ ಅಥವಾ 5,000 ಕಲರ್ ಪೇಜ್ ನ್ನು ಪ್ರಿಂಟ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ಲೆಕ್ಸ್ ಮಾರ್ಕ್ B2236dw ಲೇಸರ್ ಪ್ರಿಂಟರ್
ವರ್ಗ: ಮೊನೋ ಲೇಸರ್ ಪ್ರಿಂಟರ್| ಪ್ರಿಂಟ್ ವೇಗ: 36ppm | ಪೇಪರ್ ಗಾತ್ರ: A4 ವರೆಗೆ|ಪೇಪರ್ ಸಾಮರ್ಥ್ಯ: 250 | ತೂಕ: 6/8kg
ಸಣ್ಣ ಆಫೀಸ್ ವಾತಾವರಣಕ್ಕೆ ಇದು ಹೇಳಿ ಮಾಡಿಸಿದ ಪ್ರಿಂಟರ್ ಆಗಿದೆ. ಇದು 250 ಹಾಳೆಗಳಷ್ಟು ಪೇಪರ್ ನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಕ್ಯಾಟ್ರಿಯೇಜ್ 6,000 ಪುಟಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯ ಹೊಂದಿದೆ. ವೈಫೈ, ಡುಪ್ಲೆಕ್ಸ್ ಪ್ರಿಂಟ್ರಿಂಗ್ ಮತ್ತು ರೋಬೋಸ್ಟ್ ಸೆಕ್ಯುರಿಟಿಯನ್ನು ಇದು ಹೊಂದಿದ್ದು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ.

7. ಜೆರಾಕ್ಸ್ ವೆರ್ಸಾಲಿಂಕ್ C500DN ಲೇಸರ್ ಪ್ರಿಂಟರ್
ವರ್ಗ: ಕಲರ್ ಲೇಸರ್ ಪ್ರಿಂಟರ್ | ಪ್ರಿಂಟ್ ವೇಗ: 43ppm | ಪೇಪರ್ ಗಾತ್ರ: A4 ವರೆಗೆ|ಪೇಪರ್ ಸಾಮರ್ಥ್ಯ: 550 | ತೂಕ: 28kg
ಇದು ಹೈ-ಎಂಡ್ ಪ್ರಿಂಟಿಂಗ್ ಡಿವೈಸ್ ಆಗಿದ್ದು ಸಣ್ಣದರಿಂದ ದೊಡ್ಡ ಬ್ಯುಸಿನೆಸ್ ಇರುವ ಆಫೀಸ್ ಕೆಲಸಗಳಿಗೆ ಇದು ಅನುಕೂಲಕರವಾಗಿರುತ್ತದೆ. ಪೇಪರ್ ವೇಗ ಮತ್ತು ಪ್ರಿಂಟ್ ಸಾಮರ್ಥ್ಯವೇ ಕೀ-ಫ್ಯಾಕ್ಟರ್ ಆಗಿರುವ ಆಫೀಸ್ ನಲ್ಲಿ ಇದನ್ನು ಬಳಕೆ ಮಾಡಬಹುದು. ಡುಪ್ಲೆಕ್ಸ್ ಮೋಡ್ ನಲ್ಲಿ ಪ್ರಿಂಟ್ ಮಾಡುವುದಕ್ಕೆ ಅತ್ಯುತ್ತಮ ಭದ್ರತಾ ಫೀಚರ್ ಗಳು ಇದರಲ್ಲಿದ್ದು ಅತ್ಯಾಧುನಿಕ ಟಚ್ ಸ್ಕ್ರೀನ್ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗಾಗಿ ನಿಮ್ಮ ಆಪರೇಟಿಂಗ್ ಸಮಯವನ್ನು ಉಳಿತಾಯ ಮಾಡುತ್ತದೆ. ಇದರ ರನ್ನಿಂಗ್ ಬೆಲೆ ಕೂಡ ಕಡಿಮೆ ಇರುತ್ತದೆ.

8. ರಿಕೋಹ್ SP C261DNw ಲೇಸರ್ ಪ್ರಿಂಟರ್
ವರ್ಗ: ಕಲರ್ ಲೇಸರ್ ಪ್ರಿಂಟರ್ | ಪ್ರಿಂಟ್ ವೇಗ: 20ppm | ಪೇಪರ್ ಗಾತ್ರ: A4 ವರೆಗೆ|ಪೇಪರ್ ಸಾಮರ್ಥ್ಯ: 250 | ತೂಕ: 23.8kg
ರಿಕೋಹ್ ಕಲರ್ ಪ್ರಿಂಟರ್ ಸಾಕಷ್ಟು ಫೀಚರ್ ನ್ನು ಹೊಂದಿದ್ದು ವೈಫೈ ಕನೆಕ್ಟಿವಿಟಿ, ಡುಪ್ಲೆಕ್ಸ್ ಮೋಡ್ ಮತ್ತು ಸೆಕ್ಯೂರ್ ಪ್ರಿಂಟಿಂಗ್ ಬಿಲ್ಟ್ ಇನ್ ವೈಶಿಷ್ಟ್ಯತೆಯನ್ನು ಹೊಂದಿದೆ.ಇದು ತನ್ನ ಹಳೆಯ ಪ್ಲಾಸ್ಟಿಕ್ ಪೆನಲ್ ಗಳಿಂದ ಹಳೆಯದೆಂದು ಅನ್ನಿಸುತ್ತದೆ ಮತ್ತು ಇತರೆ ಪ್ರಿಂಟರ್ ಗಳಿಗೆ ಹೋಲಿಸಿದರೆ ಸ್ವಲ್ಪ ನಿಧಾನಗತಿಯದ್ದೂ ಎಂದು ಕೂಡ ಅನ್ನಿಸಬಹುದು. ಆದರೆ ಮುದ್ರಣ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

9. HP ಕಲರ್ ಲೇಸರ್ MFP 179fnw ಲೇಸರ್ ಪ್ರಿಂಟರ್
ವರ್ಗ: ಕಲರ್ ಲೇಸರ್ 4-ಇನ್-1 ಪ್ರಿಂಟರ್ | ಪ್ರಿಂಟ್ ವೇಗ: 18ppm (ಮೋನೋ) | ಪೇಪರ್ ಗಾತ್ರ: A4 |ಪೇಪರ್ ಸಾಮರ್ಥ್ಯ: 150 | ತೂಕ: 14kg
ಹೆಚ್ ಪಿ ವಿಶ್ವದ ಅತೀ ಸಣ್ಣ ಮಲ್ಟಿಫಂಕ್ಷನ್ ಡಿವೈಸ್ ನ್ನು ಹೇಗೆ ತಾನೆ ನಾವಿಲ್ಲಿ ಮಿಸ್ ಮಾಡುವುದಕ್ಕೆ ಸಾಧ್ಯ ಹೇಳಿ. ಇದು ಮುದ್ರಿಸುತ್ತದೆ, ಸ್ಕ್ಯಾನ್ , ಕಾಪಿ ಮತ್ತು ಫ್ಯಾಕ್ ಮಾಡುವುದಕ್ಕೆ ಅನುಕೂಲಕರವಾಗಿದ್ದು 40 ಸ್ವಯಂಚಾಲಿತ ಡಾಕ್ಯುಮೆಂಟ್ ಫೀಡರ್ ನ್ನು ನಿಗದಿತ ಸಮಯಕ್ಕೆ ಸೆಟ್ ಮಾಡುವ ಅವಕಾಶವನ್ನು ನೀಡುತ್ತದೆ. ಇದರಲ್ಲಿ ವೈಫೈ ಬಿಲ್ಟ್ ಇನ್ ಆದರೆ ಆದರೆ ಆಟೋ ಡುಪ್ಲೆಕ್ಸ್ ಮೋಡ್ ಇದರಲ್ಲಿ ಇಲ್ಲ. ಇತರ ಲೇಸರ್ ಪ್ರಿಂಟರ್ ಗಳಿಗೆ ಹೋಲಿಸಿದರೆ ಇದರ ಬೆಲೆ ಬಹಳ ಕಡಿಮೆ.

10. HP ಕಲರ್ ಲೇಸರ್ ಜೆಟ್ ಪ್ರೋ M454dw ಲೇಸರ್ ಪ್ರಿಂಟರ್
ವರ್ಗ: ಕಲರ್ ಲೇಸರ್ ಪ್ರಿಂಟರ್ | ಪ್ರಿಂಟ್ ವೇಗ: 28ppm | ಪೇಪರ್ ಗಾತ್ರ: A4 |ಪೇಪರ್ ಸಾಮರ್ಥ್ಯ: 300 | ತೂಕ: 18.9kg
ಈ ಸಿಂಪಲ್ ಆಗಿರುವ ಲೇಸರ್ ಪ್ರಿಂಟರ್ ಗಳು ಆಶ್ಚರ್ಯಕರವಾಗಿರುವ ಫೀಚರ್ ಗಳನ್ನು ಹೊಂದಿದೆ. ಇದು ಒಂದು ಸಮಯಕ್ಕೆ 28ppm ನ ಮೋನೋ ಅಥವಾ ಕಲರ್ ಪ್ರಿಂಟ್ ನ್ನು ಎರಡೂ ಪುಟಗಳಿಗೆ ಸ್ವಯಂಚಾಲಿತವಾಗಿ ಮಾಡುವ ಸಾಮರ್ಥ್ಯ ಹೊಂದಿದೆ. ಡುಯಲ್ ಬ್ಯಾಂಡ್ ವೈಫೈ ಬಿಲ್ಟ್ ಇನ್ ಆಗಿದ್ದು ಮುಂಭಾಗದ ಯುಎಸ್ ಬಿ ಪೋರ್ಟ್ ಇದೆ. ಫ್ಲ್ಯಾಶ್ ಆಗುವ ಬಣ್ಣದ ಟಚ್ ಸ್ಕ್ರೀನ್ ಇಂಟರ್ ಫೇಸ್ ಇದೆ.ಇದರ ಪ್ರಮುಖ ಪೇಪರ್ ಟ್ರೇಯಲ್ಲಿ 300 ಶೀಟ್ ಗಳಿಗೆ ರೂಮಿನ ವ್ಯವಸ್ಥೆ ಇದ್ದು, ಅದರಲ್ಲಿ ಜಾಗ ಸಾಲದೇ ಇದ್ದಲ್ಲಿ ಎರಡನೇ ಟ್ರೇಯಲ್ಲಿ ಪೇಪರ್ ನ್ನು ಲೋಡ್ ಮಾಡುವುದಕ್ಕೆ ಅವಕಾಶವಿರುತ್ತದೆ. ಅದರಲ್ಲಿ ಸುಮಾರು 550 ಶೀಟ್ ಗಳನ್ನು ಸೇರಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470