ಕಾಲೇಜು ವಿದ್ಯಾರ್ಥಿಗಳಿಗೆ ಸರಿಹೊಂದುವ ಲ್ಯಾಪ್ ಟಾಪ್ ಗಳ ಪಟ್ಟಿ
ಇಂದಿನ ದಿನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅವಶ್ಯಕತೆಯೂ ತೀರಾ ಹೆಚ್ಚಾಗರಲಿದ್ದು, ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸರಿಹೊಂದುವಂತೆ ಲ್ಯಾಪ್ ಟಾಪ್ ಗಳ ಪಟ್ಟಿಯೂ ಈ ಕೆಳಕಂಡತೆ ಇದೆ.
ಇಂದಿನ ದಿನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅವಶ್ಯಕತೆಯೂ ತೀರಾ ಹೆಚ್ಚಾಗರಲಿದ್ದು, ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸರಿಹೊಂದುವಂತೆ ಲ್ಯಾಪ್ ಟಾಪ್ ಗಳ ಪಟ್ಟಿಯೂ ಈ ಕೆಳಕಂಡತೆ ಇದೆ. ಈ ಲ್ಯಾಪ್ ಟಾಪ್ ಗಳ ಬೆಲೆಯೂ ರೂ.50,000ದ ವರೆಗೂ ಇದೆ ಎನ್ನಲಾಗಿದೆ.

ಡೆಲ್ ಇನ್ ಪೇರಾನ್ 15-3567
ಡೆಲ್ ಇನ್ ಪೇರಾನ್ 15-3567 15.6 ಇಂಚಿನ ಲ್ಯಾಪ್ ಟಾಪ್ ಆಗಿದೆ. 7ನೇ ತಲೆಮಾರಿನ ಇಂಟೆಲ್ ಕೋರ್ i5 7200 U ಸಿಪಿಯು, 4 GB RAM, 1 TB ಹಾರ್ಡ್ ಡಿಸ್ಕ್, ಡಾಸ್ ಆಪರೇಟಿಂಗ್ ಸಿಸ್ಟಮ್ ಮತ್ತು 2 GB ಇಂಟೆಲ್ HD ಗ್ರಾಫಿಕ್ ಕಾರ್ಡ್ ನೊಂದಿಗೆ ದೊರೆಯಲಿದೆ.

ಆಸುಸ್ R558 UQ-DM542D
ಆಸುಸ್ R558 UQ-DM542D ಲ್ಯಾಪ್ ಟಾಪ್ ಸಹ 15.6 ಇಂಚಿನದಾಗಿದ್ದು, 7 ನೇ ತಲೆಮಾರಿನ ಇಂಟೆಲ್ ಕೋರ್ i5 7200 U ಸಿಪಿಯು, 4 GB RAM, 1 TB ಹಾರ್ಡ್ ಡಿಸ್ಕ್, ಡಾಸ್ ಆಪರೇಟಿಂಗ್ ಸಿಸ್ಟಮ್ ಮತ್ತು 2 GB ಇಂಟೆಲ್ HD ಗ್ರಾಫಿಕ್ ಕಾರ್ಡ್ ಜೊತೆಗೆ ಬರುತ್ತದೆ.

ಆಸಸ್ R558 UQ-DM513D
ಆಸಸ್ R558 UQ-DM513D 15.6 ಇಂಚಿನ ಲ್ಯಾಪ್ ಟಾಪ್ ಆಗಿದ್ದು, 7 ನೇ ತಲೆಮಾರಿನ ಇಂಟೆಲ್ ಕೋರ್ i5 7200 U ಸಿಪಿಯು, 4 GB RAM, 1 TB ಹಾರ್ಡ್ಡಿಸ್ಕ್, ಡಾಸ್ ಆಪರೇಟಿಂಗ್ ಸಿಸ್ಟಮ್ ಮತ್ತು 2 GB ಇಂಟೆಲ್ HD ಗ್ರಾಫಿಕ್ ಕಾರ್ಡ್ ಇದರಲ್ಲಿದೆ.

ಆಸುಸ್ ಜೆನ್ ಬುಕ್ ಪ್ರೋ UX 501VW-XS74T
ಆಸುಸ್ ಜೆನ್ ಬುಕ್ ಪ್ರೋ UX 501VW-XS74T ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಪಯೂಕ್ತವಾಗಿದ್ದು, 2.6GHz ಇಂಟೆಲ್ ಸ್ಕೈಲೇಕ್ ಕೋರ್ i7-6700HQ ಪ್ರೊಸೆಸರ್, 16GB RAM ಮತ್ತು 512 PCle- ಆಧರಿತ SSD ಸಂಗ್ರಹದೊಂದಿಗೆ ಬರಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ವಿಂಡೋಸ್ 10 ಲ್ಯಾಪ್ ಟಾಪ್ ಇದಾಗಿದೆ. ಇದು 15.6-ಇಂಚಿನ ಟಚ್ ಐಪಿಎಸ್ 4 ಕೆ ಅಲ್ಟ್ರಾ HD ಡಿಸ್ ಪ್ಲೇ ಹೊಂದಿದೆ.

ಏಸರ್ ಆಸ್ಪೈರ್ ಇ 5-575 ಜಿ -57 ಡಿ 4
ಏಸರ್ ಆಸ್ಪೈರ್ ಇ 5-575 ಜಿ -57 ಡಿ 4 ಲ್ಯಾಪ್ ಟಾಪ್ 7 ನೇ ತಲೆಮಾರಿನ ಇಂಟೆಲ್ ಕೋರ್ i5-7200U ಪ್ರೊಸೆಸರ್ ಮತ್ತು ಎನ್ವಿಡಿಯಾ ಜಿಫೋರ್ಸ್ 940 ಎಂಎಕ್ಸ್ 2 GB VRAM ಗ್ರಾಫಿಕ್ಸ್ ನೊಂದಿಗೆ ಬರುತ್ತದೆ. ಇದು 8GB RAM ಮತ್ತು 256GB SSD ಹೊಂದಿದೆ. ಇದು 15.6-ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ.


Click it and Unblock the Notifications