Subscribe to Gizbot

ಹಾರ್ಡ್ ಡ್ರೈವ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

Written By: Lekhaka

ಇಂದಿನ ದಿನದಲ್ಲಿ ಹಾರ್ಡ್ ಡ್ರೈವ್ ಗಳ ಬಳಕೆಯೂ ಹೆಚ್ಚಾಗುತ್ತಿದ್ದು, ಇವುಗಳ ಬಗ್ಗೆ ನೀವು ಅಗತ್ಯವಾಗಿ ತಿಳಿದುಕೊಳ್ಳಬೇಕಾಗಿದೆ. ಈ ಹಾರ್ಡ್ ಡ್ರೈವ್ ನಲ್ಲಿ ನೂರಾರು ಸಂಖ್ಯೆಯ ಮ್ಯಾಗ್ನೆಟಿಕ್ ಡಿಸ್ಕ್ ಗಳನ್ನು ಕಾಣಬಹುದಾಗಿದೆ. ಇವುಗಳು ಡೇಟಾವನ್ನು ಬರೆದುಕೊಳ್ಳುವುದಲ್ಲದೇ ಅವುಗಳನ್ನು ಸ್ಟೋರ್ ಮಾಡಿಕೊಳ್ಳುತ್ತದೆ.

ಹಾರ್ಡ್ ಡ್ರೈವ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಮೊದಲ ಹಾರ್ಡ್ ಡ್ರೈವ್ ನಿರ್ಮಾಣವಾಗಿದ್ದು, 1956ರಲ್ಲಿ, ಅದನ್ನು ನಿರ್ಮಿಸಿದ್ದು ಐಬಿಎಂ ಕಂಪನಿಯಾಗಿದ್ದು, ಅದರ ಹೆಸರು ಐಬಿಎಂ ಮಾಡಲ್ 350 ಡಿಸ್ಕ್ ಫೈಲ್. ಇದರ ಕೆಪಾಸಿಟಿ ಬಂದು 5MB ಡೇಟಾವನ್ನು ಸೇವ್ ಮಾಡಿಕೊಳ್ಳಬಹುದಾಗಿತ್ತು. ಇದರ ಗಾತ್ರವೂ 250 ಕೆಜಿ ಇತ್ತು ಎನ್ನಲಾಗಿದೆ.

ಹಾರ್ಡ್ ಡ್ರೈವ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಇದಾದ ನಂತರದಲ್ಲಿ 1980ರಲ್ಲಿ 2.52 GB ಗಾತ್ರದ 3MBPS ವೇಗದ ಹಾರ್ಡ್ ಡಿಸ್ಕ್ ಅನ್ನು ನಿರ್ಮಿಸಲಾಯಿತು. ಇದಾದ ನಂತರದಲ್ಲಿ ಸಿಗೇಟ್ ಕಂಪನಿಯೂ ಎಸ್ ಟಿ 506 ಹೆಸರಿನಲ್ಲಿ $1,500ಕ್ಕೆ 5MB ಕೆಪಾಸಿಟಿಯ ಹಾರ್ಡ್ ಡ್ರೈವ್ ಅನ್ನು ನಿರ್ಮಾಣ ಮಾಡಿತ್ತು.

ಹಾರ್ಡ್ ಡ್ರೈವ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

1981ರಲ್ಲಿ ಆಪಲ್ 5MB ಹಾರ್ಡ್ ಡಿಸ್ಕ್ ಬೆಲೆ $3500 ಇತ್ತು. ಅಂದರೆ ಒಂದು GBಗೆ $700000! ಹೀಗೆ ದಿನೇ ದಿನೇ ಅಭಿವೃದ್ದಿ ಹೊಂದುತ್ತಾ ಬಂದು ಇಂದಿಗೆ ಸಣ್ಣ ಸೈಜ್ ಗೆ ಬಂದು ನಿಂತಿದೆ.

ಇಂದು ಫೇಸ್ ಬುಕ್ 300 ಪೇಟಾ ಬೈಟ್ ಡೇಟಾವನ್ನು ಸಂಗ್ರಹಿಸುವ ಸಾಮಾರ್ಥ್ಯವನ್ನು ಹೊಂದಿದೆ. ಇದೇ ಮಾದರಿಯಲ್ಲಿ ಯೂಟ್ಯೂಬ್ 500 PB ಡೇಟಾ ಸಾಮಾರ್ಥ್ಯವನ್ನು ಹೊಂದಿದೆ.

ಭಾರತೀಯರಿಗಾಗಿ ಗೂಗಲ್ ನಿಂದ ಮೊಬೈಲ್ ಪೇಮೆಂಟ್ ಆಪ್: ಸರಳ ಮತ್ತು ಸುರಕ್ಷ

ಬೆಲೆಯಲ್ಲಿಯೂ ಭಾರೀ ಪ್ರಮಾಣದ ಬದಲಾವಣೆಯನ್ನು ಕಾಣಬಹುದಾಗಿದ್ದು, ಒಂದು GBಗೆ ಮಿಲಿಯನ್ ನಿಂದ ಕೇಲವೇ ನೂರು ರೂಗಳಿಗೆ ಬಂದು ನಿಂತಿದೆ. ಇಂದಿನ ದಿನವಂತು ಡೇಟಾ ಮಯವಾಗಿದ್ದು, ಅದನ್ನು ಉಳಿಸಿಕೊಳ್ಳಲು ಹಾರ್ಡ್ ಡಿಸ್ಕ್ ಅವಶ್ಯಕತೆ ಇದೆ.

Read more about:
English summary
With the rise of SSD in the computing industry, the extinction of Hard drives is near. Today, we bring you some of the interesting facts about hard drives
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot