ಲ್ಯಾಪ್‌ಟಾಪ್ ಖರೀದಿಗೆ ಮುನ್ನ ತಿಳಿಯಲೇಬೇಕಾದ ಸಂಗತಿಗಳಿವು!!..ಯಾವುವು ಗೊತ್ತಾ?

ಲ್ಯಾಪ್‌ಟಾಪ್‌ನ ಗಾತ್ರ, ವಿನ್ಯಾಸ, ಬ್ಯಾಟರಿ ಬಾಳಿಕೆ, ಗ್ರಾಫಿಕ್ಸ್‌ ಕಾರ್ಡ್‌, ಪೋರ್ಟ್‌ಗಳು, ಡ್ರೈವ್‌ಗಳು ಹೀಗೆ ಕೆಲವೊಂದಿಷ್ಟು ಬೇಸಿಕ್‌ ಸಂಗತಿಗಳ ಒಂದಿಷ್ಟು ಮಾಹಿತಿ ಇದ್ದರೆ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಸರಳವಾಗಿರುತ್ತದೆ.

|

ಒಂದು ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸಿದಷ್ಟು ಸುಲಭವಾಗಿ ಒಂದು ಲ್ಯಾಪ್‌ಟಾಪ್ ಖರೀದಿಸಲು ಸಾಧ್ಯವಾಗದು.! ಏಕೆಂದರೆ, ಅನೇಕ ನಮೂನೆಯ, ವಿನ್ಯಾಸ, ಬೇರೆ ಬೇರೆ ತಂತ್ರಜ್ಞಾನ, ಬೇರೆ ಬೇರೆ ವೃತ್ತಿಗೆ ಬೇಕಾಗುವಂಥ ಲ್ಯಾಪ್‌ಟಾಪ್‌ಗಳಿವೆ. ಹಾಗಾಗಿ, ನಾವು ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಹೆಚ್ಚು ಎಚ್ಚರಿಕೆಯನ್ನು ವಹಿಸಲೇಬೇಕಾಗುತ್ತದೆ.!!

ಲ್ಯಾಪ್‌ಟಾಪ್‌ನ ಗಾತ್ರ, ವಿನ್ಯಾಸ, ಬ್ಯಾಟರಿ ಬಾಳಿಕೆ, ಗ್ರಾಫಿಕ್ಸ್‌ ಕಾರ್ಡ್‌, ಪೋರ್ಟ್‌ಗಳು, ಡ್ರೈವ್‌ಗಳು ಹೀಗೆ ಕೆಲವೊಂದಿಷ್ಟು ಬೇಸಿಕ್‌ ಸಂಗತಿಗಳ ಒಂದಿಷ್ಟು ಮಾಹಿತಿ ಇದ್ದರೆ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಸರಳವಾಗಿರುತ್ತದೆ. ಇದರಿಂದ ನೀವು ನಿಮ್ಮ ಅಗತ್ಯಕ್ಕೆ ಬೇಕಾದಂಥ ಲ್ಯಾಪ್‌ಟಾಪ್‌ ಖರೀದಿಸಲು ಸಾಧ್ಯವಾಗುತ್ತದೆ.!!

ಲ್ಯಾಪ್‌ಟಾಪ್ ಖರೀದಿಗೆ ಮುನ್ನ ತಿಳಿಯಲೇಬೇಕಾದ ಸಂಗತಿಗಳಿವು!!..ಯಾವುವು ಗೊತ್ತಾ?

ಒಮ್ಮೊಮ್ಮೆ ನಿಮಗೆ ಅನಗತ್ಯವಾಗಿ ಹೊರೆಯಾಗಬಲ್ಲಂಥ ಲ್ಯಾಪ್‌ಟಾಪ್‌ಗಳನ್ನು ನೀವು ಖರೀದಿಸುವುದರಿಂದ ನಿಮ್ಮ ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಬೇಕಾಗಿರುವ ಸಾಮಾನ್ಯ ವಿಷಯಗಳ ಬಗ್ಗೆ ಕೆಲವೊಂದು ಟಿಫ್ಸ್‌ಗಳನ್ನು ತಿಳಿಯಿರಿ.!!

ಲ್ಯಾಪ್‌ಟಾಪ್ ಗಾತ್ರದಲ್ಲಿ ಹುಷಾರು!!

ಲ್ಯಾಪ್‌ಟಾಪ್ ಗಾತ್ರದಲ್ಲಿ ಹುಷಾರು!!

ಮಾರುಕಟ್ಟೆಯಲ್ಲಿ 12ರಿಂದ 17 ಇಂಚಿನವರೆಗೂ ಮತ್ತು ಅದಕ್ಕಿಂತಲೂ ಹೆಚ್ಚಿನ ಗಾತ್ರದ ಲ್ಯಾಪ್‌ಟಾಪ್‌ಗಳಿವೆ. ಆದರೆ, ನಿಮ್ಮ ಅಗತ್ಯ ಮತ್ತು ಬ್ಯಾಟರಿ ಬಾಳಿಕೆಗೆ ತಕ್ಕಂತೆ ಲ್ಯಾಪ್‌ಟಾಪ್ ಗಾತ್ರಗಳನ್ನು ಆಯ್ಕೆಗಳನ್ನು ಮಾಡಿಕೊಳ್ಳುವುದು ಹೆಚ್ಚು ಸೂಕ್ತ.! ಸದಾ ಪ್ರವಾಸದಲ್ಲಿರುವವರಿಗೆ ಚಿಕ್ಕ ಗಾತ್ರದ ಲ್ಯಾಪ್‌ಟಾಪ್‌ಗಳು ಹೆಚ್ಚು ಸೂಕ್ತವಾದರೆ, ಕೇವಲ ಮನೆ ಮತ್ತು ಕಚೇರಿಗಳಿಗಾದರೆ ದೊಡ್ಡ ಗಾತ್ರದ ಲ್ಯಾಪ್‌ಟಾಪ್ ಅವಶ್ಯಕತೆ ಇದೆ.! ಗ್ರಾಫಿಕ್ಸ್, ವಿಡಿಯೋ ಎಡಿಟಿಂಗ್ ಇತ್ಯಾದಿ ಕೆಲಸಗಳಿಗೆ ಬೃಹತ್‌ ಗಾತ್ರದ ಲ್ಯಾಪ್‌ಟಾಪ್‌ ಖರೀದಿಸಬಹುದು.!!

ವಿನ್ಯಾಸದ ಆಯ್ಕೆಯಲ್ಲಿಯೂ ಎಚ್ಚರವಿರಲಿ!!

ವಿನ್ಯಾಸದ ಆಯ್ಕೆಯಲ್ಲಿಯೂ ಎಚ್ಚರವಿರಲಿ!!

ಸಾಂಪ್ರದಾಯಿಕ ವಿನ್ಯಾಸ ಅಥವಾ ಹೈಬ್ರಿಡ್‌ ಮಾದರಿ ವಿನ್ಯಾಸದ ಲ್ಯಾಪ್‌ಟಾಪ್‌ಗಳು ನಿಮಗೆ ಲಭ್ಯವಿವೆ. ಸಾಂಪ್ರದಾಯಿಕ ಮಾದರಿಯಲ್ಲಿ ಸ್ಕ್ರೀನ್ ಅನ್ನು ಮುಖ್ಯ ಭಾಗದಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಹೈಬ್ರಿಡ್‌ ಮಾದರಿಯಲ್ಲಿ ನೀವು ಮಾನಿಟರ್‌ ಅನ್ನು ಬೇರ್ಪಡಿಸಿ ಅದನ್ನು ಟ್ಯಾಬ್ಲೆಟ್‌ ರೀತಿಯಲ್ಲೂ ಬಳಸಿಕೊಳ್ಳಬಹುದು. ಟ್ಯಾಬ್ಲೆಟ್‌ ರೀತಿಯಯಲ್ಲಿ ಬಳಸಹುದಾದ ಲ್ಯಾಪ್ಟಾಪ್ ಇಂದಿನ ಟ್ರೆಂಡ್ ಆಗಿರುವುದರಿಂದ ಗುಣಮಟ್ಟದ ಹೈಬ್ರಿಡ್‌ ಮಾದರಿಯ ಲ್ಯಾಪ್‌ಟಾಪ್‌ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಜಾಣತನ ಎನ್ನಬಹುದು.!!

ಟಚ್‌ಸ್ಕ್ರೀನ್ ಬೇಕೆ?

ಟಚ್‌ಸ್ಕ್ರೀನ್ ಬೇಕೆ?

ನೀವು ಕೀಬೋರ್ಡ್‌ ಹಾಗೂ ಮೌಸ್‌ಗೆ ಹೆಚ್ಚು ಆದ್ಯತೆ ಕೊಡುವವರಾಗಿದ್ದರೆ ಟಚ್‌ಸ್ಕ್ರೀನ್ ಅವಶ್ಯಕತೆ ನಿಮಗಿಲ್ಲ. ಮತ್ತು ಲ್ಯಾಪ್‌ಟಾಪ್ ಬಾಳಿಕೆಯೂ ಹೆಚ್ಚಿರುತ್ತದೆ.!! ಆದರೆ, ಬೃಹತ್‌ ಪೋಲ್ಡರ್‌ಗಳು, ಫೋಟೋಗಳು, ಉದ್ದವಾದ ಡಾಕ್ಯುಮೆಂಟ್‌ಗಳನ್ನು ಸರಳವಾಗಿ ಸ್ಕ್ರಾಲ್‌ ಮಾಡಬಹುದು. ಅವುಗಳನ್ನು ಡ್ರ್ಯಾಗ್‌ ಮಾಡಬಹುದು ಮತ್ತು ನಿಮಗೆ ಹೇಗೆ ಬೇಕೋ ಹಾಗೆ ಒಂದು ಕಡೆಯಿಂದ ಮತ್ತೊಂದ ಕಡೆಗೆ ಒಯ್ಯಬಹುದಾದ ಟಚ್‌ಸ್ಕ್ರೀನ್ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದು ಉತ್ತಮ ಎನ್ನಬಹುದು.!!

ಪೋರ್ಟ್‌ಗಳು ಹೇಗಿರಬೇಕು?

ಪೋರ್ಟ್‌ಗಳು ಹೇಗಿರಬೇಕು?

ಹಳೆ ಲ್ಯಾಪ್‌ಟಾಪ್‌ಗಳಲ್ಲಿ ಎಸ್‌ ವಿಡಿಯೋ, ವಿಜಿಎ, ಫೈರ್‌ವೈರ್‌, ಮಲ್ಪಿಪಲ್ ಆಡಿಯೋ ಜಾಕ್ಸ್, ಮಲ್ಪಿಪಲ್ ಯುಎಸ್‌ಬಿ ಪೋರ್ಟ್ಸ್ ಸೇರಿದಂತೆ ಇನ್ನಿತರ ಉದ್ದೇಶಕ್ಕಾಗಿ ಬಳಕೆಯಾಗುವ ಪೋರ್ಟ್‌ಗಳಿಗೆ ಸ್ಪೇಸ್ ಅನ್ನು ಸಾಕಷ್ಟು ನೀಡಲಾಗಿತ್ತು. ಆದರೆ, ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳ ಗಾತ್ರ ಚಿಕ್ಕದಾಗಿರುವುದರಿಂದ ಕೆಲವೇ ಕೆಲವು ಯುಎಸ್‌ಬಿ ಪೋರ್ಟ್‌ ಆಯ್ಕೆಗಳಿರುತ್ತವೆ.!! ಹಾಗಾಗಿ, ಸಾರ್ವತ್ರಿಕವಾಗಿದ ಮತ್ತು ಬಹುಉಪಯೋಗಿಯಾದ ಎಸ್‌ಬಿ ಟೈಪ್‌ ಸಿ ಪೋರ್ಟ್‌ಗಳನ್ನು ಹೊಂದಿರುವ ಲ್ಯಾಪ್‌ಟಾಪ್ ಖರೀದಿಸಿ.!!

ತೂಕ ವರ್ಸಸ್ ಬ್ಯಾಟರಿ!!

ತೂಕ ವರ್ಸಸ್ ಬ್ಯಾಟರಿ!!

ಕೆಲವು ವರ್ಷಗಳ ಹಿಂದೆ ಲ್ಯಾಪ್‌ಪಾಟ್‌ಗಳ ಬ್ಯಾಟರಿ ಲೈಫ್ ಎರಡರಿಂದ ಮೂರು ಗಂಟೆಗಳ ಕಾಲವಿತ್ತು. ಆದರೆ, ಲ್ಯಾಪ್‌ಟಾಪ್‌ ತೂಕವೂ ಇಳಿಕೆಯಾಗುತ್ತಾ ಹೋದಂತೆ ಇದೀಗ ಬ್ಯಾಟರಿ ಲೈಫ್‌ ಕನಿಷ್ಠ 5ರಿಂದ 6ಗಂಟೆಗಳು ಬಾಳಿಕೆ ಬರುವುದು ಸಾಮಾನ್ಯವಾಗಿದೆ. ಕಡಿಮೆ ತೂಕದಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರುವ ಲ್ಯಾಪ್‌ಟಾಪ್‌ಗಳನ್ನು ನೀವು ಖಂಡಿತವಾಗಿಯೂ ಹೆಚ್ಚು ಹಣ ಕೊಟ್ಟು ಖರೀದಿಸಬೇಕಾಗುತ್ತದೆ.

ಗ್ರಾಫಿಕ್ಸ್‌ ಕಾರ್ಡ್‌ ಬೇಕೆ?

ಗ್ರಾಫಿಕ್ಸ್‌ ಕಾರ್ಡ್‌ ಬೇಕೆ?

ಇಂಟಿಗ್ರೇಟೆಡ್ ಗ್ರಾಫಿಕ್ಸ್‌ ಚಿಫ್ಸ್ ಇರುವ ಮತ್ತು ಪ್ರತ್ಯೇಕವಾಗಿ ಗ್ರಾಫಿಕ್ಸ್‌ ಕಾರ್ಡ್‌ಗಳನ್ನು ಬಳಸಬಹುದಾದ ಲ್ಯಾಪ್‌ಟಾಪ್‌ಗಳಿವೆ. ಇಲ್ಲಿ ನಿಮ್ಮ ಅಗತ್ಯ ಹೇಗಿದೆ ಎಂಬುದರ ಮೇಲೆ ನೀವು ಲ್ಯಾಪ್‌ಟಾಪ್‌ ಖರೀದಿಸಬೇಕಾಗುತ್ತದೆ. ಗೇಮಿಂಗ್‌ ಅಥವಾ ಪ್ರೊಫೆಷನಲ್ ಗ್ರಾಫಿಕ್ಸ್‌ ವಿಡಿಯೋ ಎಡಿಟಿಂಗ್ ಮಾಡುವವರಾಗಿದ್ದರೆ ಖಂಡಿತವಾಗಿಯೂ ಪ್ರತ್ಯೇಕವಾಗಿ ಗ್ರಾಫಿಕ್ಸ್‌ ಕಾರ್ಡ್‌ಗಳ ಮೊರೆ ಹೋಗಬೇಕಾಗುತ್ತದೆ. ಸಾಮಾನ್ಯವಾಗಿ ಡಾಕ್ಯುಮೆಂಟ್ಸ್‌, ವೆಬ್‌, ಮಲ್ಟಿಮೀಡಿಯಾ, ಬೇಸಿಕ್‌ ಗೇಮ್ಸ್‌ ಬಳಕೆಗೆ ಇಂಟಿಗ್ರೇಟೆಡ್‌ ಗ್ರಾಫಿಕ್ಸ್‌ ಇರುವ ಲ್ಯಾಪ್‌ಟಾಪ್‌ಗಳು ಓಕೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ ಡ್ರೈವ್!!

ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ ಡ್ರೈವ್!!

ಇತ್ತೀಚಿನ ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳಲ್ಲಿ ಹಾರ್ಡ್‌ಡ್ರೈವ್(ಎಚ್‌ಡಿಡಿ)ಗಳ ಬದಲಾಗಿ ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) ಹೆಚ್ಚು ಮಣೆ ಹಾಕಲಾಗುತ್ತಿದೆ. ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ ಹೆಚ್ಚು ವೆಚ್ಚವಾದರೂ ಗಾತ್ರದಲ್ಲಿ ತುಂಬ ಚಿಕ್ಕದು, ಹಗುರ ಮತ್ತು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಇತ್ತೀಚಿನ ಬಹುತೇಕ ಹೈ ಎಂಡ್‌ ಲ್ಯಾಪ್‌ಟ್ಯಾಪ್‌ಗಳಲ್ಲಿ ಇಂಥ ಡ್ರೈವ್‌ಗಳಿರುತ್ತವೆ.

ಇಂದಿನಿಂದ ''ರೆಡ್‌ ಮಿ ನೋಟ್ 5 '' ಮೊದಲ ಸೇಲ್!!..ಎಲ್ಲೆಲ್ಲಿ? ಎಷ್ಟು ಗಂಟೆಗೆ ಗೊತ್ತಾ?!ಇಂದಿನಿಂದ ''ರೆಡ್‌ ಮಿ ನೋಟ್ 5 '' ಮೊದಲ ಸೇಲ್!!..ಎಲ್ಲೆಲ್ಲಿ? ಎಷ್ಟು ಗಂಟೆಗೆ ಗೊತ್ತಾ?!

Best Mobiles in India

English summary
For this reason you need to think carefully about what you need your laptop for before you hand over your cash. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X