ಹೊಸ ಮೆಕ್ ಬುಕ್ ಏರ್: ಆಪಲ್ ಸ್ಟೋರ್ ನಲ್ಲಿ ಬಿರುಗಾಳಿ

Posted By: Staff
ಹೊಸ ಮೆಕ್ ಬುಕ್ ಏರ್: ಆಪಲ್ ಸ್ಟೋರ್ ನಲ್ಲಿ ಬಿರುಗಾಳಿ
ಟೆಕ್ ಲೋಕದಲ್ಲಿ ಬಹುಜನರ ಅಚ್ಚುಮೆಚ್ಚಿನ ಕಂಪನಿ ಆಪಲ್ ಮತ್ತೆ ಸುದ್ದಿಮಾಡಿದೆ. ಇದೀಗ ಕಂಪನಿಯು Macbook Airನ ಮೂರು ಆವೃತ್ತಿಗಳನ್ನು ಹೊರತರಲಿದೆ. ಇದು ಹಗುರ, ಸಣ್ಣ ಗಾತ್ರದ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿಕೊಂಡಿರುವ ಮೆಕ್ ಬುಕ್ ಆಗಿರಲಿದೆ.

ಮೆಕ್ ಬುಕ್ ಏರ್ ಆವೃತ್ತಿಯು ಈಗ 11 ಇಂಚಿನ ಡಿಸ್ ಪ್ಲೇ, 13 ಇಂಚು ಮತ್ತು 15 ಇಂಚಿನ ಆವೃತ್ತಿಗಳಲ್ಲಿ ದೊರಕಲಿದೆ. ಇದು 2012ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ತಲುಪುವ ನಿರೀಕ್ಷೆಯಿದೆ. ಇದರಲ್ಲಿ 15 ಇಂಚಿನ ಆವೃತ್ತಿ ಕುರಿತು ಹೆಚ್ಚು ಜನರು ಕುತೂಹಲ ತಾಳಿದ್ದಾರೆ. ಉಳಿದೆರಡು ಆವೃತ್ತಿಗಳು ಹಳೆಯ ಆವೃತ್ತಿಗಳಿಗಿಂತ ಕೊಂಚ ಅಪ್ ಗ್ರೇಡ್ ಆಗಿರಲಿದೆ.

ಜಾಗತಿಕ ಮಾರುಕಟ್ಟೆಗೆ ಹೊರತರಲಿರುವ ನೂತನ ಮೆಕ್ ಬುಕ್ ದರ ತಗ್ಗಿಸುವ ಕುರಿತು ಕಂಪನಿ ಆಲೋಚಿಸುತ್ತಿದೆ. ವದಂತಿಗಳ ಪ್ರಕಾರ ಮೆಕ್ ಬುಕ್ ಏರ್ ನೂತನ ಆವೃತ್ತಿಗಳಲ್ಲಿ ಇಂಟೆಲ್ ಕೋರ್ ಐ5 ಮತ್ತು ಐ7 ಪ್ರೊಸೆಸರ್ ಗಳಿರಲಿವೆಯಂತೆ. ಯಾರಿಗೊತ್ತು..!

ಹೆಚ್ಚಿನ ಕಂಪನಿಗಳು ಮೆಕ್ ಬುಕ್ ಏರ್ ರೀತಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತಿವೆ. ಅಂದರೆ ಅಷ್ಟು ಸ್ಲಿಮ್ ಆಗಿರುವ ಮೆಕ್ ಬುಕ್ ತಯಾರಿಸುವುದು ಹೆಚ್ಚಿನ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ. ನೂತನ ಮೂರು ಆವೃತ್ತಿಗಳು ಹೆಚ್ಚು ಬಳಕೆದಾರರ ಸ್ನೇಹಿ ಆಗಿರುವ ನಿರೀಕ್ಷೆಯಿದೆ.

ಆಪಲ್ ಉತ್ಪನ್ನ ಪ್ರಿಯರು ಹೊಸ ಉತ್ಪನ್ನವನ್ನು ಸ್ವಾಗತಿಸಲು ಸಿದ್ಧರಾಗಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot