ಹೊಸ ಮೈಕ್ರೋಸಾಫ್ಟ್ ಇಮೇಲ್: 10 ವಿಶೇಷತೆಗಳು

Posted By: Varun
ಹೊಸ ಮೈಕ್ರೋಸಾಫ್ಟ್ ಇಮೇಲ್: 10 ವಿಶೇಷತೆಗಳು

'ಒಕ ಪ್ರಾಣಂ ತೀಸೇಸಿ ಒಕ ಪ್ರಾಣಂ ಏಸೇದಿ' ಅಂತ ತೆಲುಗುನ ಒಂದು ಗಾದೆ ಎಲ್ಲೊ ಕೇಳಿದ್ದು ಜ್ಞಾಪಕ ಇದೆ. ಅದರ ಅರ್ಥ ಒಂದರ ಪ್ರಾಣ ತೆಗೆದು ಮತ್ತೊಂದು ಪ್ರಾಣವನ್ನ ಹಾಕೋದು ಅಂತ.

ಈ ಗಾದೆ ಯಾಕಪ್ಪಾ ಜ್ಞಾಪಕ ಬಂತು ಅಂದ್ರೆ ಮೈಕ್ರೋಸಾಫ್ಟ್ ಇದೇ ಕೆಲಸಾನ ಮಾಡಿದೆ. ವಿಷಯ ಏನೆಂದರೆ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರುವ ಜಿಮೇಲ್ ಗೆ ಟಕ್ಕರ್ ಕೊಡಕ್ಕೆ ಅಂತ ತನ್ನ ಒಡೆತನದ ಹಾಟ್ ಮೇಲ್ ಅನ್ನ ಸರಿ ಮಾಡಿ, ಹೊಸದನ್ನೆಲ್ಲ ಸೇರಿಸಿ, ತಾನು ಖರೀದಿಸಿರುವ ಸ್ಕೈಪ್ ವೀಡಿಯೋ ಚಾಟ್ ಸೇರಿಸಿ ಸುಂದರವಾದ ಔಟ್ ಲುಕ್ ಅಂತ ಹೆಸರನ್ನಿಟ್ಟು ಇಮೇಲ್ ಸೇವೆಯನ್ನ ಪ್ರಾರಂಭ ಮಾಡಿದೆ.

ಔಟ್ ಲುಕ್ ಗೆ ಹೊಸ ಲುಕ್ ಕೊಟ್ಟು ಏನೆಲ್ಲಾ ಫೀಚರುಗಳನ್ನು ಅಳವಡಿಸಿದೆ ಮೈಕ್ರೋಸಾಫ್ಟ್ ಅಂತಾ ನೋಡೋಣವೆ:

1 Outlook.com ನ ಡಿಸೈನ್ 60 % ಕಡಿಮೆ ಪಿಕ್ಸೆಲ್ ಉಪಯೋಗಿಸಿ ಮಾಡಲಾಗಿದ್ದು, 30 % ಹೆಚ್ಚ್ಚು ಮೆಸೇಜ್ ಗಳನ್ನ ಇನ್ಬಾಕ್ಸ್ ನಲ್ಲಿ ಕಾಣುವಂತೆ ಮಾಡಲಾಗಿದೆ.

2 ಈ ಖಾತೆಯ ಮೂಲಕ ಫೇಸ್ ಬುಕ್ ಹಾಗು ಟ್ವಿಟರ್ ಜೊತೆ ಕನೆಕ್ಟ್ ಮಾಡಬಹುದಾಗಿದ್ದು ನಿಮ್ಮ ಸ್ನೇಹಿತರ ಸ್ಟೇಟಸ್ ಹಾಗು ಟ್ವೀಟ್ ಗಳನ್ನ ಮೇಲ್ ಮೂಲಕವೆ ನೋಡಬಹುದಾಗಿದೆ.

3. ಫೇಸ್ ಬುಕ್ ಖಾತೆದಾರರ ಜೊತೆ ಔಟ್ ಲುಕ್ ಮೂಲಕವೆ ಚಾಟ್ ಕೂಡ ಮಾಡಬಹುದಾಗಿದೆ.

4. ಖಾತೆದಾರರು ವರ್ಡ್ ಎಕ್ಸೆಲ್, ಪವರ್ ಪಾಯಿಂಟ್ ಫೈಲ್ ಗಳನ್ನ copy ,edit,share ಮಾಡಬಹುದಾಗಿದೆ.

5. ಔಟ್ ಲುಕ್ ನ ಅಡ್ರೆಸ್ ಬುಕ್ ನಲ್ಲಿ ನಿಮ್ಮ ಫೇಸ್ ಬುಕ್ ಹಾಗು ಲಿಂಕ್ಡ್ ಇನ್ ಖಾತೆಗಳ ಕಾಂಟ್ಯಾಕ್ಟ್ ಜೊತೆ ಸೇರ್ಪಡೆ ಮಾಡುವ ಫೀಚರ್ ಇದೆ.

6. ಮತ್ತೊಂದು ಆಕರ್ಷಕ ಫೀಚರ್ ಏನೆಂದರೆ ಇದರಲ್ಲಿ ನೀವು ವೀಡಿಯೋ ಚಾಟ್ ಮಾಡಬಹುದಾಗಿದ್ದು, ಸ್ಕೈಪ್ ಸೌಲಭ್ಯವೂ ಇದೆ.

7. ನಿಮ್ಮ ಇಮೇಲ್ ಗಳಿಗೆ ಬರುವ ಫೋಟೋಗಳ ಸ್ಲೈಡ್ ಷೋ ಕೂಡ ನೋಡಬಹುದಾಗಿದೆ.

8. ಮೈಕ್ರೋಸಾಫ್ಟ್ ನ ಕ್ಲೌಡ್ ಸ್ಟೋರೇಜ್ ಆದ ಸ್ಕೈಡ್ರೈವ್ ಕೂಡ ಕೊಡಲಾಗಿದ್ದು, ಹೆಚ್ಚಿನ ಡೇಟಾ ಫೈಲ್ ಗಳನ್ನ ಅಲ್ಲಿ ಸ್ಟೋರ್ ಮಾಡಬಹುದಾಗಿದೆ.

9. ನಿಮಗೆ ದಿನನಿತ್ಯ ಬರುವ ನ್ಯೂಸ್ ಲೆಟರ್, ಆಫರ್ ಗಳು, ಸಾಮಾಜಿಕ ಜಾಲತಾಣಗಳ ಅಪ್ಡೇಟ್ ಗಳು, ಈ ರೀತಿ ವಿಭಿನ್ನ ರೀತಿಯ ಮೇಲ್ ಗಳನ್ನ ಅದೇ ವಿಭಾಗಿಸಿ ಅದಕ್ಕೆಂದೇ ಆದ ಫೋಲ್ಡರ್ ಮಾಡಿ ಸೇವ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.

10 ಈಗಿರುವ ಹಾಟ್ ಮೇಲ್ ಬಳಕೆದಾರರು ಇದಕ್ಕೆ ಅಪ್ಗ್ರೇಡ್ ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ.

ಇಷ್ಟೆಲ್ಲಾ ಫೀಚರುಗಲಿರುವ ಮೈಕ್ರೋಸಾಫ್ಟ್ ಔಟ್ ಲುಕ್ ನಲ್ಲಿ ಖಾತೆ ತೆರೆಯಲು ರೆಡಿಯಾಗಿದ್ದೇನೆ. ನೀವು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot