ಭಾರತದಲ್ಲಿ ಖರೀದಿಗೆ ಉತ್ತಮವಾಗಿರುವ ಟಾಪ್ 5 ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳು

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೇಗೆ ಗ್ರಾಹಕರ ಮೇಲೆ ಮೋಡಿ ಮಾಡುತ್ತಿದೆಯೋ ಅಂತೆಯೇ ಟ್ಯಾಬ್ಲೆಟ್ ಪ್ರಭಾವ ಕೂಡ ತನ್ನ ಭದ್ರ ಸ್ಥಾನವನ್ನು ಇಲ್ಲಿ ನೆಲೆಗೊಳಿಸಿದೆ.

ಭಾರತೀಯರು ಸ್ಮಾರ್ಟ್‌ಫೋನ್‌ಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಟ್ಯಾಬ್ಲೆಟ್‌ಗೆ ನೀಡುವುದಿಲ್ಲ. ಏಕೆಂದರೆ ಟ್ಯಾಬ್ಲೆಟ್‌ಗಳನ್ನು ಕೊಂಡು ಅದನ್ನು ಬಳಸುವ ಖಯಾಲಿ ಇಲ್ಲಿನವರಿಗಿಲ್ಲ ಮತ್ತು ಅದರ ಬೆಲೆ ಕೂಡ ಒಮ್ಮೊಮ್ಮೆ ಸ್ಮಾರ್ಟ್‌ಫೋನ್ ಅನ್ನು ಕೂಡ ಮೀರಿಸುತ್ತದೆ ಎಂಬುದು ನೆನಪಿಡಬೇಕಾದ ಅಂಶವಾಗಿದೆ.

ಆದರೆ ಈ ಲೇಖನಲ್ಲಿ ನಾವು ಪ್ರಸ್ತುತಪಡಿಸುತ್ತಿರುವ ವಿಷಯ ಆಸಕ್ತಿಕರ ಮತ್ತು ನಿಮ್ಮ ಗಮನಸೆಳೆಯುವಂಥದ್ದಾಗಿದೆ. ಅಷ್ಟೇನೂ ಪ್ರಯೋಜನಕಾರಿಯಲ್ಲ ಎಂಬ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸುವ ಟ್ಯಾಬ್ಲೆಟ್ ಕೂಡ ಕೆಲವೊಂದು ಮಹತ್ವಕಾರಿ ಪ್ರಯೋಜನಗಳನ್ನು ನಮಗೆ ಒದಗಿಸುತ್ತದೆ. ಇಲ್ಲಿ ನಾವು ನೀಡಿರುವ ಟ್ಯಾಬ್ಲೆಟ್ ಮಾಹಿತಿ ಕೂಡ ನಿಮ್ಮ ಬೆಲೆಯೇರಿಕೆಯ ಗಗನ ಕುಸುಮಕ್ಕೆ ಕಡಿವಾಣ ಹಾಕುವಂಥದ್ದೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್ ಕಿಂಡಲ್ ಫೈರ್ ಎಚ್‌ಡಿಎಕ್ಸ್

ಅಮೆಜಾನ್ ಕಿಂಡಲ್ ಫೈರ್ ಎಚ್‌ಡಿಎಕ್ಸ್

#1

ಅಮೆಜಾನ್ ಕಿಂಡಲ್ ಫೈರ್ ಎಚ್‌ಡಿಎಕ್ಸ್ 2560 x 1600 ರೆಸಲ್ಯೂಶನ್‌ನೊಂದಿಗೆ ಉತ್ತಮವಾದ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದು ಶಕ್ತಿಯುತವಾದ ಕ್ವಾಡ್‌-ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್‌ನೊಂದಿಗೆ ನಿರ್ಮಿತವಾಗಿದ್ದು ಡಿವೈಸ್‌ನ ಬ್ಯಾಟರಿ ಬಾಳಿಕೆ ಕೂಡ ಉತ್ತಮವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10.1 (2014)

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10.1 (2014)

#2

10.1 ಇಂಚಿನ ಟ್ಯಾಬ್ಲೆಟ್ 2560 x 1600 ಪಿಕ್ಸೆಲ್ ಬೆಂಬಲದೊಂದಿಗೆ ಒಂದು ಉತ್ತಮ ಖರೀದಿಯಾಗಿದೆ. ಸ್ಯಾಮ್‌ಸಂಗ್ ಎಂಬ ಅತ್ಯುತ್ತಮ ಉತ್ಪನ್ನದ ಟ್ಯಾಬ್ಲೆಟ್ ಕೊಡುಗೆ ಇದೆಂಬ ಹೆಗ್ಗಳಿಕೆ ಗ್ಯಾಲಕ್ಸಿ ನೋಟ್‌ಗಿದೆ. 3ಜಿಬಿ ರ್‌ಯಾಮ್ ಜೊತೆಗೆ ಓಕ್ಟಾ ಕೋರ್ CPU ಗ್ಯಾಲಕ್ಸಿ ನೋಟ್‌ನಲ್ಲಿದ್ದು ಇದು 12 ಗಂಟೆಗಳ ಬ್ಯಾಟರಿ ಲೈಫ್ ಅನ್ನು ನೀಡುತ್ತದೆ.

ಎಲ್‌ಜಿ ಜಿ ಪ್ಯಾಡ್ 8.3

ಎಲ್‌ಜಿ ಜಿ ಪ್ಯಾಡ್ 8.3

#3

ಎಲ್‌ಜಿ ಜಿ ಪ್ಯಾಡ್ 8.3 ಒಂದು 8.3 ಇಂಚಿನ ಟ್ಯಾಬ್ಲೆಟ್ ಆಗಿದ್ದು ಉತ್ತಮ ಪ್ರದರ್ಶನ ಹಾಗೂ ಒಳ್ಳೆಯ ಡಿಸ್‌ಪ್ಲೇಯನ್ನು ಒದಗಿಸುತ್ತದೆ. ಇದು ಸ್ಯಾಮ್‌ಸಂಗ್ ಅಥವಾ ಆಪಲ್‌ನಂತೆ ಬ್ರಾಂಡ್ ಹೆಸರನ್ನು ಹೊಂದಿಲ್ಲದಿದ್ದರೂ ನಿಮ್ಮ ಖರೀದಿಗೆ ಮೌಲ್ಯವನ್ನು ಒದಗಿಸುವಲ್ಲಿ ಸಮರ್ಥವಾಗಿದೆ. ಇದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಒದಗಿಸುತ್ತಿದ್ದು ಮೈಕ್ರೋ ಎಸ್‌ಡಿ ಸ್ಲಾಟ್ ಮೂಲಕ ಇದನ್ನು 64ಜಿಬಿಗೆ ವಿಸ್ತರಿಸಬಹುದು.

ಗೂಗಲ್ ನೆಕ್ಸಸ್ 7

ಗೂಗಲ್ ನೆಕ್ಸಸ್ 7

#4

ಗೂಗಲ್‌ನ ನೆಕ್ಸಸ್ (ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್) ಒಂದು ಹೈಲೈಟ್ ಆಗಿರುವ ಉತ್ತಮ ಉತ್ಪನ್ನಗಳಾಗಿವೆ. ಇದು 7-ಇಂಚಿನ, 1920 x 1200 ಡಿಸ್‌ಪ್ಲೇಯನ್ನು ಹೊಂದಿದ್ದು, 9 ಗಂಟೆಗಳ ಬ್ಯಾಕಪ್ ಅನ್ನು ನೀಡುತ್ತದೆ. ಇದು 1.7GHz ARM Cortex A15 ಡ್ಯುಯೆಲ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಆಸಸ್ ಟ್ರಾನ್ಸ್‌ಫಾರ್ಮರ್ ಪ್ಯಾಡ್ TF701T

ಆಸಸ್ ಟ್ರಾನ್ಸ್‌ಫಾರ್ಮರ್ ಪ್ಯಾಡ್ TF701T

#5

ಆಸಸ್ ಟ್ರಾನ್ಸ್‌ಫಾರ್ಮರ್ ಪ್ಯಾಡ್ TF701T ನಿವಿದಾ ಟೆಗ್ರಾ 4 ಕ್ವಾಡ್-ಕೋರ್ ಪ್ರೊಸೆಸರ್ ಹಾಗೂ ಆಕರ್ಷಕ 10.1-ಇಂಚಿನ 2560 x 1600 ಪಿಕ್ಸೆಲ್-ಬೆಂಬಲಿತ IGZO IPS ಪರದೆಯೊಂದಿಗೆ ಅತ್ಯುತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot