ಮಕ್ಕಳ ಪ್ರೊಜೆಕ್ಟ್‌ಗೆ ಸಹಕಾರಿಯಗಬಲ್ಲ ಗ್ಯಾಜೆಟ್‌ಗಳು

Posted By:

ಶಾಲೆಗಳು ಆರಂಭಗೊಂಡದ್ದೆ ತಡ ವಿದ್ಯಾರ್ಥಿ‌ಗಳಿಗೆ ಪ್ರೊಜೆಕ್ಟ್‌ ವರ್ಕ್‌ಗಳ ಲೋಡ್‌ ಹೆಚ್ಚಾಗುತ್ತಿದೆ.ಹೀಗಾಗಿ ಗಿಝ್‌ಬಾಟ್‌ ಇಂದು ವಿದ್ಯಾರ್ಥಿ‌ಗಳ ಪ್ರೊಜೆಕ್ಟ್‌ ವರ್ಕ್‌ಗೆ ಸಹಕಾರಿಯಾಗಬಲ್ಲ ಕೆಲವು ಗ್ಯಾಜೆಟ್‌ಗಳ ಮಾಹಿತಿಯನ್ನು ತಂದಿದೆ. ಈ ಗ್ಯಾಜೆಟ್‌ಗಳು ಹೇಗೆ ವಿದ್ಯಾರ್ಥಿ‌ಗಳ ಪ್ರೊಜೆಕ್ಟ್‌ಗೆ ಸಹಕಾರಿಯಾಗುತ್ತದೆ ಎಂಬುದನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಪಿ ಪ್ರಿಂಟರ್‍

ಎಚ್‌ಪಿ ಪ್ರಿಂಟರ್‍

ಎಚ್‌ಪಿ ಪ್ರಿಂಟರ್‍

ಪ್ರೊಜೆಕ್ಟ್‌ ಮಾಡುವ ವಿದ್ಯಾರ್ಥಿಗಳ ಮನೆಯಲ್ಲಿ ಒಂದು ಪ್ರಿಂಟರ್‌ ಇದ್ದರೆ ಒಳ್ಳೆಯದು. ಹೀಗಾಗಿ ಬಹಳಷ್ಟು ಜನ ಇಂದಿಗೂ ಎಚ್‌ಪಿ ಕಂಪೆನಿಯ ಪ್ರಿಂಟರ್‌‌ಗಳನ್ನೇ ಮನೆಯಲ್ಲಿ ತಮ್ಮ ಖಾಸಗಿ ಬಳಕೆಗೆ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೂರು ಸಾವಿರದಿಂದ ಆರಂಭವಾಗಿ ಸುಮಾರು 15 ಸಾವಿರದೊಳಗಿನ ಎಚ್‌ಪಿ ಪ್ರಿಂಟರ್‌ಗಳು ಲಭ್ಯವಿದೆ. ಇವುಗಳಲ್ಲಿ ಒಂದನ್ನು ಖರೀದಿಸಿದಲ್ಲಿ ಮಕ್ಕಳ ಪ್ರೊಜೆಕ್ಟ್‌ ಜೊತೆಗೆ ಪೋಷಕರ ಆಫೀಸ್‌ ಕೆಲಸಗಳು ಸುಲಭವಾಗುವುದರಲ್ಲಿ ಸಂದೇಹವಿಲ್ಲ.

ಎಚ್‌ಪಿ ಪೆವಿಲಿಯನ್ 23

ಎಚ್‌ಪಿ ಪೆವಿಲಿಯನ್ 23

ಎಚ್‌ಪಿ ಪೆವಿಲಿಯನ್ 23

ವಿಶೇಷತೆ:
23 ಇಂಚಿನ ಎಚ್‌ಡಿ ಸ್ಕ್ರೀನ್(1920 x 1080ಪಿಕ್ಸೆಲ್‌)
1 GB DDR3 ಗ್ರಾಫಿಕ್ಸ್‌ ಮೆಮೋರಿ
ವೆಬ್‌ ಕ್ಯಾಮ್‌
ವಿಂಡೋಸ್‌ 8 ಓಎಸ್
4 GB DDR3 RAM
500 GB ಹಾರ್ಡ್‌ಡ್ರೈವ್‌
3.3 GHz ಕೋರ್‌ i3 ಪ್ರೊಸೆಸರ್‍
ವೈಫೈಸ್ಪೀಕರ್‌‌,ವೈರ್‌ಲೆಸ್‌ ಕೀ ಬೋರ್ಡ್‌,ಅಪ್ಟಿಕಲ್‌ ಮೌಸ್‌
ಬೆಲೆ : 39,990

ಪೆನ್‌ಡ್ರೈವ್‌

ಪೆನ್‌ಡ್ರೈವ್‌

ಪೆನ್‌ಡ್ರೈವ್‌

ಮೊಬೈಲ್‌ ಹೇಗೆ ನಮಗೆ ಇಂದು ಮುಖ್ಯವೋ ಅದೇ ರೀತಿಯಾಗಿ ಮಕ್ಕಳಿಗೆ ಇಂದು ಪೆನ್‌ಡ್ರೈವ್‌ ಮುಖ್ಯ. ಪೆನ್‌ ಡ್ರೈವ್‌ ಮಕ್ಕಳಲ್ಲೇ ಇದ್ದರೆ ಸುಲಭವಾಗಿ ಅವರ ಪ್ರೊಜೆಕ್ಟ್‌ಗಳನ್ನು ಸಂಗ್ರಹ ಮಾಡಬಹುದು.

ಮ್ಯೂಸಿಕ್‌ ಪ್ಲೇಯರ್‌:

ಮ್ಯೂಸಿಕ್‌ ಪ್ಲೇಯರ್‌:

ಮ್ಯೂಸಿಕ್‌ ಪ್ಲೇಯರ್‌:

ಮ್ಯೂಸಿಕ್‌ ಪ್ಲೇಯರ್‌ ಮಕ್ಕಳಿಗೆ ಯಾಕೆ ಎಂದು ನೀವು ಕೇಳಬಹುದು. ಇಂದಿನ ಜಂಜಾಟದ ಸಮಯದಲ್ಲಿ ಪೋಷಕರಿಗೆ ಮಕ್ಕಳಿಗೆ ಕಥೆ, ಪದ್ಯ ಹೇಳಲು ಸಾಧ್ಯವಿಲ್ಲ. ಹೀಗಾಗಿ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಮ್ಯೂಸಿಕ್‌ ಪ್ಲೇಯರ್‌ಗಳಲ್ಲಿ ಪ್ರೊಜೆಕ್ಟ್‌ ಮಾಹಿತಿಯನ್ನು ರೆಕಾರ್ಡ್‌ ಮಾಡಿಕೊಂಡು ಪುನ: ಕೇಳಲು ಸಾಧ್ಯವಿದೆ. ಜೊತೆಗೆ ಕಥೆ, ಸಂಗೀತಾಗಳನ್ನು ಕೇಳಿಸಿದ್ದಲ್ಲಿ ಮಕ್ಕಳ ಭವಿಷ್ಯದ ಏಳಿಗೆಗೂ ಸಹಾಯವಾಗಬಹುದು.

ಸ್ಮಾರ್ಟ್‌ ಟಿವಿ:

ಸ್ಮಾರ್ಟ್‌ ಟಿವಿ:

ಸ್ಮಾರ್ಟ್‌ ಟಿವಿ:

ಸ್ಮಾರ್ಟ್‌ ಟಿವಿ ದುಬಾರಿಯಾದ್ರೂ ಇದರಿಂದ ತುಂಬಾ ಲಾಭವಿದೆ. ಈ ಟಿವಿ ಇದ್ದಲ್ಲಿ ದೂರದಲ್ಲಿ ಕುಳಿತ ಅಧ್ಯಾಪಕರಿಂದ ಇಂಟರ್‌ನೆಟ್‌ ಮೂಲಕ ಪಾಠ ಕೇಳಬಹುದು. ಈ ಸ್ಮಾರ್ಟ್‌ ಟಿವಿಯಲ್ಲಿ ವಿವಿಧ ಬುದ್ದಿ ಸಾಮರ್ಥ್ಯ‌ವನ್ನು ಹೆಚ್ಚಿಸುವ ಗೇಮ್ಸ್‌ ಅಪ್ಲಿಕೇಶನ್‌,ಸೃಜನಶೀಲತೆ ಕಲೆಯನ್ನು ಹೆಚ್ಚಿಸುವ ಆಪ್ಸ್‌ಗಳನ್ನು ಡೌನ್‌ಲೋಡ್‌ ಮಾಡಿ ಮಕ್ಕಳ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot