ಜಗತ್ತಿನ ಟಾಪ್ 5 ಖ್ಯಾತ ಬ್ರೌಸರ್ ಗಳು ಯಾವುವು?

Posted By: Varun
ಜಗತ್ತಿನ ಟಾಪ್ 5 ಖ್ಯಾತ ಬ್ರೌಸರ್ ಗಳು ಯಾವುವು?

ಇಂಟರ್ನೆಟ್ ನಲ್ಲಿ ಎನನ್ನು ಹುಡುಕಬೇಕಾದರೂ ಅದಕ್ಕೆ ಬ್ರೌಸರ್ ಬೇಕೇ ಬೇಕು. ನಿಮ್ಮ ಮನೆ ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಅಷ್ಟೇ ಏಕೆ ಸ್ಮಾರ್ಟ್ ಫೋನಿನಲ್ಲೂ ಇಂಟರ್ನೆಟ್ ಅನ್ನು ಬ್ರೌಸ್ ಮಾಡಲು ವೆಬ್ ಬ್ರೌಸರ್ ಗಳು ಬೇಕೇ ಬೇಕು.

ಮೊದಲೆಲ್ಲಾ ಕೇವಲ ಇಂಟರ್ನೆಟ್ ಎಕ್ಸ್ಪ್ಲೋರರ್ ಹಾಗು ನೆಟ್ ಸ್ಕೇಪ್ ಮಾತ್ರ ಇತ್ತು. ಕಾಲಾನಂತರ ಬರಿ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ಪ್ಲೋರರ್ ಮಾತ್ರ ಉಳಿದುಕೊಂಡಿತ್ತು.

ಆದರೆ ಕೆಲವು ವರ್ಷಗಳ ಹಿಂದೆ ಗೂಗಲ್ ನ ಕ್ರೋಮ್, ಆಪಲ್ ನ ಸಫಾರಿ, ಮೊಜಿಲ್ಲಾದ ಫೈರ್ ಫಾಕ್ಸ್ ಹಾಗು ಆಪ್ರಾ ಬ್ರೌಸರ್ ಗಳು ಬಂದಿವೆ. ಇದರಿಂದಾಗಿ ಹಲವಾರು ಉತ್ತಮ ಫೀಚರುಗಳನ್ನು ಬ್ರೌಸರ್ ಗಳು ಒಳಗೊಂಡಿದ್ದು, ಈಗ ಸ್ಟಾಟ್ ಕೌಂಟರ್ ಎಂಬ ಸಂಸ್ಥೆಯ ವರದಿಯ ಪ್ರಕಾರ ಇಲ್ಲಿವೆ ಟಾಪ್ 5 ವೆಬ್ ಬ್ರೌಸರ್ ಗಳ ಪಟ್ಟಿ:

#5 ರಲ್ಲಿ ಆಪ್ರಾ (Opera)

ಬಹುತೇಕ ಸ್ಮಾರ್ಟ್ ಫೋನು ಹಾಗು ಟ್ಯಾಬ್ಲೆಟ್ ಗಳಲ್ಲಿ ಉಪಯೋಗಿಸಲ್ಪಡುವ ಈ ವೆಬ್ ಬ್ರೌಸರ್ ಡೆಸ್ಕ್ಟಾಪ್ ನಲ್ಲಿ ಅಷ್ಟು ಫೇಮಸ್ ಆಗಿಲ್ಲ.

#4 ರಲ್ಲಿ ಸಫಾರಿ

ಆಪಲ್ ನ ಸ್ವಂತ ಬ್ರೌಸರ್ ಆದ ಇದು ಮ್ಯಾಕ್ ಕಂಪ್ಯೂಟರ್, ಐಫೋನ್ ಹಾಗು ಐಪ್ಯಾಡ್ ಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದ್ದು, ಒಟ್ಟಾರೆ 7.12 % ಮಾರುಕಟ್ಟೆ ಪಾಲು ಹೊಂದಿದೆ.

#3 ರಲ್ಲಿ ಫೈರ್ ಫಾಕ್ಸ್

ಮೊಜಿಲ್ಲಾ ಕಂಪನಿಯ ಫೈರ್ ಫಾಕ್ಸ್ 3 ನೆ ಸ್ಥಾನದಲ್ಲಿದ್ದು, 23.73 % ಪಾಲು ಹೊಂದಿದೆ. ಇತ್ತೀಚೆಗೆ ತಾನೇ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಮೀರಿಸಿರುವ ಇದು ತನ್ನ ಪ್ಲಗ್ ಇನ್ ಹಾಗು ಆಡ್ ಆನ್ ಗಳಿಗೆ ಫೇಮಸ್

#2 ರಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್

ದಿನ ಕ್ರಮೇಣ ತನ್ನ ಖ್ಯಾತಿಯನ್ನು ಕಳೆದುಕೊಳ್ಳುತ್ತಿರುವ ಅದು ಈಗ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಸದ್ಯಕ್ಕೆ 32 % ಪಾಲು ಹೊಂದಿದೆ.

#1 ನಲ್ಲಿ ಗೂಗಲ್ ಕ್ರೋಮ್

ಬಿಡುಗಡೆಯಾದ 5 ವರ್ಷದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿರುವ ಕ್ರೋಮ್ ಕೂಲ್ ಹಾಗು ಫಾಸ್ಟ್ ಆದ ಬ್ರೌಸಿಂಗ್ ನಿಂದ ಜನಪ್ರಿಯಗೊಂಡಿದ್ದು ಸದ್ಯಕ್ಕೆ 33 % ಪಾಲು ಹೊಂದಿದೆ.

 

ಅಂದಹಾಗೆ ನೀವು ಉಪಯೋಗಿಸುತ್ತಿರುವ ಬ್ರೌಸರ್ ಬಗ್ಗೆ ನಮಗೆ ತಿಳಿಸಿ ಪ್ಲೀಜ್.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot