ಉಚಿತ sms ಕಳುಹಿಸಲು 5 ವೆಬ್ಸೈಟ್

By Varun
|

ಉಚಿತ sms ಕಳುಹಿಸಲು 5 ವೆಬ್ಸೈಟ್
ಕೇಂದ್ರ ಸರ್ಕಾರ ದಿನಕ್ಕೆ 5 sms ನಿರ್ಬಂಧ ಹೇರಿರುವುದರಿಂದ ಅದು ಹೇಗೆ ದಿನಕ್ಕೆ ಕೇವಲ 5 ಮೆಸೇಜ್ ಮಾತ್ರ ಕಳುಹಿಸಲು ಸಾಧ್ಯ ಅಂತಾ ಹಲವಾರು ಪ್ರಶ್ನಿಸುತ್ತಿದ್ದಾರೆ.

ಪಾಕಿಸ್ತಾನದ ಕಿಡಿಗೇಡಿಗಳು ಮಾಡಿರುವ ಈ ಕೃತ್ಯಕ್ಕೆ ಭಾರತದ ಜನ ಏನು ಮಾಡುವುದಕ್ಕೆ ಸಾಧ್ಯ ಹೇಳಿ. ಪಕ್ಕದ ದೇಶಕ್ಕೆ ಎಚ್ಚರಿಕೆ ಕೊಡುವುದನ್ನು ಬಿಟ್ಟು, ಪ್ರೀತಿಯಿಂದ ಈ ಥರ ಮಾಡ್ಬೇಡಿ ಪ್ಲೀಜ್ ಅಂತ ಗಿಣಿಗೆ ಹೇಳೋ ಥರ ಹೇಳಿದರೆ ಕೇಳೋಕ್ಕೆ ಪಾಕ್ ಗಿಣಿ ವೇಷದಲ್ಲಿರೋ ರಣಹದ್ದು ಅಂತಾ ಗೊತ್ತಿದ್ರೂ ನಮ್ಮ ಕೇಂದ್ರ ಒಲೈಸುತ್ತಿದೆ.

ಹೀಗಾಗಿ ಕೇಂದ್ರಕ್ಕೆ ಶಾಪ ಹಾಕೋದು ಬಿಟ್ಟು ಇನ್ನೇನು ಮಾಡಬೇಕು ಅಂತಾ ಯೋಚಿಸುತ್ತಿರುವಾಗಲೇ ಐಡಿಯಾ ಒಂದು ಹೊಳೆಯಿತು. ಅದೆಂದರೆ ಆಫೀಸಿನಲ್ಲಿ ಹೇಗಿದ್ದರೂ ಇಂಟರ್ನೆಟ್ ಇರುತ್ತೆ, ಕೆಲವರ ಮನೆಯಲ್ಲಿ ಕೂಡಾ ಇಂಟರ್ನೆಟ್ ಇರೋದ್ರಿಂದ ಉಚಿತ sms ಕಳುಹಿಸುವ ವೆಬ್ಸೈಟುಗಳು ಇದ್ದು ಅವುಗಳ ಮೂಲಕ ಯಾಕೆ sms ಕಳುಹಿಸಬಾರದು ಅಂತ ಐಡಿಯಾ ಬಂತು.

ಹಾಗಾಗಿಟಾಪ್ 5 ಉಚಿತ sms ಮಾಡುವ ವೆಬ್ಸೈಟುಗಳನ್ನು ನಿಮಗಾಗಿ ಕೊಡಲಾಗುತ್ತಿದ್ದು, ನಿಮ್ಮ ಮೊಬೈಲ್ ನ 5 sms ಅನ್ನು ತುರ್ತು ಪರಿಸ್ಥಿತಿಗೆ ಮಾತ್ರ ಇಟ್ಟುಕೊಂಡು, ಉಳಿದ ವೇಳೆ ಈ ವೆಬ್ಸೈಟ್ ಗಳ ಮೂಲಕ ಖಾತೆ ತೆರೆದು ಎಷ್ಟು ಬೇಕಾದರೂ ಅಷ್ಟು sms ಗಳನ್ನು ಉಚಿತವಾಗಿ ಕಳುಹಿಸಬಹುದು.

1)way2sms.com

2)site2sms.com

3)160by2.com

4)youmint.com

5)indyarocks.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X