15 ಸಾವಿರಕ್ಕೆ ಭಾರತದ ಟಾಪ್ 5 ಬಜೆಟ್ ಟ್ಯಾಬ್ಲೆಟ್

By Varun
|
15 ಸಾವಿರಕ್ಕೆ ಭಾರತದ ಟಾಪ್ 5 ಬಜೆಟ್ ಟ್ಯಾಬ್ಲೆಟ್

ನಿಮಗೆ ಹೊಸದಾಗಿ ಟ್ಯಾಬ್ಲೆಟ್ ಕೊಳ್ಳುವ ಯೋಚನೆ ಇದ್ದು ಉತ್ತಮ ಕಡಿಮೆ ಬಜೆಟ್ ಟ್ಯಾಬ್ಲೆಟ್ ಗಾಗಿ ತಲೆ ಕೆಡಿಸಿಕೊಂಡಿದ್ದರೆ ಇಲ್ಲಿದೆ ನೋಡಿ ನಮ್ಮ ಪಟ್ಟಿ.

1. ಅಮೇಜಾನ್ ಕಿಂಡಲ್ ಫೈರ್- ಡ್ಯುಯಲ್ಕೋರ್ ಪ್ರೋಸೆಸರ್, 7 ಇಂಚ್ ಐ.ಪಿ.ಎಸ್ ಪರದೆ, ಈ-ಬುಕ್ ರೀಡರ್ ಮತ್ತು ಈ-ಮೇಲ್ ಸೌಲಭ್ಯ ಹೊಂದಿದ್ದು ಆನ್ಡ್ರೋಯ್ಡ್ 2.3 ಓ.ಎಸ್ ಇದೆ. ಇದರ ಬೆಲೆ 13,900 ರೂಪಾಯಿ.

2. ಬ್ಲಾಕ್ಬೆರಿ ಪ್ಲೇ ಬುಕ್ - 7ಇಂಚ್ ಪರದೆ, 1 ಗಿಗಾ ಹರ್ಟ್ಜ್ ಡ್ಯುಯಲ್ಕೋರ್ ಪ್ರೋಸೆಸರ್, 1 ಜಿ.ಬಿ ರಾಮ್, ಬ್ಲಾಕ್ಬೆರಿ ಓ.ಎಸ್ ನ ಶಕ್ತಿ ಇದ್ದು, ಆರಾಮಾಗಿ ಕೊಂಡೊಯ್ಯಬಹುದಾದ ಡಿಸೈನ್ ಹೊಂದಿದೆ. ಇದರ ಬೆಲೆ 13,490 ರೂಪಾಯಿ.

3. ರಿಲಿಯನ್ಸ್ 3ಜಿ ಟ್ಯಾಬ್- ರಿಲಿಯನ್ಸ್ ಈ ಟ್ಯಾಬ್ಲೆಟ್ ನ ಬಿಡುಗಡೆ ಮಾಡಿದ ಮೇಲೆ ಇತರ ಕಂಪನಿಗಳು ತಮ್ಮ ಟ್ಯಾಬ್ ನ ಬೆಲೆ ಇಳಿಸುವಂತಾಯ್ತು. ಗೇಮಿಂಗ್ ಮತ್ತು ಮಲ್ಟಿಮೀಡಿಯ ಜೊತೆಗೆ ಉತ್ತಮ ಬ್ಯಾಟರಿ ಹೊಂದಿದ್ದು ಆನ್ಡ್ರೋಯ್ಡ್ 2.3 ಓ.ಎಸ್ ನ ಶಕ್ತಿ ಇದೆ. 12,999 ರೂಪಾಯಿಗೆ ಇದು ಲಭ್ಯವಿದೆ.

4. ಐ- ಬಾಲ್ ಸ್ಲೈಡ್ - 1 ಗಿಗಾ ಹರ್ಟ್ಜ್ ಕಾರ್ಟೆಕ್ಸ್ ಪ್ರೋಸೆಸರ್ ನ ಇದು ಆನ್ಡ್ರೋಯ್ಡ್ ಪ್ರೋಸೆಸರ್ ಗಿಂತ ಉತ್ತಮ ದಕ್ಷತೆ ಹೊಂದಿದ್ದು , 8 ಜಿ.ಬಿ ಆಂತರಿಕ ಮೆಮೊರಿ, 7 ಇಂಚ್ ಪರದೆ, ಮೈಕ್ರೋ ಎಸ್ಡಿ ಸ್ಲಾಟ್ ಮತ್ತು ಯೂ.ಎಸ್.ಬಿ ಜೊತೆ ಗೆ ಬರಲಿದೆ. ಇದರ ಬೆಲೆ 13,995 ರೂಪಾಯಿ.

5. ಸಾಮ್ ಸಂಗ್ ಟ್ಯಾಬ್ P1010- ಆನ್ಡ್ರೋಯ್ಡ್ 2.2 ಪ್ರೋಸೆಸರ್, 7ಇಂಚ್ ಪರದೆ, 1 ಗಿಗಾ ಹರ್ಟ್ಜ್ ಸಿಂಗಲ್ ಕೋರ್ ಪ್ರೋಸೆಸರ್ ಜೊತೆಗೆ 16 ಜಿ.ಬಿ ಆಂತರಿಕ ಮೆಮೊರಿ ಹೊಂದಿದೆ. ಟಚ್ವಿಜ್ ಯೂಸರ್ ಇಂಟರ್ಫೇಸ್ ಕೂಡ ಇದರಲ್ಲಿ ಇದ್ದು ಆನ್ಡ್ರೋಯ್ಡ್ ನ ಕಾರ್ಯದಕ್ಷತೆ ಮತ್ತಷ್ಟು ಹೆಚ್ಚಿಸಲಿದೆ. ಇದರ ಬೆಲೆ 14000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X