ತೋಷಿಬಾ ಡೈನಾಬುಕ್ ಲ್ಯಾಪ್ ಟಾಪ್ ಗೆ ಸ್ವಾಗತ

Posted By: Staff

ತೋಷಿಬಾ ಡೈನಾಬುಕ್ ಲ್ಯಾಪ್ ಟಾಪ್ ಗೆ ಸ್ವಾಗತ
ಹೈಫೈ ಉತ್ಪನ್ನಗಳನ್ನು ಹೊರತರುವಲ್ಲಿ ತೋಷಿಬಾ ಯಾವತ್ತೂ ಮುಂದು. ಕಂಪನಿಯ ಇತ್ತೀಚಿನ ಉತ್ಪನ್ನದ ಹೆಸರು Toshiba Dynabook R731. ಈಗಾಗಲೇ ಈ ಲ್ಯಾಪ್ ಟಾಪ್ ಜಪಾನಿನಲ್ಲಿ ಬಿಡುಗಡೆಯಾಗಿದ್ದು, ದೇಶಕ್ಕೂ ಶೀಘ್ರದಲ್ಲಿ ಆಗಮಿಸುವ ಸೂಚನೆ ದೊರಕಿದೆ.

ಡೈನಾಬುಕ್ ಲ್ಯಾಪ್ ಟಾಪ್ ನಾಲ್ಕು ವಿಭಿನ್ನ ಆವೃತ್ತಿಗಳಲ್ಲಿ ಆಗಮಿಸಿದೆ. ಅಂದರೆ ತೊಷಿಬಾ ಡೈನಾಬುಕ್ R731/39B, ಡೈನಾಬುಕ್ R731/37B, 36B ಮತ್ತು 16B ಆವೃತ್ತಿಗಳು ದೊರಕುತ್ತಿವೆ.

ತೋಷಿಬಾ ಡೈನಾಬುಕ್ ಆರ್731 ಲ್ಯಾಪ್ ಟಾಪ್ ವಿಂಡೋಸ್ ಆಂಡ್ ಪ್ರೊಫೆಷನಲ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದು 2.50 ಗಿಗಾಹರ್ಟ್ಸ್ ನ ಇಂಟೆಲ್ ಕೋರ್ ಐ5-2520 ಎಂ ಪ್ರೊಸೆಸರ್ ಹೊಂದಿದೆ.

ತೋಷಿಬಾ ಡೈನಾಬುಕ್ ಆರ್231 ಲ್ಯಾಪ್ ಟಾಪ್ 4 ಜಿಬಿಯ RAM ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ಪರಿಷ್ಕೃತ ಡಿವಿಡಿ ಬರ್ನರ್ ಕೂಡ ಹೊಂದಿದೆ. ಡೈನಾಬುಕ್ ವಿನ್ಯಾಸ ಆಕರ್ಷಕವಾಗಿದ್ದು ಗಮನ ಸೆಳೆಯುತ್ತದೆ.

ತೋಷಿಬಾ ಲ್ಯಾಪ್ ಟಾಫ್ ಗಳು ಯಾವತ್ತೂ ಅತ್ಯಧಿಕ ಸುರಕ್ಷತೆಯ ಫೀಚರುಗಳೊಂದಿಗೆ ಬರುತ್ತವೆ. ಈ ಲ್ಯಾಪ್ ಟಾಪ್ ಕೂಡ ಟಿಪಿಎಂ ಎಂಬ ಸುರಕ್ಷತಾ ಅಪ್ಲಿಕೇಷನ್ ಹೊಂದಿದೆ.

ಈ ಲ್ಯಾಪ್ ಟಾಪ್ 13.3 ಇಂಚಿನ ವಿಶಾಲವಾದ ಎಲ್ ಇಡಿ ಡಿಸ್ ಪ್ಲೇ ಹೊಂದಿದೆ. ಇದರ ಫಿಕ್ಸೆಲ್ ರೆಸಲ್ಯೂಷನ್ 1366x268 ಫಿಕ್ಸೆಲ್ ಆಗಿದೆ. ಈ ನೋಟ್ ಬುಕ್ ವೈಫೈ, ಬ್ಲೂಟೂಥ್ ಕನೆಕ್ಟಿವಿಟಿ ಮುಂತಾದ ಫೀಚರುಗಳನ್ನು ಹೊಂದಿದೆ. ಯುಎಸ್ ಬಿ 3.0 ಮತ್ತು ಎರಡು ಯುಎಸ್ ಬಿ 2.0 ಫೋರ್ಟ್ ಜೊತೆಗಿದೆ.

ಈ ಲ್ಯಾಪ್ ಟಾಪ್ ಎಸ್ ಡಿಎಕ್ಸ್ ಸಿ ಮೆಮೊರಿ ಕಾರ್ಡ್ ಗೆ ಬೆಂಬಲ ನೀಡುತ್ತದೆ. ಗಿಗಾಬೈಟ್ ಎಥರ್ನೆಟ್, ಎಚ್ ಡಿಎಂಐ ಔಟ್ ಪುಟ್, ಡಿ ಸಬ್ ಕೂಡ ಇದರಲ್ಲಿದೆ. ಈ ಲ್ಯಾಪ್ ಟಾಪ್ ತೂಕ ಕೇವಲ 1.44 ಕೆ.ಜಿ. ತೋಷಿಬಾ ಡೈನಾಬುಕ್ ಆರ್731 ದರ ಸುಮಾರು 45 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot