Subscribe to Gizbot

ತೋಶಿಬಾ ಎಕ್ಸೈಟ್ 13 ಇಂಚ್ ಆಂಡ್ರಾಯ್ಡ್ ಟ್ಯಾಬ್ಲೆಟ್

Posted By: Varun
ತೋಶಿಬಾ ಎಕ್ಸೈಟ್ 13 ಇಂಚ್ ಆಂಡ್ರಾಯ್ಡ್ ಟ್ಯಾಬ್ಲೆಟ್

ಜಪಾನಿನ ಖ್ಯಾತ ಲ್ಯಾಪ್ಟಾಪ್ ಕಂಪನಿ ತೋಶಿಬಾ,ಜೂನ್ 10 ಕ್ಕೆ ಅಮೆರಿಕಾದಲ್ಲಿ ಬಿಡುಗಡೆಯಾದ 13 ಇಂಚ್ ನ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ತೋಶಿಬಾ ಎಕ್ಸೈಟ್ 13ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.

ತೋಶಿಬಾ ಕಂಪನಿಯ ಈ ಟ್ಯಾಬ್ಲೆಟ್ ಡೆಸ್ಕ್ಟಾಪ್ ನಂತೆ ಶಕ್ತಿಯುತವಾದ ಸ್ಪೆಸಿಫಿಕೇಶನ್ ಹೊಂದಿದೆ. ಸಾಮಾನ್ಯವಾಗಿ 7 ಇಂಚ್ ಇರುವ ಟ್ಯಾಬ್ಲೆಟ್ ಸ್ಕ್ರೀನ್ ಅನ್ನು ದೊಡ್ಡದು ಮಾಡಿ ಆಂಡ್ರಾಯ್ಡ್ 4.0 ತಂತ್ರಾಂಶದ ಜೊತೆಗೆ ಬಿಡುಗಡೆಯಾಗಿರುವ ಈ ಟ್ಯಾಬ್ಲೆಟ್ ಟೆಗ್ರಾ 3 ಪ್ರೋಸೆಸರ್ ಹೊಂದಿದೆ.

ಈ ತೋಶಿಬಾ ಎಕ್ಸೈಟ್ 13 ಟ್ಯಾಬ್ಲೆಟ್ ಫೀಚರುಗಳು ಈ ರೀತಿ ಇವೆ:

  • 13 ಇಂಚ್ ವೈಡ್ ಸ್ಕ್ರೀನ್,ಕೆಪಾಸಿಟಿವ್ ಮಲ್ಟಿ ಟಚ್ ನೊಂದಿಗೆ

  • 1600 x 900 ರೆಸಲ್ಯೂಶನ್ ನೊಂದಿಗೆ

  • 1 GB ರಾಮ್

  • ಎನ್ವಿಡಿಯ ಕ್ವಾಡ್ ಕೋರ್ ಟೆಗ್ರಾ 3 ಪ್ರೋಸೆಸರ್

  • 5 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ

  • 2 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ

  • ಆಡಿಯೋ ಹಾಗು ವೀಡಿಯೋ ಪ್ಲೇಯರ್

  • ಬ್ಲೂಟೂತ್, USB,GPS,ಮೈಕ್ರೋ HDMI

  • ಫುಲ್ SD ಕಾರ್ಡ್

  • 9 ಗಂಟೆ ಬ್ಯಾಟರಿ ಬ್ಯಾಕಪ್
32 GB ಮೆಮೊರಿ ಇರುವ ಟ್ಯಾಬ್ಲೆಟ್ 32,500 ರೂಪಾಯಿಗೆ ಬರಲಿದ್ದು, 64 GB ಮೆಮೊರಿ ಟ್ಯಾಬ್ಲೆಟ್, 37,500 ಗೆ ಸಿಗಲಿದೆ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot