ತೋಷಿಬಾ ಲ್ಯಾಪ್ ಟಾಪ್ ನಲ್ಲಿ ಆಡೋಣ ಬಾ...

Posted By: Staff
ತೋಷಿಬಾ ಲ್ಯಾಪ್ ಟಾಪ್ ನಲ್ಲಿ ಆಡೋಣ ಬಾ...
ಟೆಕ್ ಲೋಕದಲ್ಲಿಂದು ಸಾಕಷ್ಟು ಗೇಮಿಂಗ್ ಲ್ಯಾಪ್ ಟಾಪ್ ಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ಲೆಕ್ಕಕ್ಕುಂಟು ಆಟಕ್ಕಿಲ್ಲ(!). ಯಾಕೆಂದರೆ ಅವುಗಳ ಬೃಹತ್ ಗಾತ್ರ, ದುಬಾರಿ ದರ ಗ್ರಾಹಕರಿಂದ ದೂರು ಉಳಿಯುವಂತೆ ಮಾಡಿದೆ.

ತೋಷಿಬಾ ಇತ್ತೀಚೆಗೆ ಪರಿಚಯಿಸಿದ ನೂತನ ಸ್ಯಾಟಲೈಟ್ ಪಿ755 ಗೇಮಿಂಗ್ ಲ್ಯಾಪ್ ಟಾಪ್ ನಲ್ಲಿ ಇಷ್ಟವಾಗುವ ಹಲವು ಫೀಚರುಗಳು ಮತ್ತು ವಿಶೇಷತೆಗಳಿವೆ.

Toshiba Satellite P755 ಫೀಚರು ಮತ್ತು ವಿಶೇಷತೆ

* ಇಂಟೆಲ್ ಕೋರ್ ಐ5-2410 ಎಂ ಪ್ರೊಸೆಸರ್

* ಆಕ್ಸೆಸ್ ವೇಗ 2.3 ಗಿಗಾ ಹರ್ಟ್ಸ್

* 6 ಜಿಬಿ RAM

* ಎನ್ವಿಡಿಯಾ ಜಿಫೋರ್ಸ್ 3410ಎಂ ಗ್ರಾಫಿಕ್ಸ್ ಕಾರ್ಡ್

* 15.6 ಇಂಚು ಡಿಸ್ ಪ್ಲೇ

* 1366 x 768 ಪಿಕ್ಸೆಲ್ ರೆಸಲ್ಯೂಷನ್ ಡಿಸ್ ಪ್ಲೇ

* ಫುಲ್ ಕೀಪ್ಯಾಡ್

* ಟಿ ರಾಕ್ ಪ್ಯಾಡ್

* ಬ್ಲೂರೆ ಡ್ರೈವ್

* ಎನ್ವಿಡಿಯಾ 3ಡಿ ವಿಷನ್

* ಹರ್ಮನ್ ಕಾರ್ಡೊನ್ ಸ್ಪೀಕರ್

* 2.6 ಕೆಜಿ ತೂಕ

Toshiba Satellite P755 ವಿನ್ಯಾಸವು ಪಿ770 ಲ್ಯಾಪ್ ಟಾಪ್ ನಂತೆ ಇದೆ. ಇದು ಸುಮಾರು 2.6 ಕೆಜಿ ತೂಕವಿರುವುದರಿಂದ ಸಾಗಾಟ ಸುಲಭ. ಆಕರ್ಷಕ ಗ್ರಾಫಿಕ್ಸ್ ಜೊತೆಗೆ ಕಪ್ಪು ಪ್ಲಾಸ್ಟಿಕ್ ಪ್ಯಾನೆಲ್ ಈ ಗೇಮಿಂಗ್ ಲ್ಯಾಪ್ ಟಾಪ್ ನ ಆಕರ್ಷಣೆ ಹೆಚ್ಚಿಸಿದೆ.

ಕೀ ಬೋರ್ಡ್ ನಲ್ಲಿರುವ ಕೀಲಿಗಳು ವಿಶಾಲವಾಗಿದ್ದು, ಆಟಕ್ಕೆ ಪೂರಕವಾಗಿದೆ. ಇದು ಅತ್ಯುತ್ತಮ ಕಂಪನಿಯ ಸ್ಪೀಕರ್ ಹೊಂದಿರುವುದರಿಂದ ಇದರ ಸೌಂಡ್ ಗುಣಮಟ್ಟದ ಕುರಿತು ಎರಡು ಮಾತಿಲ್ಲ. ಈ ಲ್ಯಾಪ್ ಟಾಪ್ ಸ್ಕ್ರೀನ್ ಹೈಡೆಫಿನೆಷನ್ ಗುಣಮಟ್ಟದಾಗಿದೆ. ಎನ್ವಿಡಿಯಾ 3ಡಿ ವಿಷನ್ ಸಪೋರ್ಟ್ಸ್ ಇರುವುದರಿಂದ 3ಡಿ ಚಿತ್ರಗಳನ್ನು ಮತ್ತು 3ಡಿ ಆಟಗಳನ್ನು ಆಡುವುದು ಅನನ್ಯ ಅನುಭವವಾಗುತ್ತದೆ.

ಇದರ ದರ ಸುಮಾರು 45 ಸಾವಿರ ರು. ಆಸುಪಾಸಿನಲ್ಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot