Subscribe to Gizbot

ತೋಷಿಬಾ ಬ್ಯೂಟಿ ಟ್ಯಾಬ್ಲೆಟ್ "ಎಕ್ಸೈಟ್" ಬರಲಿದೆ!!

Posted By: Staff
ತೋಷಿಬಾ ಬ್ಯೂಟಿ ಟ್ಯಾಬ್ಲೆಟ್
ಟ್ಯಾಬ್ಲೆಟ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಸಣ್ಣಗಾತ್ರ, ಹಗುರ, ಕಡಿಮೆ ದರ ಇತ್ಯಾದಿ ಫೀಚರುಗಳಿಂದ ಹೆಚ್ಚಿನ ಜನರು ಟ್ಯಾಬ್ಲೆಟ್ ಕಂಪ್ಯೂಟರ್ ಖರೀದಿಸುತ್ತಿದ್ದಾರೆ.

ತೋಷಿಬಾ ಕಂಪನಿಯು ನೂತನ ಎಕ್ಸೈಟ್ ಟ್ಯಾಬ್ಲೆಟ್ ಹೊರತರುವುದಾಗಿ ಪ್ರಕಟಿಸಿದೆ. ಈ ಟ್ಯಾಬ್ಲೆಟ್ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ. ಇದು ಹಗುರ ಮತ್ತು ಸಣ್ಣ ಟ್ಯಾಬ್ಲೆಟ್ ಎಂದು ಕಂಪನಿ ತಿಳಿಸಿದೆ.

ಫೀಚರ್ಸ್

* ಅಲ್ಟ್ರಾ ಕಾಂಪ್ಯಾಕ್ಟ್

* ಹಗುರ

* 10.1 ಇಂಚು ಸ್ಕ್ರೀನ್

* ಡ್ಯೂಯಲ್ ಕ್ಯಾಮರಾ

* ಎಚ್ ಡಿಎಂಐ ಪೋರ್ಟ್

* ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್

ತೋಷಿಬಾ ಎಕ್ಸೈಟ್ ಟ್ಯಾಬ್ಲೆಟ್ ಕ್ಯಾಂಡಿ ಬಾರ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಈ ಟ್ಯಾಬ್ಲೆಟ್ ತೂಕ 558 ಗ್ರಾಂ ಇದೆ. ಈ ಟ್ಯಾಬ್ಲೆಟ್ ಕಂಪ್ಯೂಟರ್ 1280 x 800 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಇದರಲ್ಲಿ ಲೈಟ್ ಸೆನ್ಸಾರ್ ಇರುವುದರಿಂದ ಪರಿಸರಕ್ಕೆ ಅನುಗುಣವಾಗಿ ಡಿಸ್ ಪ್ಲೇ ಲೈಟ್ ಕಂಡಿಷನ್ ಬದಲಾಗುತ್ತದೆಯಂತೆ.

ಈ ಟ್ಯಾಬ್ಲೆಟಿನಲ್ಲಿ ಎರಡು ಕ್ಯಾಮರಾ ಇರಲಿದೆ. ಮುಖ್ಯ ಕ್ಯಾಮರಾ 5 ಮೆಗಾಫಿಕ್ಸೆಲ್ ಇರಲಿದ್ದು ಮುಂಭಾಗದಲ್ಲಿ ಇರಲಿದೆ. ಮತ್ತೊಂದು 2 ಮೆಗಾ ಫಿಕ್ಸೆಲ್ ಕ್ಯಾಮರಾ ಇದೆ. ಇದರಿಂದ ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ. ಈ ಟ್ಯಾಬ್ಲೆಟ್ TI OMAP 4430 ಪ್ರೊಸೆಸರ್ ಹೊಂದಿರಲಿದೆ.

ಈ ಟ್ಯಾಬ್ಲೆಟ್ ಸಿಸ್ಟಮ್ ಮೆಮೊರಿ 1,024 ಎಂಬಿ. ಈ ಟ್ಯಾಬ್ಲೆಟ್ ಎರಡು ಆಂತರಿಕ ಮೆಮೊರಿ ಗಾತ್ರದಲ್ಲಿ ದೊರಕಲಿದೆಯಂತೆ. ಅಂದರೆ 16 ಜಿಬಿ ಅಥವಾ 32 ಜಿಬಿ ಆವೃತ್ತಿ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಟ್ಯಾಬ್ಲೆಟ್ ಕಂಪ್ಯೂಟರ್ ಆಂಡ್ರಾಯ್ಡ್ 3.2 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಇದರಲ್ಲಿ ವೈಫೈ, ಯುಎಸ್ ಬಿ ಕನೆಕ್ಟಿವಿಟಿ, ಬ್ಲೂಟೂಥ್ ಮುಂತಾದ ಫೀಚರುಗಳು ಇರಲಿದೆ. ಈ ಟ್ಯಾಬ್ಲೆಟ್ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot