ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ

Posted By:

ವಿಶ್ವದ ಮೊದಲ ಪಾರದರ್ಶಕ ಡ್ಯುಯಲ್‌ ಸ್ಕ್ರೀನ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ನ್ನು ಕಂಪೆನಿಯೊಂದು ಅಭಿವೃದ್ಧಿ ಪಡಿಸಿದೆ. ಅಮೆರಿಕದ ಗ್ರಿಪ್ಪಿಟ್ಟಿ(Grippity) ಕಂಪೆನಿ ಹೊಸ ವಿನ್ಯಾಸದ ಟ್ಯಾಬ್ಲೆಟ್‌ ಮಾದರಿಯನ್ನು ತಯಾರಿಸಿದ್ದು ಅಕ್ಟೋಬರ್‌‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಟ್ಯಾಬ್ಲೆಟ್ Semi-Transparent 7 ಇಂಚಿನ ಎಲ್‌ಸಿಡಿ ಡಿಸ್ಪ್ಲೇ(1024X600 ಪಿಕ್ಸೆಲ್‌‌) ಹೊಂದಿದ್ದು ಕಾರ್ಟೆಕ್ಸ್‌ ಎ8 ಪ್ರೊಸೆಸರ್‌,ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌ ಒಳಗೊಂಡಿದೆ.

ಈ ಟ್ಯಾಬ್ಲೆಟ್‌‌ ಕೇವಲ ಟ್ಯಾಬ್ಲೆಟ್‌ ಒಂದೇ ಆಗಿರದೇ ರಿಮೋಟ್‌ ಕಂಟ್ರೋಲ್‌‌,ಗೇಮ್‌ ಕಂಟ್ರೋಲ್‌,ಮೀಡಿಯಾ ಸೆಂಟರ್‌ ಕೀಬೋರ್ಡ್ ಆಗಿಯೂ ಬಳಸಬಹುದಾಗಿದೆ. ಅಷ್ಟೇ ಅಲ್ಲದೇ ಎರಡು ಕಡೆಯೂ ಹತ್ತು ಕೈ ಬೆರಳುಗಳನ್ನು ಬಳಸಿ ಟ್ಯಾಬ್ಲೆಟ್‌ನಲ್ಲಿ ಕೆಲಸ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.ಈ ಟ್ಯಾಬ್ಲೆಟ್‌ಗೆ 235 ಡಾಲರ್‌(ಅಂದಾಜು ಬೆಲೆ 14,500 ರೂಪಾಯಿ) ಕಂಪೆನಿ ನಿಗದಿ ಮಾಡಿದೆ.

ಗ್ರಿಪ್ಪಿಟ್ಟಿ ಪಾರದರ್ಶಕ ಟ್ಯಾಬ್ಲೆಟ್‌
ವಿಶೇಷತೆ:
Semi-Transparent 7 ಇಂಚಿನ ಎಲ್‌ಸಿಡಿ ಡಿಸ್ಪ್ಲೇ(1024X600 ಪಿಕ್ಸೆಲ್‌‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
ಕಾರ್ಟೆಕ್ಸ್‌ ಎ9 ಕ್ವಾಡ್‌ ಕೋರ್‌ ಪ್ರೊಸೆಸರ್‌
1ಜಿಬಿ ರ್‍ಯಾಮ್‌
ಟಿವಿ ಮತ್ತು ಡಿವಿಡಿ ಕಂಟ್ರೋಲ್‌ ಮಾಡಲು ಐ ಆರ್‌ ಟ್ರಾನ್ಸಿಮಿಟರ್‌
8ಜಿಬಿ ಆಂತರಿಕ ಮೆಮೊರಿ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌
2400 mAh ಲಿಯಾನ್‌ ಬ್ಯಾಟರಿ


ಮುಂದಿನ ಪುಟದಲ್ಲಿ ಪಾರದರ್ಶಕ ಟ್ಯಾಬ್ಲೆಟ್‌ ಹೇಗಿದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸುವ ಚಿತ್ರ ವಿಡಿಯೋ ಜೊತೆಗೆ ಈ ಕಂಪೆನಿ ಈ ಹಿಂದೆ ಬಿಡುಗಡೆ ಮಾಡಿದ್ದ ಪಾರದರ್ಶಕ ಐಫೋನ್‌ ಮಾದರಿಯ ವಿಡಿಯೋ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ

ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ


ಗ್ರಿಪ್ಪಿಟಿ ಪಾರರ್ಶಕ ಟ್ಯಾಬ್ಲೆಟ್

 ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ

ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ


ಗ್ರಿಪ್ಪಿಟಿ ಪಾರರ್ಶಕ ಟ್ಯಾಬ್ಲೆಟ್

ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಬಿಡುಗಡೆ


ಗ್ರಿಪ್ಪಿಟಿ ಪಾರರ್ಶಕ ಟ್ಯಾಬ್ಲೆಟ್

ಪಾರದರ್ಶಕ ಐಫೋನ್‌ ಮಾದರಿ


ಗ್ರಿಪ್ಪಿಟಿ ಪಾರರ್ಶಕ ಐಫೋನ್‌ ಮಾದರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot