ಆಲ್ ಇನ್ ಒನ್: ಎರಡು ಹೊಸ ವಿನೂತನ ಲ್ಯಾಪ್ ಟಾಪ್

Posted By: Staff
ಆಲ್ ಇನ್ ಒನ್: ಎರಡು ಹೊಸ ವಿನೂತನ ಲ್ಯಾಪ್ ಟಾಪ್
ಆಲ್ ಇನ್ ಒನ್(ಎಐಒ) ಡೆಸ್ಕ್ ಟಾಪ್ ಕಂಪ್ಯೂಟರ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಲ್ಯಾಪ್ ಟಾಪ್ ಗಳಿಗೆ ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ಸ್ಥಳಾವಕಾಶ ಕಡಿಮೆ ಇರುವರೆಲ್ಲ ಆಲ್ ಇನ್ ಒನ್ ಕಂಪ್ಯೂಟರ್ ಖರೀದಿಸುತ್ತಿದ್ದಾರೆ. ಈ ಕಂಪ್ಯೂಟರನ್ನು ಡೆಸ್ಕ್ ನಲ್ಲೂ ಇಡಬಹುದು. ಗೋಡೆಗೆ ಒರಗಿಸಿಯೂ ಇಡಬಹುದು.

ಕಾಂಪ್ಯಾಕ್ಟ್ ಡೆಸ್ಕ್ ಟಾಪ್ ಕಂಪ್ಯೂಟರ್ ಮಾರುಕಟ್ಟೆಗೆ ಬರಲಿರುವ ನೂತನ ಉತ್ಪನ್ನ ಪ್ಯಾಕರ್ಡ್ ಬೆಲ್ ಒನ್ ಟು ಎಐಒ ಡೆಸ್ಕ್ ಟಾಪ್. ಕಂಪನಿಯ ಹಳೆಯ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಇದು ತುಂಬಾ ತೆಳ್ಳಗಿನ ಸುಂದರಿ. ತೆಳ್ಳಗಿದ್ದರೂ ಫೀಚರು ಮತ್ತು ವಿಶೇಷತೆಗಳು ಹೊಸ ಪ್ಯಾಕರ್ಡ್ ಬೆಲ್ ಒನ್ ನಲ್ಲಿ ಹೆಚ್ಚಿದೆ ಅನ್ನೋದು ವಿಶೇಷ.

Packard Bell oneTwo AIO ಡೆಸ್ಕ್ ಟಾಪ್ ಎರಡು ಗಾತ್ರಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಅಂದರೆ ಇದು 21 ಇಂಚು ಮತ್ತು 23 ಇಂಚಿನ ಸ್ಕ್ರೀನ್ ಆಯ್ಕೆಗಳಲ್ಲಿ ದೊರಕಲಿದೆ. ಇವೆರಡೂ ಒಂದೇ ರೀತಿಯ 1920x 1080 ಪಿಕ್ಸೆಲ್ ರೆಸಲ್ಯೂಷನ್ ಹೊಂದಿರಲಿದೆ. ಇದು ಹೈಡೆಫಿನೆಷನ್ ಫಿಲ್ಮ್ ಮತ್ತು ಗೇಮಿಗೆ ಸಪೋರ್ಟ್ ಮಾಡುತ್ತದೆ.

ಇವೆರಡು ಡೆಸ್ಕ್ ಟಾಪ್ ಕಂಪ್ಯೂಟರ್ ಗಳು ಇಂಟೆಲಿನ ಎರಡನೆ ತಲೆಮಾರಿನ ಪ್ರೊಸೆಸರ್ ಹೊಂದಿವೆ. ಜೊತೆಗೆ ಇಂಟೆಲಿನ ಸ್ಯಾಂಡಿ ಬ್ರಿಡ್ಜ್ ಪ್ಲಾಟ್ ಫಾರ್ಮ್ ಕೂಡ ಹೊಂದಿವೆ. ಇದರಿಂದಾಗಿ ಇಂಟೆಲ್ ಐ3, ಐ5 ಮತ್ತು ಐ7 ಸೇರಿದಂತೆ ನಿಮಗೆ ಬೇಕಾದ ಪ್ರೊಸೆಸರಿನಲ್ಲಿ ಈ ಕಂಪ್ಯೂಟರ್ ಗಳನ್ನು ಖರೀದಿಸಬಹುದು.

ನೀವು ಇದನ್ನು ಮನೆಯಲ್ಲಿ ಬಳಸುವಿರಾದರೆ ನಿಮಗೆ ಐ3 ಪ್ರೊಸೆಸರ್ ಸಾಕು. ಈ ಪ್ರೊಸೆಸರ್ 8 ಜಿಬಿ RAM ಬೆಂಬಲ ನೀಡುತ್ತದೆ. ಗ್ರಾಹಕರು ಎರಡು ವಿಧದ ಗ್ರಾಫಿಕ್ ಕಾರ್ಡ್ ಗಳಲ್ಲಿ ನಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದ್ರೆ ಎನ್ ವಿಡಿಯಾ ಜಿಫೋರ್ಸ್ ಜಿಟಿ530 ಅಥವಾ ಜಿಟಿ 520 ಗ್ರಾಫಿಕ್ಸ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬಹುದು.

ಈ ಡೆಸ್ಕ್ ಟಾಪ್ ಕಂಪ್ಯೂಟರಿನಂತೆ ಇದರಲ್ಲಿ ಸಾಕಷ್ಟು ವೈವಿಧ್ಯಮಯವಾದ ಫೀಚರುಗಳಿವೆ. ಇದರ ದರ ಭಾರತದಲ್ಲಿ ಎಷ್ಟಿರಲಿದೆ ಎಂದು ಖಚಿತವಾಗಿಲ್ಲ. ಆದರೆ ಆನ್ ಲೈನ್ ದರದ ಪ್ರಕಾರ 23 ಇಂಚಿನ ಪ್ಯಾಕರ್ಡ್ ಬೆಲ್ ದರ 60 ಸಾವಿರ ರು. ಮತ್ತು 21 ಇಂಚಿನ ಬೆಲ್ ಒನ್ ದರ 45 ಸಾವಿರ ರು. ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot