ತಗೋಳ್ಳಿ, ಗಿಗಾಬೈಟ್ ಅವಳಿ ಲ್ಯಾಪ್ ಟಾಪ್

Posted By: Staff
ತಗೋಳ್ಳಿ, ಗಿಗಾಬೈಟ್ ಅವಳಿ ಲ್ಯಾಪ್ ಟಾಪ್
ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಗ್ಯಾಡ್ಜೆಟ್ ಕಂಪನಿ ಗಿಗಾಬೈಟ್. ಇದೀಗ ಗಿಗಾಬೈಟ್ ಕಂಪನಿಯು ಹೆಚ್ಚು ಕಮ್ಮಿ ಒಂದೇ ರೀತಿ ಇರುವ ಎರಡು ಲ್ಯಾಪ್ ಟಾಪ್ ಗಳನ್ನು ಅನಾವರಣ ಮಾಡಿದೆ. ಇವೆರಡರ ಹೆಸರು ಗಿಗಾಬೈಟ್ ಪಿ2532ಎಫ್ ಮತ್ತು ಗಿಗಾಬೈಟ್ ಪಿ2532.

Gigabyte P2532F ಮತ್ತು Gigabyte P2532H 15.6 ಇಂಚಿನ ಡಿಸ್ ಪ್ಲೇ ಹೊಂದಿದೆ. ಇವು ಹೈಡೆಫಿನೇಷನ್ ಮತ್ತು ಎಲ್ಇಡಿ ಬ್ಯಾಕ್ ಲೈಟ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಬಂದಿದೆ. ಇದರಲ್ಲಿರುವ ಫೀಚರುಗಳು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಈ ಲ್ಯಾಪ್ ಟಾಪ್ ಗಳು ಇಂಟೆಲ್ ಕೋರ್ ಐ7-2670ಕ್ಯೂಎಂ ಪ್ರೊಸೆಸರ್ ಹೊಂದಿರಲಿದೆ. ಗಿಗಾಬೈಟ್ ಕಂಪನಿಯು ಹೊಸ ಲ್ಯಾಪ್ ಟಾಪ್ ಕುರಿತು ನೀಡಿದ ಹೆಚ್ಚಿನ ಮಾಹಿತಿ ಪ್ರಕಾರ ಈ ಲ್ಯಾಪ್ ಟಾಪ್ ಗಳು 2ಜಿಬಿ ಮತ್ತು 4ಜಿಬಿ DDRIII ಹೊಂದಿರಲಿವೆ. ಇದರಲ್ಲಿ 8 ಜಿಬಿ ಮೆಮೊರಿ ಸಂಗ್ರಹ ವಿಸ್ತರಿಸಲು ಎರಡು ಸ್ಲಾಟ್ ಇದೆ.

ಇಂಟ್ರೆಸ್ಟಿಂಗ್ ಅಂದ್ರೆ ಇವೆರಡು ಲ್ಯಾಪ್ ಟಾಪ್ ಗಳ ಚಿಪ್ ಸೆಟ್ "ಮೊಬೈಲ್ ಇಂಟೆಲ್ ಎಚ್ಎಂ65 ಎಕ್ಸ್ ಪ್ರೆಸ್. ಇಂಟೆಲ್ ಎಚ್ ಡಿ ಗ್ರಾಫಿಕ್ಸ್ 3000, ಎನ್ ವಿಡಿಯಾ ಜಿಫೋರ್ಸ್ ಇರುವುದರಿಂದ ಗ್ರಾಫಿಕ್ಸ್, ವಿಡಿಯೋ ಗುಣಮಟ್ಟ ಅನನ್ಯವಾಗಿರಲಿದೆ. ಇವೆರಡು ಲ್ಯಾಪ್ ಟಾಪ್ ಗಳು 500/750 ಜಿಬಿ ಹಾರ್ಡ್ ಡಿಸ್ಕ್ ಡ್ರೈವ್ ಹೊಂದಿರಲಿದೆ.

ಬ್ಲೂರೇ ಡಿವಿಡಿ ಕಾಂಬೊ ಆಯ್ಕೆ ಈ ಲ್ಯಾಪ್ ಟಾಪ್ ಗಳಲ್ಲಿ ಇದ್ದು ಅತ್ಯಂತ ಗುಣಮಟ್ಟದ, ಸ್ಪಷ್ಟವಾಗಿ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ಈ ಲ್ಯಾಪ್ ಟಾಪ್ ನಲ್ಲಿ ಆಂತರಿಕ ಮೈಕ್ರೊಫೋನ್, ವೂಫರ್ ಜೊತೆಗೆ ನಾಲ್ಕು ಸ್ಪೀಕರುಗಳು ಇವೆ. ವಿಡಿಯೋ ಕಾನ್ಫರೆನ್ಸ್ ಮಾಡಲು 1.3 ಮೆಗಾಫಿಕ್ಸೆಲ್ ವೆಬ್ ಕ್ಯಾಮ್ ಇದೆ. ಈ ಲ್ಯಾಪ್ ಟಾಪ್ ದರವನ್ನು ಕಂಪನಿ ಇನ್ನೂ ತಿಳಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot