ಅಲೆನ್ ವೇರ್ ಲ್ಯಾಪ್ ಟಾಪ್: ಆಡು ಆಟ ಆಡು..

Posted By: Staff
ಅಲೆನ್ ವೇರ್ ಲ್ಯಾಪ್ ಟಾಪ್: ಆಡು ಆಟ ಆಡು..
ಗೇಮಿಂಗ್ ಲ್ಯಾಪ್ ಟಾಪ್ ಕಂಪನಿಗಳಲ್ಲಿ ಜಾಗತಿಕವಾಗಿ ಅಲೆನ್ ವೇರ್ ಫೇಮಸ್ಸು. ನೂತನ Alienware M17X ಗೇಮಿಂಗ್ ನೋಟ್ ಬುಕ್ ಹೆಚ್ಚು ದಕ್ಷತೆಯ ಆಟದ ಲ್ಯಾಪ್ ಟಾಪ್. ಇದು ಮೂರನೇ ತಲೆಮಾರಿನ ಲ್ಯಾಪ್ ಟಾಪ್ ಆಗಿದ್ದು ಹದಿನೇಳು ಇಂಚಿನ ಸ್ಕ್ರೀನ್ ಹೊಂದಿದೆ.

ಇದರ ವಿನ್ಯಾಸವೇ ಆಕರ್ಷವಾಗಿದ್ದು ಗಮನ ಸೆಳೆಯುತ್ತದೆ. ಎಲ್ ಇಡಿ ಲುಕ್, ಹೊಳಪಿನ ಬಣ್ಣ, ಆಕರ್ಷಕ ಕೀಬೋರ್ಡ್ ಎಲ್ಲವೂ ಇಷ್ಟವಾಗುತ್ತದೆ. ಇದರ ಬ್ಯಾಕ್ ಲೈಟ್ ಕೀಬೋರ್ಡ್ ನಲ್ಲಿ ಒಂಬತ್ತು ವಿವಿಧ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲ್ ಇಡಿ ಲೈಟ್ ಝೋನ್ ಇದೆ. ಇದರಿಂದ ನಿಮಗೆ ಬೇಕಾದ ಬಣ್ಣದ ಬೆಳಕು ಪಡೆಯಬಹುದು.

ಗೇಮಿಂಗ್ ವಿಷ್ಯದಲ್ಲಿ ಲ್ಯಾಪ್ ಟಾಪ್ ಡಿಸ್ ಪ್ಲೇ ಪ್ರಧಾನ ಅಂಶ. Alienware M17X 17 ಇಂಚಿನ ಫುಲ್ ಹೈಡೆಫಿನೇಷನ್ ಡಿಸ್ ಪ್ಲೇ ಹೊಂದಿದೆ. ಇದು 1920x1080 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತಿದ್ದು, ಅನನ್ಯ ಆಟಕ್ಕೆ ಪೂರಕವಾಗಿದೆ. ಇದರಲ್ಲಿ ವಿಡಿಯೋ ಮತ್ತು ಗೇಮ್ ವೀಕ್ಷಣೆ ಹೊಸ ಅನುಭವ ನೀಡುತ್ತದೆ.

ಅಲೆನ್ ವೇರ್ ನೋಟ್ ಬುಕ್ ಎರಡನೇ ತಲೆಮಾರಿನ i7-2720QM ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದ್ದು, 2 ಗಿಗಾ ಹರ್ಟ್ಸ್ ಸ್ಪೀಡ್ ನೀಡುತ್ತದೆ. ಈ ನೋಟ್ ಬುಕ್ 6 ಎಂಬಿ cache ಮೆಮೊರಿ ಹೊಂದಿದೆ. ಸಿಸ್ಟಮ್ ಮೆಮೊರಿ 8 ಜಿಬಿ ಆಗಿದ್ದು ಹದಿನಾರು ಜಿಬಿವರೆಗೆ ವಿಸ್ತರಿಸಲು ಸಾಧ್ಯವಿದೆ.

Alienware M17X 17 ನೋಟ್ ಬುಕ್ ಡಿಡಿಆರ್3 RAM ಹೊಂದಿದೆ. ಈ ಲ್ಯಾಪ್ ಟಾಪ್ 9 ಸಿಲ್ ಲಿಯಾನ್ ಬ್ಯಾಟರಿ ಹೊಂದಿದೆ. ಹೀಗೆ ಹತ್ತು ಹಲವು ಆಕರ್ಷಕ ಫೀಚರುಗಳ ಈ ಗೇಮಿಂಗ್ ಲ್ಯಾಪ್ ಟಾಪ್ ದರ ಮಾತ್ರ ದುಬಾರಿ. ಅಲೆನ್ ವೇರ್ ಎಂ17ಎಕ್ಸ್(ಆರ್3) ಬೇಸ್ ಮಾಡೆಲ್ ದರ ಸುಮಾರು 75 ಸಾವಿರ ರು. ಮತ್ತು ಟಾಪ್ ಎಂಡ್ ಮಾಡೆಲ್ ದರ 1.20 ಲಕ್ಷ ರುಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot