ಆಪಲ್ ಮ್ಯಾಕ್ ಬುಕ್ ಪ್ರೊ 2012 ಬಿಡುಗಡೆ

By Varun
|

ಆಪಲ್ ಮ್ಯಾಕ್ ಬುಕ್ ಪ್ರೊ 2012 ಬಿಡುಗಡೆ
ಆಪಲ್ ಕಂಪನಿ ತನ್ನ ಪ್ರತಿಷ್ಟಿತ ಮ್ಯಾಕ್ ಬುಕ್ ಪ್ರೊ ಸರಣಿಯ ಲ್ಯಾಪ್ಟಾಪ್ ಅನ್ನು ಅಪ್ಗ್ರೇಡ್ ಮಾಡಿದ್ದು, 15 ಇಂಚ್ ಮಾಡಲ್ ಅನ್ನು ಈ ತಿಂಗಳ 15 ರಿಂದ ನಡೆಯುತ್ತಿರುವ WWDC 2012 ರಲ್ಲಿ ಅನಾವರಣಗೊಳಿಸಿದೆ. ಇದುವರೆಗೂ ಇರುವ ಕಂಪ್ಯೂಟರುಗಳಲ್ಲೇ ಅತ್ಯಂತ ಸುಂದರವಾದ ಕಂಪ್ಯೂಟರ್ ಎಂದು ಆಪಲ್ ಹೇಳಿಕೊಂಡಿದ್ದು, ಈ ಮಾಡಲ್ನವಿಶೇಷತೆ ಏನೆಂದರೆ ಇದು ಇದುವರೆಗಿನ ಅತೀ ಹೆಚ್ಚಿನ ರೆಸಲ್ಯೂಶನ್ ಇರುವ ಲ್ಯಾಪ್ಟಾಪ್ ಆಗಿದೆ.

ಆಪಲ್, ತನ್ನ ನ್ಯೂ ಐಪ್ಯಾಡ್ ನ ಜೊತೆ ಬಂದ ರೆಟಿನಾ ಡಿಸ್ಪ್ಲೇಯನ್ನು ಇದರಲ್ಲಿ ಅಳವಡಿಸಿದೆ. ಹಿಂದಿನ ವರ್ಷದ ಮಾಡೆಲ್ ಗಳಿಗೆ ಹೋಲಿಸಿದರೆ ಈ ಮಾಡಲ್ ಇನ್ನೂ ಸ್ಲಿಮ್ ಆಗಿದ್ದು, USB 3.0 ಹಾಗು ಐವಿ ಬ್ರಿಡ್ಜ್ ಪ್ರೋಸೆಸರ್ ಒಳಗೊಂಡಿದೆ.

ಅಪ್ಗ್ರೇಡ್ ಆಗಿರುವ ಮಾಡಲ್ ನ ಫೀಚರ್ಗಳು ಈ ರೀತಿ ಇವೆ:

1) 15 inch ಮಾಡೆಲ್

 • ರೆಟಿನಾ ಡಿಸ್ಪ್ಲೇ, IPS ತಂತ್ರಜ್ಞಾನ

 • ಮ್ಯಾಕ್ OS X ಲಯನ್ ಆಪರೇಟಿಂಗ್ ಸಿಸ್ಟಮ್

 • 2880 x 1800 ಪಿಕ್ಸೆಲ್

 • 2.3 GHzಇಂಟೆಲ್ i7 ಐವಿ ಬ್ರಿಡ್ಜ್ ಪ್ರೋಸೆಸರ್

 • ಇಂಟೆಲ್ HD ಗ್ರಾಫಿಕ್ಸ್ 4000 ಹಾಗು NVIDIA ಕೆಪ್ಲರ್ GeForce GT 650M ಗ್ರಾಫಿಕ್ಸ್

 • 8GB ಆಂತರಿಕ ಮೆಮೊರಿ, 256 MB ಫ್ಲಾಶ್ ಮೆಮೊರಿ

 • ಸ್ಟೋರೇಜ್ ಕೆಪಾಸಿಟಿ 768 GB SSD

 • HDMI ಪೋರ್ಟ್

 • USB 3.0

 • ಥಂಡರ್ ಬೋಲ್ಟ್ ಪೋರ್ಟ್

 • 7 ಗಂಟೆ ವಯರ್ಲೆಸ್ ಬ್ಯಾಟರಿ ಬ್ಯಾಕಪ್

ಇದರ ಬೆಲೆ 1,52,900 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X