Home
ಕಂಪ್ಯೂಟರ್‌‌

Vivo: ವಿಶ್ವದ ಮೊದಲ ಟ್ಯಾಬ್ಲೆಟ್; ಇದರಲ್ಲಿದೆ ಶಕ್ತಿಶಾಲಿ ಪ್ರೊಸೆಸರ್.. 12050mAh ಬಿಗ್ ಬ್ಯಾಟರಿ.. ಬೆಲೆ ಫುಲ್ ಕಡಿಮೆ!

ವಿವೋ ಸಂಸ್ಥೆಯು ಇಂದು ತನ್ನ ಹೊಸ ಮೊಬೈಲ್ ವಿವೋ X200 ಅಲ್ಟ್ರಾ ಅನ್ನು ಪರಿಚಯಿಸಿದೆ. ಇದರ ಜೊತೆಗೆ ಹೊಸ ಪ್ರೀಮಿಯಂ ಟ್ಯಾಬ್ಲೆಟ್ ವಿವೋ ಪ್ಯಾಡ್ 5 ಪ್ರೊ (vivo Pad5 Pro) ಅನ್ನು ಬಿಡುಗಡೆ ಮಾಡಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿರುವ ವಿಶ್ವದ ಮೊದಲ ಟ್ಯಾಬ್ಲೆಟ್ ಆಗಿದೆ. ಈ ಟ್ಯಾಬ್ ಅನ್ನು ಅತ್ಯುನ್ನತ ಕಾರ್ಯಕ್ಷಮತೆ, ಸ್ಟ್ರೀಮಿಂಗ್ ಮತ್ತು ಉತ್ಪಾದಕತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಈ ಟ್ಯಾಬ್ಲೆಟ್ ಅಲ್ಟ್ರಾ ಲೈಟ್ ಆವೃತ್ತಿ ಸೇರಿದಂತೆ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಬನ್ನಿ, ಈ ಟ್ಯಾಬ್‌ನ ವಿಶೇಷತೆಗಳನ್ನು ತಿಳಿಯೋಣ.

ವಿವೋ ಪ್ಯಾಡ್ 5 ಪ್ರೊ ಐದು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಬ್‌ನ ವಿಶೇಷತೆಗಳೆಂದರೆ, ಇದು 13 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮೊದಲೇ ಹೇಳಿದಂತೆ, ಈ ಟ್ಯಾಬ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಈ ಟ್ಯಾಬ್ಲೆಟ್ 12,050mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ, 16GB RAM + 512GB ಸ್ಟೋರೇಜ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಟ್ಯಾಬ್‌ನ ಬೆಲೆ ತಿಳಿಯಲು ಮುಂದೆ ಓದಿ.

vivo Pad5 Pro ಲಾಂಚ್; ಶಕ್ತಿಶಾಲಿ ಪ್ರೊಸೆಸರ್, 12050mAh ಬ್ಯಾಟರಿ; ಕಡಿಮೆ ಬೆಲೆ

ವಿವೋ ಪ್ಯಾಡ್ 5 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ ಪ್ಯಾಡ್ 5 ಪ್ರೊ ಟ್ಯಾಬ್ಲೆಟ್ 13 ಇಂಚಿನ ದೊಡ್ಡ 3.1K ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 3,096 × 2,064 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇಯು 144Hz ರಿಫ್ರೆಶ್ ದರ, 480Hz ಟಚ್ ಸ್ಯಾಂಪ್ಲಿಂಗ್ ದರ, HDR10, 10 ಬಿಟ್ ಬಣ್ಣ ಮತ್ತು 1200 ನಿಟ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ ಪ್ಯಾಡ್ 5 ಪ್ರೊ ಮೀಡಿಯಾ ಟೆಕ್‌ನ ಹೊಸ ಡೈಮೆನ್ಸಿಟಿ 9400 ಪ್ರೊಸೆಸರ್ ಒಳಗೊಂಡಿರುವ ವಿಶ್ವದ ಮೊದಲ ಟ್ಯಾಬ್ಲೆಟ್ ಆಗಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಟ್ಯಾಬ್ 2.9 ಮಿಲಿಯನ್‌ಗಿಂತಲೂ ಹೆಚ್ಚಿನ AnTuTu ಸ್ಕೋರ್ ಪಡೆದಿದೆ. ಗೇಮಿಂಗ್‌ಗಾಗಿ, ಇದು ಮೂರು ಆಯಾಮದ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ. ಈ ಟ್ಯಾಬ್ 8GB RAM, 12GB RAM ಮತ್ತು 16GB RAM ಹೊಂದಿದೆ. ಹಾಗೆಯೇ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

vivo Pad5 Pro ಲಾಂಚ್; ಶಕ್ತಿಶಾಲಿ ಪ್ರೊಸೆಸರ್, 12050mAh ಬ್ಯಾಟರಿ; ಕಡಿಮೆ ಬೆಲೆ

ಕ್ಯಾಮೆರಾ ಸೆಟಪ್

ವಿವೋ ಪ್ಯಾಡ್ 5 ಪ್ರೊ ಟ್ಯಾಬ್ಲೆಟ್ ಅದ್ಭುತ ಕ್ಯಾಮೆರಾ ಸೆಪಟ್ ಹೊಂದಿದೆ. ಈ ಟ್ಯಾಬ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಟ್ಯಾಬ್‌ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಆನ್‌ಲೈನ್ ತರಗತಿಗಳು, ಮೀಟಿಂಗ್ (ಸಭೆಗಳು) ಮತ್ತು ವಿಡಿಯೋ ಕರೆಗಳಿಗೆ ಉತ್ತಮವಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ ಪ್ಯಾಡ್ 5 ಪ್ರೊ ಟ್ಯಾಬ್ಲೆಟ್ ದೊಡ್ಡ ವಿಶೇಷತೆಯೆಂದರೆ, ಇದರ ಬೃಹತ್ ಬ್ಯಾಟರಿ. ಹೌದು, ಈ ಟ್ಯಾಬ್ 12050mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಸುಮಾರು 16 ಗಂಟೆಗಳ ಕಾಲ ವಿಡಿಯೋ ಸ್ಟ್ರೀಮಿಂಗ್ ಪ್ಲೇ ಮಾಡಬಹುದು. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ ಪ್ಯಾಡ್ 5 ಪ್ರೊ ಟ್ಯಾಬ್ ಆಂಡ್ರಾಯ್ಡ್ 15 ಆಧಾರಿತ OriginOS 5 HD ಜೊತೆಗೆ ಕೆಲಸ ನಿರ್ವಹಿಸುತ್ತದೆ. ಇದು ಸ್ಟೈಲಸ್ ಮತ್ತು ಸ್ಮಾರ್ಟ್ ಟಚ್ ಕೀಬೋರ್ಡ್ 5 ಪ್ರೊ ಅನ್ನು ಸಹ ಬೆಂಬಲಿಸುತ್ತದೆ. ಈ ಟ್ಯಾಬ್ಲೆಟ್ 8 ಸ್ಪೀಕರ್‌ಗಳ ಸೆಟಪ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಟ್ಯಾಬ್ ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಯುಎಸ್‌ಬಿ 3.2 ಜೆನ್ 1 ಟೈಪ್ ಸಿ ಪೋರ್ಟ್‌ ಸೇರಿದಂತೆ ಹಲವು ಸುಧಾರಿತ ಆಯ್ಕೆಗಳನ್ನು ಹೊಂದಿದೆ.

vivo Pad5 Pro ಲಾಂಚ್; ಶಕ್ತಿಶಾಲಿ ಪ್ರೊಸೆಸರ್, 12050mAh ಬ್ಯಾಟರಿ; ಕಡಿಮೆ ಬೆಲೆ

ವಿವೋ ಪ್ಯಾಡ್ 5 ಪ್ರೊ ಬೆಲೆ

ವಿವೋ ಪ್ಯಾಡ್ 5 ಪ್ರೊ ಟ್ಯಾಬ್‌ನ 8GB RAM + 128GB ಸ್ಟೋರೇಜ್ ರೂಪಾಂತರವು 35,000 ರೂ.ಗೆ ಬಿಡುಗಡೆಯಾಗಿದೆ. 8GB RAM + 256GB ಸ್ಟೋರೇಜ್ ಬೆಲೆ 36,250 ರೂ. ಆಗಿದೆ. 12GB RAM + 256GB ಸ್ಟೋರೇಜ್ ವೇರಿಯಂಟ್ 39,760 ರೂ.ಗೆ ಲಭ್ಯವಿದೆ. 12GB RAM + 512GB ಸ್ಟೋರೇಜ್ ಮಾದರಿಯನ್ನು 43,278 ರೂ.ಗೆ ಪರಿಚಯಿಸಲಾಗಿದೆ.

ಇನ್ನು ಟ್ಯಾಬ್‌ನ ಟಾಪ್ ವೇರಿಯಂಟ್ 16GB RAM + 512GB ಆಯ್ಕೆಯನ್ನು 45,605 ರೂ.ಗೆ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಕಂಪನಿಯು ವಿವೋ ಪ್ಯಾಡ್ 5 ಪ್ರೊ ಅಲ್ಟ್ರಾ ಲೈಟ್ ಆವೃತ್ತಿಯನ್ನು ಸಹ ಪರಿಚಯಿಸಿದೆ. ಇದರ 12GB RAM + 256GB ಸ್ಟೋರೇಜ್ ಬೆಲೆ 45,600 ರೂ. ಮತ್ತು 16GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ 51,450 ರೂ. ಇದೆ. ಈ ಟ್ಯಾಬ್ ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಬರಲಿದೆ.

Best Mobiles in India

English summary
vivo Pad5 Pro with MediaTek Dimensity 9400 launched in china: When will launched in India?: Check price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+