Home
ಕಂಪ್ಯೂಟರ್‌‌

ಕಂಪ್ಯೂಟರ್ ಸೆಗ್ಮೆಂಟಿಗೆ ವಿಝಿಯೊ ಪ್ರವೇಶ

By Super

ಕಂಪ್ಯೂಟರ್ ಸೆಗ್ಮೆಂಟಿಗೆ ವಿಝಿಯೊ ಪ್ರವೇಶ
ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಹೆಚ್ಚಿನ ಕಂಪನಿಗಳು ಹೊರತರುವ ಉತ್ಪನ್ನಗಳು ಒಂದೇ ರೀತಿಯ ಫೀಚರುಗಳನ್ನು ಹೊಂದಿರುತ್ತವೆ. ಗ್ರಾಹಕರನ್ನು ಸೆಳೆಯಲು ಹೆಚ್ಚಿನ ಕಂಪನಿಗಳು ದರ ಸಮರದ ಮೊರೆ ಹೋಗುತ್ತಿವೆ.

ಅಮೆರಿದ ಜನಪ್ರಿಯ ಎಲೆಕ್ಟ್ರಾನಿಕ್ಸ್ ಕಂಪನಿ ವಿಝಿಯೊ ಕೂಡ ಕಂಪ್ಯೂಟರ್ ಮಾರುಕಟ್ಟೆಗೆ ಪ್ರವೇಶಿಸಲು ಯೋಜಿಸಿದೆ. ಕಂಪನಿಯ ಉತ್ಪನ್ನಗಳು ಕೈಗೆಟುಕುವ ದರದಿಂದ ಅಮೆರಿಕದಲ್ಲಿ ಹೆಚ್ಚು ಜನಪ್ರಿಯಗೊಂಡಿದೆ.

ಇತ್ತೀಚೆಗೆ ವಿಝಿಯೊ ಕಂಪನಿಯು ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಕಂಪ್ಯೂಟರ್ ಮಾರುಕಟ್ಟೆಗೆ ಪ್ರವೇಶಿಸುವ ಕುರಿತು ಹೇಳಿದೆ. ಕಂಪನಿಯು ವಿಂಡೋಸ್ ಅಪರೇಟಿಂಗ್ ಸಿಸ್ಟಮ್ ಮೂಲಕ ನೂತನ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದೆ. ಒಂದು ವರದಿಯ ಪ್ರಕಾರ ವಿಝಿಯೊ ನೂತನ ಕಂಪ್ಯೂಟರ್ ಗಳೆಲ್ಲ ಆಕರ್ಷಕ ವಿನ್ಯಾಸ ಹೊಂದಿರಲಿವೆಯಂತೆ.

ಕಂಪ್ಯೂಟರ್ ಮಾರುಕಟ್ಟೆಗೆ ಪ್ರವೇಶಿಸುವ ಮೊದಲ ಭಾಗವಾಗಿ ವಿಝಿಯೊ ನೂತನ 5 ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದೆ. ಈ ಉತ್ಪನ್ನಗಳಲ್ಲಿ ಐದು ಕಂಪ್ಯೂಟರ್ ಗಳು ಆಲ್ ಇನ್ ಒನ್ ಮಾದರಿಯಾಗಿವೆ. ಇದರಲ್ಲಿ ಒಂದು ಅಲ್ಟ್ರಾಬುಕ್ 15.6 ಇಂಚಿನ ಡಿಸ್ ಪ್ಲೇ ಹೊಂದಿರಲಿದೆ ಎಂದು ವರದಿಗಳು ಹೇಳಿವೆ.

ಮುಂದಿನ ವಾರ ಆರಂಭವಾಗಲಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ ಸಮ್ಮೇಳನದಲ್ಲಿ (ಸಿಇಎಸ್) ವಿಝಿಯೊ ನೂತನ ಕಂಪ್ಯೂಟರ್ ಗಳನ್ನು ಪ್ರದರ್ಶಿಸಲಿದೆಯಂತೆ. ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ ವಿಝಿಯೊ ಕಂಪ್ಯೂಟರುಗಳು ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+