ವಾಮಿ ಆಂಡ್ರಾಯ್ಡ್ 4 .0 ಟ್ಯಾಬ್ಲೆಟ್ ಕೇವಲ 5,249

ಈ ವರ್ಷದಲ್ಲಿ ಅದೆಷ್ಟು ಹೊಸ ಕಂಪನಿಗಳಟ್ಯಾಬ್ಲೆಟ್ಟುಗಳು ಮಾರುಕಟ್ಟೆಗೆ ಬಂದಿವೆಯೋ ಗೊತ್ತಿಲ್ಲ, ಆಕಾಶ್ ಟ್ಯಾಬ್ಲೆಟ್ ಅನ್ನು ಸರಕಾರ ಶುರು ಮಾಡಿದ ಮೇಲೆ ಜಿದ್ದಿಗೆ ಬಿದ್ದಂತೆ ಹಲವಾರು ಕಂಪನಿಗಳು ಟ್ಯಾಬ್ಲೆಟ್ ಉತ್ಪಾದನೆ ಶುರು ಮಾಡಿವೆ. ಆಕಾಶ್ 2 ಟ್ಯಾಬ್ಲೆಟ್ ಬರುತ್ತೋ ಇಲ್ಲವೋ ಆದರೆ ಒಂದು ವಿಷಯದಲ್ಲಂತೂ ಗ್ರಾಹಕನಿಗೆ ಒಳ್ಳೆಯದಾಗಿದೆ. ಅದೇನೆಂದರೆ ನಮಗೆ ಕಡಿಮೆ ಬೆಲೆಗೆ ಟ್ಯಾಬ್ಲೆಟ್ಟುಗಳು ಸಿಗುತ್ತಿರುವುದು.
ಈಗ ಅದೇ ರೀತಿಯ ಬಜೆಟ್ ಸ್ನೇಹಿ ಟ್ಯಾಬ್ಲೆಟ್ ಒಂದನ್ನು ವಿಕೆಡ್ ಲೀಕ್ ಎಂಬ ಕಂಪನಿ ಆಂಡ್ರಾಯ್ಡ್ 4.0 ಇರುವ 7 ಇಂಚ್ ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್ ಅನ್ನು ಹೊರತಂದಿದೆ, ಅದೂ 5,249 ರೂಪಾಯಿಗೆ.
ಈ ಟ್ಯಾಬ್ಲೆಟ್ ಗಳ ಫೀಚರುಗಳು ಈ ರೀತಿ ಇವೆ:
- 7-ಇಂಚಿನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್ (ಫೈವ್ ಪೈಂಟ್ ಟಚ್)
- 800 X 480 ಪಿಕ್ಸೆಲ್ ರೆಸಲ್ಯೂಶನ್.
- 1.2GHz ARM ಕಾರ್ಟೆಕ್ಸ್ A10 ಪ್ರೋಸೆಸರ್
- 512 MB ರಾಮ್
- 4GB ಆಂತರಿಕ ಮೆಮೊರಿ
- 32GB ವರೆಗೂ ಮೈಕ್ರೊ ಸ್ಲಾಟ್ ಮೂಲಕ ವಿಸ್ತರಿಸಬಹುದಾದ ಮೆಮೊರಿ
- 400 ಮೆಗಾಹರ್ಟ್ಝ್ GPU, ಗ್ರಾಫಿಕ್ಸ್ ನಿರ್ವಹಣೆಗೆ
- ಫ್ಲಾಶ್ App, HD ವೀಡಿಯೊಗಳು ಮತ್ತು ಸಂವಹನ Apps ಬೆಂಬಲ
- ಡಾಂಗಲ್ ಮೂಲಕ 3 G ಸೌಲಭ್ಯ
- ವೈಫೈ ಸಂಪರ್ಕ,
- ವೀಡಿಯೊ ಚಾಟ್ ಸಹಕರಿಸುವ ಮುಂಬದಿಯ VGAಕ್ಯಾಮೆರಾ
- 1080p ವೀಡಿಯೋ ರೆಕಾರ್ಡಿಂಗ್ ಹಾಗು ಡ್ಯುಯಲ್ ಸ್ಕ್ರೀನ್ ನಲ್ಲಿ ಪ್ಲೇ ಮಾಡುವ ಸಾಮರ್ಥ್ಯ.
- ಗೂಗಲ್ ಪ್ಲೇ ಆನ್ಲೈನ್ ಮಳಿಗೆಯಿಂದ ಉಚಿತ ಆಪ್ಸ್
- ಮೈಕ್ ಹಾಗು ಇಯರ್ ಫೋನ್ ಸಾಕೆಟ್
- ಟಿವಿಗೆ ಟ್ಯಾಬ್ಲೆಟ್ ಅನ್ನು ಕನೆಕ್ಟ್ ಮಾಡಲು HDMI ಪೋರ್ಟ್
ಬಿಳಿ ಬಣ್ಣದಲ್ಲಿ ಬರುವ ಈ ಟ್ಯಾಬ್ಲೆಟ್ ಅನ್ನು Wicked Leak ವೆಬ್ಸೈಟಿನಲ್ಲಿ ಆನ್ಲೈನ್ ಮೂಲಕ ಕೊಳ್ಳಬಹುದು.
Comments
Best Mobiles in India


Click it and Unblock the Notifications




