ಈ 90 ರ ದಶಕದ ಕಂಪ್ಯೂಟರ್ ಆಧುನೀಕತೆಗೆ ಒಂದು ಸವಾಲು

Written By:

ಸಾಕಷ್ಟು ಸುಧಾರಣೆಗಳೊಂದಿಗೆ ಇಂದಿನ ತಂತ್ರಜ್ಞಾನ ಮುಂದುವರಿಯುತ್ತಿದ್ದು ನಾವು ಇನ್ನೂ ಹಳೆಯದಕ್ಕೆ ಅಂಟಿಕೊಂಡಿರಬೇಕಾದ್ದ ಅವಶ್ಯಕತೆಯಿಲ್ಲ. ಈಗಂತೂ ಅಂತರ್ಜಾಲ ಸಂಪರ್ಕಕ್ಕಾಗಿ ನಮ್ಮ ಲ್ಯಾಂಡ್ ಫೋನ್ ಅನ್ನೇ ನಾವು ಬಳಸುತ್ತಿದ್ದು ಇದರ ಮೂಲಕವೇ ಅಂತರ್ಜಾಲದ ಸಾಕಷ್ಟು ಕೆಲಸಗಳನ್ನು ನೆರವೇರಿಸುತ್ತಿದ್ದೇವೆ.

ನಮ್ಮ ಮೆಶೀನ್‌ಗಳೇ ಇಷ್ಟೊಂದು ಮುಂದುವರಿಯುತ್ತಿರುವಾಗ ನಾವು ಮಾತ್ರವೇ ಹಳೆಯ ಸಂಪ್ರದಾಯಗಳಿಗೆ ಅಂಟಿಕೊಂಡಿರುವುದು ಒಂದು ಅವಮಾನಕರ ಸಂಗತಿ ಎಂದೆನಿಸುತ್ತದೆ. ನಿಮಗೆ ಈ ಲೇಖನದಲ್ಲಿ ಒಂದು ಆಸಕ್ತಿಕರ ಅಂಶವನ್ನು ನಾವಿಲ್ಲಿ ಹಂಚಿಕೊಳ್ಳಲಿದ್ದು ಹಳೆಯ ತಂತ್ರಜ್ಞಾನ ಹೇಗೆ ಹೊಸದರಲ್ಲಿ ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ತಿಳಿದುಕೊಳ್ಳಬಹುದು.

<center><iframe width="100%" height="349" src="//www.youtube.com/embed/JpSfgusep7s" frameborder="0" allowfullscreen></iframe></center>

ಹಳತಾದರೂ ಹೊಸತನ್ನು ಬಳಸಿ ಕಾರ್ಯನಿರ್ವಹಿಸುವ ಒಂದು ಕಂಪ್ಯೂಟರ್ ಅನ್ನು ಯೂಟ್ಯೂಬ್ ಬಳಕೆದಾರರಾದ ಡೋನಟ್ ಸೀರೆಲ್ ವೀಡಿಯೋ ರೂಪದಲ್ಲಿ ತೋರಿಸಿದ್ದಾರೆ. ಅವರ ತಂದೆಯ ಒಂದು ಡೆಸ್ಕ್‌ಟಾಪ್ (1992) ರ ಕಾಲದ್ದು, ಇದು ವಿಂಡೋಸ್ 95 ಅನ್ನು ಚಾಲನೆ ಮಾಡುತ್ತಿದೆ. ಇಷ್ಟಲ್ಲದೆ ಅವರ ವೀಡಿಯೋ 1998 ಎಪ್ಸನ್ ಸ್ಟೈಲಸ್ 440 ಪ್ರಿಂಟರ್ ಪ್ರಾರಂಭವಾಗುವುದನ್ನು ಕೂಡ ತೋರಿಸಿದ್ದಾರೆ.

ನನ್ನ ತಂದೆಯವರು ಹೊಸ ಡೆಸ್ಕ್‌ಟಾಪ್ ಅನ್ನು ಖರೀದಿಸುವವರೆಗೂ ಅಂದರೆ 2004 ರವರೆಗೂ ನಾವು ಇದನ್ನು ಬಳಸುತ್ತಿದ್ದೆವು. ಹನ್ನೆರಡು ವರ್ಷಗಳ ಸೇವೆಯನ್ನು ನೀಡಿರುವ ಇದು ಕಂಪ್ಯೂಟರ್ ಜಗತ್ತಿಗೆ ಒಂದು ಅಸಾಮಾನ್ಯ ಕೊಡುಗೆ ಎಂದು ಡೋನಟ್ ತಿಳಿಸಿದ್ದಾರೆ. ನಾನು ಈಗಲೂ ಈ ಕಂಪ್ಯೂಟರ್ ಅನ್ನು ಬಳಸುತ್ತಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ.

ಡೋನಟ್ ಈ ವೀಡಿಯೋವನ್ನು 2013 ರಲ್ಲಿ ತಯಾರಿಸಿ ಇತ್ತೀಚೆಗೆ ಇದು ಹಲವರ ಗಮನವನ್ನು ಸೆಳೆಯುತ್ತಿದೆ. ಹಳತಾದರೂ ಅದರ ಪ್ರಾಮುಖ್ಯತೆ ಮಹತ್ವದ್ದು ಎಂಬುದನ್ನು ಇದನ್ನು ನೋಡಿ ಒಪ್ಪಿಕೊಳ್ಳಲೇಬೇಕು.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot