ನಿಮ್ಮ ಲ್ಯಾಪ್‌ಟಾಪ್‌ನ ಈ ತೊಂದರೆಯನ್ನು ಕಡೆಗಣಿಸದಿರಿ ಜೋಕೆ

ನಿಮ್ಮ ಲ್ಯಾಪ್‌ ಅಥವಾ ಪಿಸಿ ಪದೇ ಪದೇ ಶಟ್‌ಡೌನ್ ಆಗುತ್ತಿದೆ ಎಂದಾದಲ್ಲಿ ಈ ಕೆಳಗಿನ ಕಾರಣಗಳನ್ನು ನೀವು ಒಮ್ಮೆ ಅರಿತುಕೊಳ್ಳಲೇಬೇಕು.

By Shwetha Ps
|

ನೀವು ಯಾವುದಾದರೂ ಒಂದು ಕೆಲಸ ಮಾಡುತ್ತಿರುವಾಗ ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿ ಒಮ್ಮೆಲೆ ಶಟ್‌ಡೌನ್ ಆಗುತ್ತಿದೆಯೇ? ಆದರೆ ಈ ಸ್ವಯಂ ಶಟ್‌ ಡೌನ್ ಹಿಂದೆ ನಿಗೂಢ ರಹಸ್ಯವೊಂದು ಅಡಗಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಬುದ್ಧಿವಂತ ಎನಿಸಿಕೊಂಡಿರುವ ಕಂಪ್ಯೂಟರ್ ಬಿಲ್ಟ್ ಇನ್ ಸಂರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಿದೆ.

ನಿಮ್ಮ ಲ್ಯಾಪ್‌ಟಾಪ್‌ನ ಈ ತೊಂದರೆಯನ್ನು ಕಡೆಗಣಿಸದಿರಿ ಜೋಕೆ

ನಿಮ್ಮ ಪಿಸಿ ಇಲ್ಲವೇ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತಿದೆ ಎಂದಾದಾಗ ಅದು ತನ್ನಷ್ಟಕ್ಕೆ ಶಟ್ ಡೌನ್ ಮಾಡಿಕೊಳ್ಳುತ್ತದೆ. ಆದರೆ ಈ ಕ್ರಿಯೆ ಪುನರಾವರ್ತನೆಯಾಗುತ್ತಿದೆ ಎಂದಾದಲ್ಲಿ ಅದಕ್ಕೆ ಕಾರಣಗಳೇನು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಹೆಚ್ಚು ಬಿಸಿ

ಹೆಚ್ಚು ಬಿಸಿ

ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್ ಒಳಭಾಗದಲ್ಲಿರುವ ಫ್ಯಾನ್ ಹೆಚ್ಚಿನ ಬಿಸಿಯನ್ನು ತಣ್ಣಗಾಗಿಸುವ ಅನುಕೂಲತೆಯನ್ನು ಮಾಡಿಕೊಡುತ್ತದೆ. ಆದರೆ ಈ ಫ್ಯಾನ್ ಧೂಳಿನಿಂದ ತುಂಬಿಕೊಂಡಿದೆ ಎಂದಾದಲ್ಲಿ ಸರಿಯಾಗಿ ಕೆಲಸ ಮಾಡದು. ಈ ಸಮಯದಲ್ಲಿ ನಿಮ್ಮ ವೀಡಿಯೊ ಕಾರ್ಡ್ ಅನ್ನು ನೀವು ಪರಿಶೀಲಿಸಬೇಕು ಅಂತೆಯೇ ಫ್ಯಾನ್ ಸ್ವಚ್ಛಗೊಳಿಸಿ

ಹಾರ್ಡ್‌ವೇರ್ ವಿಫಲತೆ

ಹಾರ್ಡ್‌ವೇರ್ ವಿಫಲತೆ

ತನ್ನಷ್ಟಕ್ಕೆ ಶಟ್‌ಡೌನ್ ಆಗುವುದಕ್ಕೆ ಇದೂ ಒಂದು ಕಾರಣವಾಗಿದೆ. ಹಾರ್ಡ್‌ವೇರ್ ಪರಿಶೀಲನೆ ಹೀಗಿರಲಿ: RAM, ಸಿಪಿಯು, ಮದರ್‌ಬೋರ್ಡ್, ಪವರ್ ಸಪ್ಲೈ ಮತ್ತು ವೀಡಿಯೊ ಕಾರ್ಡ್ ಚೆಕ್ ಮಾಡಿ ನಿಮ್ಮ ಕಂಪ್ಯೂಟರ್ ಹಾರ್ಡ್‌ವೇರ್ ಹೊಸತು ಎಂದಾದಲ್ಲಿ ಅದನ್ನು ಹೊರತೆಗೆದು ಪುನಃ ಅಳವಡಿಸಿ.

ಮತ್ತೆ 'ಬಿಗ್ ಬಿಲಿಯನ್ ಡೇಸ್' ಘೋಷಿಸಿದ ಫ್ಲಿಪ್‌ಕಾರ್ಟ್!..ಡೆಬಿಟ್ ಕಾರ್ಡ್‌ಗೂ EMI ಆಫರ್!!ಮತ್ತೆ 'ಬಿಗ್ ಬಿಲಿಯನ್ ಡೇಸ್' ಘೋಷಿಸಿದ ಫ್ಲಿಪ್‌ಕಾರ್ಟ್!..ಡೆಬಿಟ್ ಕಾರ್ಡ್‌ಗೂ EMI ಆಫರ್!!

ಬ್ಯಾಟರಿ

ಬ್ಯಾಟರಿ

ನೀವು ಹೆಚ್ಚು ಸಮಯದಿಂದ ಲ್ಯಾಪ್‌ಟಾಪ್ ಬಳಸುತ್ತಿದ್ದೀರಿ ಎಂದಾದಲ್ಲಿ ಬ್ಯಾಟರಿಯ ಕಾರಣದಿಂದ ಕೂಡ ಆಟೊಮ್ಯಾಟಿಕ್ ಶಟ್‌ಡೌನ್ ಉಂಟಾಗುತ್ತದೆ. ಬ್ಯಾಟರಿ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ.

 ತಪ್ಪಾದ ಚಾರ್ಜರ್

ತಪ್ಪಾದ ಚಾರ್ಜರ್

ಗೇಮರ್ಸ್‌ಗೆ ಹೆಚ್ಚು ವೋಲ್ಟೇಜ್ ಸಾಮರ್ಥ್ಯವುಳ್ಳ ಚಾರ್ಜರ್ ಬೇಕು. ಅಂದರೆ 100 ವೋಲ್ಟ್‌ನಿಂದ 240 ವರೆಗೆ. ಹೆಚ್ಚಿನವರಿಗೆ ಈ ಸಂಗತಿ ಗೊತ್ತಿರದೆ ಬರಿ 90ವೋಲ್ಟ್ ಅನ್ನು ಬಳಸಿಕೊಳ್ಳುತ್ತಾರೆ.

ವೈರಸ್

ವೈರಸ್

ನಿಮ್ಮ ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್ ಸ್ವಯಂ ಆಗಿ ಶಟ್‌ಡೌನ್ ಆಗುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ವೈರಸ್ ದಾಳಿಯಾಗಿದೆ. ವೈರಸ್‌ಗಳಿಂದ ಕೂಡ ಈ ಶಟ್‌ಡೌನ್ ಉಂಟಾಗುತ್ತದೆ. ಇದಕ್ಕಾಗಿ ನೀವು ಸುರಕ್ಷಿತ ಆಂಟಿವೈರಸ್ ಅನ್ನು ನಿಮ್ಮ ಸಿಸ್ಟಮ್‌ಗೆ ಅಳವಡಿಸಿಕೊಳ್ಳಿ.

Best Mobiles in India

Read more about:
English summary
When our computer or laptop suddenly get shuts down without any prompt, we get a panic attack.Today, we list out the top reasons on why your laptop randomly shuts down.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X