ವಿಕೆಡ್‌ಲೀಕ್‌ ವಾಮಿ ಡಿಸೈರ್‌ vs ಕಾರ್ಬನ್‌ ಸ್ಮಾರ್ಟ್‌ ಟ್ಯಾಬ್‌ 2

By Vijeth Kumar Dn
|

ವಿಕೆಡ್‌ಲೀಕ್‌ ವಾಮಿ ಡಿಸೈರ್‌ vs ಕಾರ್ಬನ್‌ ಸ್ಮಾರ್ಟ್‌ ಟ್ಯಾಬ್‌ 2

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಹಲವು ಬಜೆಟ್‌ ಸ್ನೇಹಿ ಟ್ಯಾಬ್ಲೆಟ್‌ಗಳು ಲಭ್ಯವಿದೆ. ಅದರಲ್ಲಿಯೂ ಕೈಗೆಟಕುವ ದರದಲ್ಲಿ ಟ್ಯಾಬ್ಲೆಟ್‌ಗಳು ದೊರೆಯುತ್ತಿರುವುದರಿಂದ ಗ್ರಾಹಕರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ಟ್ಯಾಬ್ಲೆಟ್‌ಗಳಿಗಂತೂ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತಿದೆ.

ಮಾರುಕಟ್ಟೆಯಲ್ಲಿನ ಈ ಬೇಡಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಭಾರತೀಯ ತಯಾರಕರುಗಳಾದ ವಿಕೆಡ್‌ಲೀಕ್‌ ಹಾಗೂ ಕಾರ್ಬನ್‌ ಸಂಸ್ಥೆಗಳು ನೂತನ ಟ್ಯಾಬ್ಲೆಟ್‌ಗಳಾದ ವಿಕೆಡ್‌ಲೀಕ್‌ ವ್ಯಾಮಿ ಡಿಸೈರ್‌ ಹಾಗೂ ಕಾರ್ಬನ್‌ ಸ್ಮಾರ್ಟ್‌ ಟ್ಯಾಬ್‌ 2 ಬಿಡುಗಡೆ ಮಾಡಿವೆ.

ಅಂದಹಾಗೆ ವಿಕೆಡ್‌ಲೀಕ್‌ ವಾಮಿ ಡಿಸೈರ್‌ ಅಕ್ಟೋಬರ್‌ 14 ರಂದು 6,499 ರೂ. ದರದೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಕಾರ್ಬನ್‌ನ ಸ್ಮಾರ್ಟ್‌ ಟ್ಯಾಬ್‌ 2 ಈಗಾಗಲೆ 6,999 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎರೆಡೂ ಜೆಲ್ಲಿ ಬೀನ್‌ ಚಾಲಿತ ಟ್ಯಾಬ್ಲೆಟ್‌ಗಳಲ್ಲಿ ಯಾವುದು ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರಾ ಹಾಗಿದ್ದಲ್ಲಿ ಅದಕ್ಕೂ ಮುನ್ನ ಈ ಎರಡೂ ಫಾಬ್ಲೆಟ್‌ಗಳ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ದರ್ಶಕ: ಎರಡೂ ಟ್ಯಾಬ್ಲೆಟ್‌ಗಳಲ್ಲಿ 7 ಇಂಚಿನ ಟಚ್‌ಸ್ಕ್ರೀನ್‌ ನೊಂದಿಗೆ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿವೆ.

ಪ್ರೊಸೆಸರ್‌: ಈ ವಿಭಾಗದಲ್ಲಿ ವ್ಯಾಮಿ ಡಿಸೈರ್‌ ಕೊಂಚ ಉತ್ತಮವಾದ 1.5GHz ಡ್ಯುಯೆಲ್‌ ಕೋರ್‌ ARM ಕಾರ್ಟೆಕ್ಸ್‌ A9 ಪ್ರೊಸೆಸರ್‌ ಹೊಂದಿದ್ದರೆ, ಕಾರ್ಬನ್‌ ಸ್ಮಾರ್ಟ್‌ ಟ್ಯಾಬ್‌ 2 ನಲ್ಲಿ 1.2 GHz ಎಕ್ಸ್‌ ಬರ್ಸ್ಟ್‌ ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ವ್ಯಾಮಿ ಡಿಸೈರ್‌ ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ OS ಹೊಂದಿದ್ದರೆ, ಸ್ಮಾರ್ಟ್‌ ಟ್ಯಾಬ್‌ 2 ನಲ್ಲಿ ಆಂಡ್ರಾಯ್ಡ್‌ 4.0.3 ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌ OS ಹೊಂದಿದ್ದು ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ OS ಗೆ ಪರಿವರ್ತಿಸಿ ಕೊಳ್ಳಬಹುದಾಗಿದೆ.

ಕ್ಯಾಮೆರಾ: ಕ್ಯಾಮೆರಾ ವಿಭಾಗದಲ್ಲಿ ಸ್ಮಾರ್ಟ್‌ 2 ಟ್ಯಾಬ್‌ 2MP ಮುಂಬದಿಯ ಕ್ಯಾಮೆರಾ ಹೊಂದಿದ್ದರೆ, ವ್ಯಾಮಿ ಡಿಸೈರ್‌ 0.3MP ಮುಂಬದಿಯ VGA ಕ್ಯಾಮೆರಾ ಹೊಂದಿದೆ. ಅಂದಹಾಗೆ ಎರೆಡೂ ಟ್ಯಾಬ್‌ಗಳಲ್ಲಿ ಹಿಂಬದಿಯ ಕ್ಯಾಮೆರಾಗಳಿಲ್ಲ.

ಸ್ಟೋರೇಜ್‌: ವ್ಯಾಮಿ ಡಿಸೈರ್‌ ನಲ್ಲಿ 8GB ಆಂತರಿಕ ಮೆಮೊರಿಯೊಂದಿಗೆ 1GB RAM ಹೊಂದಿದೆ, ಮತ್ತೊಂದೆಡೆ ಸ್ಮಾರ್ಟ್‌ ಟ್ಯಾಬ್‌ 2 ನಲ್ಲಿ 4 GB ಆಂತರಿಕ ಮೆಮೊರಿ ಹಾಗೂ 512 MB RAM ಒಳಗೊಂಡಿದೆ. ಎರಡೂ ಟ್ಯಾಬ್ಲೆಟ್‌ಗಳನ್ನು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ವ್ಯಾಮಿ ಡಿಸೈರ್‌ ನಲ್ಲಿ Wi-Fi 802.11 b/g/n ಹಾಗೂ ಡಾಂಗಲ್‌ ಮೂಲಕ 3G ಸೌಲಭ್ಯ ಹೊಂದಿದೆ, ಹಾಗೂ ಸ್ಮಾರ್ಟ್‌ ಟ್ಯಾಬ್‌ 2 ನಲ್ಲಿ Wi-Fi, ಬ್ಲೂಟೂತ್‌ ಹಾಗೂ ಡಾಂಗಲ್‌ ಮೂಲಕ 3G ಹೊಂದಿದೆ..

ಬ್ಯಾಟರಿ: ವ್ಯಾಮಿ ಡಿಸೈರ್‌ನಲ್ಲಿ 3,000 mAh Li-ion ಬ್ಯಾಟರಿ ಇದ್ದು 6 ಗಂಟೆಗಳ ಬ್ಯಾಕಪ್‌ ನೀಡುತ್ತದೆ, ಹಾಗೂ ಸ್ಮಾರ್ಟ್‌ ಟ್ಯಾಬ್‌ 2 ನಲ್ಲಿ 3,700 mAh Li-ion ಬ್ಯಾಟರಿ ಹೊಂದಿದ್ದು ಕ್ಷಮತೆ ಕುರಿತಾಗಿ ಸಂಸ್ಥೆ ಮಾಹಿತಿ ನೀಡಿಲ್ಲ.

ಬೆಲೆ: ಅಗ್ಗದ ಬೆಲೆಯ ಟ್ಯಾಬ್ಲೆಟ್‌ ಗಳಾದ್ದರಿಂದ ವ್ಯಾಮಿ ಡಿಸೈರ್‌ 6,499 ರೂ. ದರದಲ್ಲಿ ಲಭ್ಯವಾಗಲಿದೆ ಹಾಗೂ ಸ್ಮಾರ್ಟ್‌ ಟ್ಯಾಬ್‌ 2 ರೂ. 6,999 ದರದಲ್ಲಿ ಲಭ್ಯವಿದೆ.

2012 ರ ಅತ್ಯತ್ತಮ ಟ್ಯಾಬ್ಲೆಟ್ ಗಳ ಹೋಲಿಕೆ ಪಟ್ಟಿ

Read In English...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X