ವಿಂಡೋಸ್ 8 ಏಕೆ ಅವಶ್ಯಕ

By Varun
|
ವಿಂಡೋಸ್ 8 ಏಕೆ ಅವಶ್ಯಕ

ನಾವೆಲ್ಲಾ ಕಾತರದಿಂದ ಕಾಯುತ್ತಿರುವ ವಿಂಡೋಸ್-8 ತಂತ್ರಾಂಶದ ವಿಶೇಷತೆಗಳು ಏನು ಎಂಬ ಕುತೂಹಲ ಮೂಡದೆ ಇರದು. ಬನ್ನಿ ವಿನ್ ಡೋಸ್ ನ ವಿನೂತನಅಂಶಗಳನ್ನುತಿಳಿದುಕೊಳ್ಳೋಣ.

1) ಚಿತ್ರಗಳ ಗುಪ್ತ ಪದ(ಪಾಸ್ವರ್ಡ್):ಇನ್ನು ಮುಂದೆ ನೀವು ಅಕ್ಷರ ಹಾಗು ಅಂಕಿಗಳ ಮೂಲಕ ಪಾಸ್ವರ್ಡ್ ಸೃಷ್ಟಿಸುವ ಕಾಲ ಹೋಗಲಿದೆ. ವಿಂಡೋಸ್ ನ ಸೆನ್ಸಾರ್ ಗಳ ಮೂಲಕ ನೀವು ಸಂಜ್ಞೆ ಹಾಗು ಚಿತ್ರ ಬರೆಯುವ ಮೂಲಕ ಪಾಸ್ವರ್ಡ್ ಸೃಷ್ಟಿ ಮಾಡಬಹುದಾಗಿದೆ.

2 ) ವಿಂಡೋಸ್ ಎಲ್ಲಿಯಾದರೂ ಕೊಂಡೊಯ್ಯಬಹುದು : ಹೌದು. ನೀವು ಸಂಪೂರ್ಣ ವಾದ ವಿಂಡೋಸ್ ಅನ್ನು ಪೆನ್ ಡ್ರೈವ್, ಇಲ್ಲವೆ ಬಾಹ್ಯ ಹಾರ್ಡ್ ಡಿಸ್ಕ್ ಗಳಲ್ಲೂ ಹಾಕಿಕೊಂಡು ಹೋಗಬಹುದು .

3) ರಿಫ್ರೆಶ್& ರೀ ಸೆಟ್ ಸೌಲಭ್ಯ : ಒಮ್ಮೆಲೇ ಅನೇಕ ಅಪ್ಪ್ಲಿಕೇಶನ್ ಗಳನ್ನು ಉಪಯೋಗಿಸಿದರೂ ಕೂಡ ನಿಮ್ಮ ಗಣಕದ ವೇಗ ಕಡಿಮೆಯಾಗುವುದಿಲ್ಲ . ಫಾರ್ಮ್ಯಾಟ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ.

4)ಸ್ವಯಂ ಅಪ್ಡೇಟ್ :ಸಾಮಾನ್ಯ ವಾಗಿ ವಿನ್ಡೋಸ್ ನ ಯಾವುದಾದರೂ ಹೊಸ ತಂತ್ರಾಂಶದ ಫೈಲ್ ಅಪ್ಡೇಟ್ ಆಗುವುದಿದ್ದರೆ ರೀ ಸ್ಟಾರ್ಟ್ ಮಾಡಬೇಕಾಗುತ್ತದೆ. ಆದರೆ ವಿನ್ ಡೋಸ್ ನ ಹೊಸ ತಂತ್ರಜ್ಞಾನದಿಂದ ನೀವು ರೀ ಸ್ಟಾರ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಇಷ್ಟೆಲ್ಲಾ ವಿನೂತನ ಅಂಶಗಳಿರುವ ವಿಂಡೋಸ್-8 ದೊಡ್ಡ ಸುದ್ದಿ ಮಾಡಿರುವುದು ಅತಿಶಯೋಕ್ತಿಯೇನಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X