ವಿಪ್ರೊ ಹೊರತರಲಿದೆ 14 ಇಂಚ್ ನೋಟ್ ಬುಕ್

Posted By: Varun
ವಿಪ್ರೊ ಹೊರತರಲಿದೆ 14 ಇಂಚ್ ನೋಟ್ ಬುಕ್

ಭಾರತದ ಪ್ರಖ್ಯಾತ ಐ.ಟಿ ಕಂಪನಿ ವಿಪ್ರೋ, ತೆಳ್ಳನೆಯ ನೋಟ್ ಬುಕ್ ಗಳ ಸರಣಿ ಹೊರತಂದಿದೆ. ಈ ನೋಟ್ ಬುಕ್ ಗಳು ಭಾರತ ದಲ್ಲೇ ಅತ್ಯಂತ ಸ್ಲಿಮ್ ಎಂದು ಕಂಪನಿ ಘೋಷಿಸಿಕೊಂಡಿದೆ.

ಈ ನೋಟ್ ಬುಕ್ ಗಳಲ್ಲಿ ಒಂದಾದ 14-ಇಂಚಿನ ವಿಪ್ರೊ ಏರೋ ಅಲ್ಟ್ರಾ ಭಾರತದಲ್ಲೇ ಅತ್ಯಂತ ತೆಳ್ಳನೆಯ ನೋಟ್ ಬುಕ್ ಆಗಿದ್ದು ಕೇವಲ 1.7 ಕೆಜಿ ತೂಗುತ್ತದೆ. ಇದು 4 GB ಆಂತರಿಕ ಮೆಮೊರಿ ಹೊಂದಿದ್ದು, 500 GB ಹಾರ್ಡ್ ಡಿಸ್ಕ್ ಜೊತೆ ಬರಲಿದೆ. ಇದರ ಸಂರಚನೆ ದೈನಂದಿನ ಬಳಕೆಗೆ ಸೂಕ್ತವಾಗಿದ್ದು ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Please Wait while comments are loading...
Opinion Poll

Social Counting