Subscribe to Gizbot

ಕನ್ನಡ ಸಪೋರ್ಟ್ ಮಾಡುವ ವಿಶ್ ಟೆಲ್ ಟ್ಯಾಬ್ಲೆಟ್

Posted By: Varun
ಕನ್ನಡ ಸಪೋರ್ಟ್ ಮಾಡುವ ವಿಶ್ ಟೆಲ್ ಟ್ಯಾಬ್ಲೆಟ್

ಆಂಡ್ರಾಯ್ಡ್ ತಂತ್ರಾಂಶ ಉಚಿತ ತಂತ್ರಾಂಶವಾಗಿರುವುದರಿಂದ ಸುಮಾರು ಕಂಪನಿಗಳು ಕಡಿಮೆ ಬಜೆಟ್ ನ ಟ್ಯಾಬ್ಲೆಟ್ ಅನ್ನು ಉತ್ಪಾದಿಸಿ ಬಿಟ್ಟರೆ ಲಾಭ ಮಾಡಿಕೊಳ್ಳಬಹುದು ಎಂಬ ಆಸೆಯಿಂದ ಹಲವಾರು ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬಂದವು. ಆದರೆ ಅವುಗಳುಪ್ರಾಂತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಟ್ಯಾಬ್ಲೆಟ್ ಗಳನ್ನು ತಂದಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತು.

ಈಗ ಅಂಥಹ ಕೆಲಸ ಮಾಡಿದೆ ವಿಶ್ ಟೆಲ್ ಕಂಪನಿ,ಇರಾ ಥಿಂಗ್ 2 ಎಂಬ ಟ್ಯಾಬ್ಲೆಟ್ ಅನ್ನು ಹೊರತರುವುದರೊಂದಿಗೆ. ಕನ್ನಡ ಸೇರಿದಂತೆ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 14 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಇದು ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಹೊಂದಿದ್ದು 6,500 ರೂಪಾಯಿಗೆ ಬರಲಿದೆ.

ಇದಷ್ಟೇ ಅಲ್ಲದೆ 120 ಲೋಕಲ್ ಚಾನಲ್ ಗಳನ್ನು ನೋಡುವ ಟಿವಿ ಆಪ್ ಹಾಗು, ಇ-ನ್ಯೂಸ್ ಆಪ್ ನಿಂದ ನೀವು ಪ್ರತಿನಿತ್ಯ ನಿಮ್ಮ ಭಾಷೆಯಲ್ಲಿ ಸುದ್ದಿ ಓದಬಹುದಾದ ಆಪ್ ಕೂಡ ಇದೆ.

ಇದರ ವಿಶೇಷತೆಗಳು ಈ ರೀತಿ ಇವೆ:

  • 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

  • 1.5 GHz ಪ್ರೋಸೆಸರ್

  • 1.3MP ಕ್ಯಾಮರಾ

  • 512MB ರಾಮ್

  • 4GB ಆಂತರಿಕ ಮೆಮೊರಿ, 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • USB 2.0, 3.5MM ಜ್ಯಾಕ್, ಮೈಕ್ರೋ SD ಕಾರ್ಡ್ ಸ್ಲಾಟ್, ಮಿನಿ HDMI, ಮತ್ತು ಮೈಕ್ ಪೋರ್ಟ್

  • ಗೂಗಲ್ ಪ್ಲೇ ಸ್ಟೋರ್

  • 3G ಮತ್ತು ವೈಫೈ ಸಂಪರ್ಕ

  • 4 ಗಂಟೆ ಸಾಮರ್ಥ್ಯದ 3000 mAh ಬ್ಯಾಟರಿ
 

ನೀಲಿ, ಕಪ್ಪು, ಬಿಳಿ, ಕೆಂಪು,ಹಳದಿ ಹಾಗು ಪಿಂಕ್ ಬಣ್ಣಗಳಲ್ಲಿ ಈ ಟ್ಯಾಬ್ಲೆಟ್ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot