ಮಾಡೆಲ್ ಹಳೆಯದಾದರೂ ಇಂದಿಗೂ ಮಾರಾಟವಾಗುತ್ತಿದೆ ಈ ಲ್ಯಾಪ್ ಟಾಪ್

By Gizbot Bureau
|

ಹೆಚ್ಚಿನ ಕಂಪೆನಿಗಳು ಕರ್ವ್ಡ್ ಸ್ಕ್ರೀನ್ ಇರುವ ಲ್ಯಾಪ್ ಟಾಪ್ ನ್ನು ಬಿಡುಗಡೆಗೊಳಿಸುವುದಕ್ಕೆ ಅಷ್ಟೇನು ಆಸಕ್ತಿ ತೋರಿಸದೇ ಇರುವುದಕ್ಕೆ ಕೆಲವು ಅತ್ಯುತ್ತಮವಾದ ಕಾರಣಗಳಿವೆ. ಕರ್ವೇಚರ್ ಇರುವ ಡಿಸ್ಪ್ಲೇ ಮಾಡುವುದಕ್ಕೆ ಹೆಚ್ಚು ಸ್ಪೇಸ್ ಅಥವಾ ಜಾಗ ಬೇಕಾಗುತ್ತದೆ ಎಂಬುದು ಅವುಗಳಲ್ಲಿ ಮುಖ್ಯವಾಗಿರುವ ಒಂದು ಕಾರಣವಾಗಿದ್ದು ಅದನ್ನು ಲ್ಯಾಪ್ ಟಾಪ್ ನಲ್ಲಿ ಒದಗಿಸುವುದು ಅಷ್ಟು ಸುಲಭದ ಮಾತಲ್ಲ.

ಏಸರ್

ಆದರೆ ಏಸರ್ ಕಂಪೆನಿಯನ್ನು ಈ ನಿಟ್ಟಿನಲ್ಲಿ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ. ಅಂದರೆ ಜಗತ್ತಿನ ಮೊದಲ ಕರ್ವ್ಡ್ ಡಿಸ್ಪ್ಲೇ ಇರುವ ಲ್ಯಾಪ್ ಟಾಪ್ ನ್ನು ಈ ಸಂಸ್ಥೆ ಬಿಡುಗಡೆಗೊಳಿಸಿತ್ತು. ಅದುವೇ ಪ್ರೀಡೇಟರ್ 21ಎಕ್ಸ್.

ಬ್ಯುಸಿನೆಸ್ ಲ್ಯಾಪ್ ಟಾಪ್

ಈಗಲೂ ಕೂಡ ನೀವೇನಾದರೂ ಈ ಲ್ಯಾಪ್ ಟಾಪ್ ಬಗ್ಗೆ ಆಸಕ್ತಿ ಹೊಂದಿದ್ದರೆ ಯುಎಸ್ ರೀಟೈಲರ್ ಈಗಲೂ ಕೂಡ ಇದನ್ನು ಮಾರಾಟ ಮಾಡುತ್ತಿದ್ದು ಇದರ ಬೆಲೆ ಅಂದಾಜು $9,935. ಇದು ಬಿಡುಗಡೆಯ ಸಂದರ್ಬದಲ್ಲಿ ಇದ್ದ ಬೆಲೆಗಿಂತ ಹೆಚ್ಚಿನ ಬೆಲೆಯಾಗಿದೆ.ಮಾರುಕಟ್ಟೆಯಲ್ಲಿರುವ ಬೆಸ್ಟ್ ಬ್ಯುಸಿನೆಸ್ ಲ್ಯಾಪ್ ಟಾಪ್ ಇದಾಗಿದೆ.

ಲ್ಯಾಪ್ ಟಾಪ್ ನ ವೈಶಿಷ್ಟ್ಯತೆಗಳು

ಲ್ಯಾಪ್ ಟಾಪ್ ನ ವೈಶಿಷ್ಟ್ಯತೆಗಳು

ದಿ ಪ್ರಿಡೇಟರ್ 21 X ಮೊದಲ ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಲ್ಯಾಪ್ ಟಾಪ್ ಆಗಿದೆ. ಹಾಗಂತ ಇದು ನೀವು ಬೇಡುವ ಎಲ್ಲಾ ವೈಶಿಷ್ಟ್ಯೆಯನ್ನು ಕೂಡ ನೀಡುತ್ತದೆ ಎಂದು ಭಾವಿಸಬೇಡಿ.

ಇದರಲ್ಲಿ ಸರಿಯಾದ ಕ್ರಮದ ಮೆಕಾನಿಕಲ್ ಕೀಬೋರ್ಡ್ ಇದೆ.ನಾಲ್ಕು ಸ್ಪೀಕರ್ ಗಳು/ಡುಯಲ್ ವೂಫರ್ ಸೆಟ್ ಅಪ್,ಮೂರು ಫ್ಯಾನ್ ಗಳು ಮತ್ತು ಎರಡು (yes, two) 330W ಪವರ್ ಸಪ್ಲೈ ಯುನಿಟ್ಸ್ ಇದ್ದು 8-ಸೆಲ್ ಬ್ಯಾಟರಿಯನ್ನು ತುಂಬಿಸುವ ಸಾಮರ್ಥ್ಯ ಹೊಂದಿದೆ.

ಪ್ರೀಡೇಟರ್ 21 X

ಡೆಸ್ಕ್ ಟಾಪ್ ಗ್ರೇಡ್ ಇಂಟೆಲ್ ಕೋರ್ i7-7820HK, 64GB of RAM, SATA-mode ನಲ್ಲಿ ಎರಡು SSD, ಜೊತೆಗೆ 1TB ಹಾರ್ಡ್ ಡಿಸ್ಕ್ ಡ್ರೈವ್ ಬ್ಯಾಕ್ ಅಪ್, ಮತ್ತು ಎರಡು SLIನಲ್ಲಿ Nvidia Geforce GTX 1080 ಜೊತೆಗೆ 16GB GDDR5 RAM.

ಪ್ರೀಡೇಟರ್ 21 X ನ ತೂಕ 10Kg ಗೂ ಅಧಿಕವಾಗಿದ್ದು ಇದರಲ್ಲಿ PSU ಕೂಡ ಸೇರಿರುತ್ತದೆ.ಇದರಲ್ಲಿ ಅತೀ ದೊಡ್ಡ ಅಂದರೆ (22.4 x 12.4 x 3.3in) ಮತ್ತು ಅತ್ಯಂತ ಲೋಡ್ ನಲ್ಲಿ ಕಡಿಮೆ ಬ್ಯಾಟರಿ ಲೈಫ್ ಹೊಂದಿರುತ್ತದೆ. ಈ ಲ್ಯಾಪ್ ಟಾಪ್ ಗೇಮಿಂಗ್ ಲ್ಯಾಪ್ ಟಾಪ್ ಎಂದು ಬಿಡುಗಡೆಗೊಳಿಸಲಾಗಿತ್ತು. ಇದನ್ನು ಮೊಬೈಲ್ ವರ್ಕ್ ಸ್ಟೇಷನ್ ಆಗಿಯೂ ಕೂಡ ಕಾರ್ಯ ನಿರ್ವಹಿಸಲು ಬಳಸಲಾಗುತ್ತದೆ.ಬೆಸ್ಟ್ ವೀಡಿಯೋ ಎಡಿಟಿಂಗ್ ಲ್ಯಾಪ್ ಟಾಪ್ ನ ಲಿಸ್ಟ್ ನಲ್ಲಿ ಈ ಲ್ಯಾಪ್ ಟಾಪ್ ನ್ನು ಸೇರಿಸುವುದಕ್ಕೆ ಅಸಾಧ್ಯ. ಒಟ್ಟಿನಲ್ಲಿ ಮಾಡೆಲ್ ಹಳೆಯದಾದರೂ ಇಂದಿಗೂ ಮಾರಾಟ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿದೆ ಎಂಬುದೇ ವಿಶೇಷ.

Most Read Articles
Best Mobiles in India

Read more about:
English summary
World's Biggest Screen Laptop Is Still On Sale Even After Two Years Of Launch

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X