ಇಂಟರ್ನೆಟ್ ಇಲ್ಲದ ಜಗತ್ತು ಹೇಗಿರುತ್ತೆ ?

Posted By: Staff

ಇಮೇಜ್ ಕೃಪೆ:ಟ್ರಾವೆಲೆಟ್.ಕಾಮ್

ನೀವು ಯಾವತ್ತಾದರೂ ಇಂಟರ್ನೆಟ್ ಇಲ್ಲದ ಜಗತ್ತನ್ನು ಊಹಿಸಿಕೊಂಡಿದ್ದೀರ ? ಅಬ್ಬಾ! ಊಟವಿಲ್ಲದೆ ಒಂದೆರಡು ದಿನವಾದರೂ ಕಾಲ ದೂಡಬಹುದು. ಆದರೆ ಪ್ರತಿನಿತ್ಯ ಆನ್ಲೈನ್ ಚಟ ಇದ್ದವರಿಗೆ ಇಂಟರ್ನೆಟ್ ಇಲ್ಲದ ದಿನವನ್ನು ಕಲ್ಪಿಸಿಕೊಂಡರೆ ಭಯ ಆಗುತ್ತೆ. ಯಾಕೆಂದರೆ ನಾವು ಅದರ ಮೇಲೆ ಅಷ್ಟು ಅವಲಂಬಿತರಾಗಿದ್ದೇವೆ.

ದಿನ ಬೆಳಗ್ಗೆ ಎದ್ದರೆ ಹಲ್ಲುಜ್ಜಿ ಕಾಫಿ, ಟೀ ಕುಡಿದು, ತಿಂಡಿ ತಿಂದು, ಆಫೀಸ್ ಗೆ ಬಂದು, ಕಂಪ್ಯೂಟರ್ ಅನ್ನು ಆನ್ ಮಾಡಿ ಮಾಡುವ ಮೊದಲ ಕೆಲಸ ಎಂದರೆ ಇಂಟರ್ನೆಟ್ ನಲ್ಲಿ ಬ್ರೌಸ್ ಮಾಡುವುದು. ಸುದ್ದಿ ಹುಡುಕುವುದು, ಗೂಗಲ್ ಸರ್ಚ್ ಮಾಡುವುದು,ಚಾಟ್ ಮಾಡುವುದು, ಫೇಸ್ ಬುಕ್ ನಲ್ಲಿ ಯಾರು ಏನು ಲೈಕ್ ಮಾಡಿದ್ದಾರೆ ಅಂತ ನೋಡುವುದು, ಹೊಸ ಹಾಡು ಇದ್ದರೆ ಹುಡುಕುವುದು, ಯೂಟ್ಯೂಬ್ ನಲ್ಲಿ ವೀಡಿಯೋ ನೋಡುವುದು, ವಿಕಿಪೀಡಿಯಾದಲ್ಲಿ ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾಹಿತಿ ಪಡೆಯುವುದು, ಹೀಗೆ ಅನೇಕ ಕಾರಣಗಳಿಂದಾಗಿ ನಾವು ಇಂಟರ್ನೆಟ್ ಮೇಲೆ ಅವಲಂಬಿತರಾಗಿದ್ದೇವೆ.

ಇತ್ತೀಚೆಗೆ ಹಲವಾರು ದೇಶಗಳಲ್ಲಿ ಇಂಟರ್ನೆಟ್ ಅನ್ನು ಸೆನ್ಸಾರ್ ಗೆ ಒಳಪಡಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಅಕಸ್ಮಾತ್ ಇಂಟರ್ನೆಟ್ ಏನಾದರೂ ಬಂದ್ ಮಾಡಿದರೆ ಏನಾಗಬಹುದು ಎಂದು ಆನ್ಲೈನ್ ಎಜುಕೇಶನ್.ನೆಟ್ ಎಂಬ ಕಂಪನಿಯೊಂದು ಇನ್ಫೋಗ್ರಫಿಕ್ ಒಂದನ್ನು ಪ್ರಕಟಿಸಿದೆ.

ನೋಡಲು ಮಜವಾಗಿರುವ ಈ ಇನ್ಫೋಗ್ರಫಿಕ್ ಅನ್ನು ಒಮ್ಮೆ ಓದಿ ಆದರೆ ಗಾಬರಿಗೊಳ್ಳಬೇಡಿ ಅಷ್ಟೇ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot