Subscribe to Gizbot

ಜಗತ್ತಿನ 1st ಟೇಬಲ್ ಟಾಪ್ ಆಂಡ್ರಾಯ್ಡ್ ಟ್ಯಾಬ್ಲೆಟ್

Posted By: Varun
ಜಗತ್ತಿನ 1st ಟೇಬಲ್ ಟಾಪ್ ಆಂಡ್ರಾಯ್ಡ್ ಟ್ಯಾಬ್ಲೆಟ್

ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಎಷ್ಟೋ ಕಂಪನಿಗಳು ಟ್ಯಾಬ್ಲೆಟ್ ಗಳನ್ನ ಬಿಡುಗಡೆ ಮಾಡಿವೆ, ಹೊಸ ಹೊಸ ಕಂಪನಿಗಳು ಬಿಡುಗಡೆ ಮಾಡುತ್ತಲೇ ಇವೆ. ಆದರೆ ವಿಭಿನ್ನವಾದ ಅಂಶಗಳುಯಾವುವೂಅವುಗಳಲ್ಲಿ ಹೆಚ್ಚಾಗಿ ಇರುವುದಿಲ್ಲ. ಕೇವಲ ಆಂಡ್ರಾಯ್ಡ್ ತಂತ್ರಾಂಶ ಇದ್ದರೆ ಸಾಕು ಜನ ಖರೀದಿಸುತ್ತಾರೆ ಎಂಬ ಮಾರ್ಕೆಟಿಂಗ್ ತಂತ್ರ ಇರಬಹುದು. ಈ ರೀತಿಯ ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದು, ಭಾರತೀಯ ಕಂಪನಿಯಾದ ಮಿಲಾಗ್ರೋ ಈಗ ವಿಶ್ವದ ಮೊದಲ ಟೇಬಲ್ ಟಾಪ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

ಮಹಿಳೆಯರಿಗೆಂದೇ ವಿಶೇಷವಾದ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದ ಈ ಕಂಪನಿ, ವಿಭಿನ್ನ ರೀತಿಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತರಲು ಹೊಸ ಪ್ರಯತ್ನ ಮಾಡುತ್ತಿದ್ದು, ಅದರ ಅಂಗವಾಗಿ ಈಗ ಡೆಸ್ಕ್ ಟಾಪ್ ಕಂಪ್ಯೂಟರ್ ರೀತಿಯಲ್ಲೇ ಕೆಲಸ ಮಾಡುವ ಟ್ಯಾಬ್ ಟಾಪ್ 7.4 ಹೆಸರಿನ ಟ್ಯಾಬ್ಲೆಟ್ಹೊರತಂದಿದ್ದು, ನೋಡುವುದಕ್ಕೆ ಸುಂದರವಾಗಿದೆ.

ಈ ಟ್ಯಾಬ್ ಟಾಪ್ 7.4 ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ :

 • 7 ಇಂಚ್ ಟಚ್ ಸ್ಕ್ರೀನ್

 • ಆಂಡ್ರಾಯ್ಡ್ 4.೦ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

 • 1.2 GHz ಪ್ರೊಸೆಸರ್, ARM ಕಾರ್ಟೆಕ್ಸ್ A8 SoC

 • 4:3 ಅನುಪಾತದ ಸ್ಕ್ರೀನ್

 • 4GB ಆಂತರಿಕ ಮೆಮೊರಿ

 • ಬಾಹ್ಯ ಶೇಖರಣೆಗೆ SD ಕಾರ್ಡ್ ಸ್ಲಾಟ್

 • 512MB DDR3 ರಾಮ್

 • 1.3MP ಕ್ಯಾಮರಾ

 • 3G, USB ಹಾಗು ವೈಫೈ ಸೌಲಭ್ಯ

 • ಮೋಡೆಮ್ ರೀತಿಯಲ್ಲಿ 8 ಕಂಪ್ಯೂಟರ್ ಹಾಗು 5 ವಿಭಿನ್ನ ಸಾಧನಗಳನ್ನು ವೈಫೈ ಮೂಲಕ ಕನೆಕ್ಟ್ ಮಾಡಬಹುದಾದ ಫೀಚರ್.

 • ಆಡಿಯೋ ಹಾಗು ವೀಡಿಯೋ ಪ್ಲೇಯರ್

 • 55 ಕ್ಕೂ ಹೆಚ್ಚು ಪ್ರೀ ಲೋಡೆಡ್ ಆಪ್ಸ್
 

ಈ ಟ್ಯಾಬ್ಲೆಟ್ ನ ಬೆಲೆ 10,990 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot