Home
ಕಂಪ್ಯೂಟರ್‌‌

ಜಗತ್ತಿನ 5 ಪ್ರಳಯಾಂತಕ ಹ್ಯಾಕರ್ಸ್ ಯಾರು?

By Varun
ಜಗತ್ತಿನ 5 ಪ್ರಳಯಾಂತಕ ಹ್ಯಾಕರ್ಸ್ ಯಾರು?

ಇಂಟರ್ನೆಟ್ ಜಗತ್ತಿನಲ್ಲಿ ಹ್ಯಾಕರ್ ಎಂಬ ಪದ ಕೇಳಿದೊಡನೆ ನಮ್ಮ ತಲೆಗೆ ಮೊದಲು ಬರುವುದು, ಅನಧೀಕೃತವಾಗಿ ಇನ್ನೊಬ್ಬರ ಕಂಪ್ಯೂಟರ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡು ಅತ್ಯಮೂಲ್ಯವಾದ ಮಾಹಿತಿ ಕದಿಯುವ ನೆಟ್ ಚೋರರು ಇಲ್ಲವೆ ಕುಚೇಷ್ಟೆ ಮಾಡಿ ಕಾನೂನಿಗೆ ವಿರುದ್ಧವಾಗಿ ಮಾಹಿತಿ ಹಾಳು ಮಾಡುವ ತಲೆಹರಟೆಗಳು ಎಂದು.

ಆದರೆ ಎಲ್ಲಾ ಹ್ಯಾಕರ್ ಗಳು ಆ ರೀತಿ ಇರುವುದಿಲ್ಲಕೆಲವರು ತಪ್ಪನ್ನು ತಿದ್ದಿಕೊಂಡು, ಎಥಿಕಲ್ ಹ್ಯಾಕರ್ ಗಳು ಎಂದು ಕರೆಯಲ್ಪಡುವ, ದೇಶಕ್ಕೆ, ಕಾನೂನಿನ ರಕ್ಷಣೆ ಮಾಡುವ ಹ್ಯಾಕರ್ಗಳು ಆದವರೂ ಇದ್ದಾರೆ. ಅಂಥಹ ಹ್ಯಾಕರ್ ಗಳ ವಿವರ ಇಲ್ಲಿದೆ ನೋಡಿ.

ಕೆವಿನ್ ಮಿಟ್ನಿಕ್- ಅಮೆರಿಕಾದ ನೊಟೋರಿಯಸ್ ಹ್ಯಾಕರ್ ಕೆವಿನ್ ಮಿಟ್ನಿಕ್ ಒಂದು ಕಾಲದಲ್ಲಿ ಪೆಂಟಗಾನ್, ಡಿಜಿಟಲ್ ಏಕ್ವಿಪ್ ಮೆಂಟ್ ಕಾರ್ಪ್ ನಂತಹ ಸಂಸ್ಥೆಗಳ ಕಂಪ್ಯೂಟರುಗಳನ್ನು ಹ್ಯಾಕ್ ಮಾಡಿ ಸಿಕ್ಕಿಕೊಂಡಿದ್ದ ಈತ ಈಗ ಜೈಲಿನಿಂದ ಹೊರಬಂದ ಮೇಲೆ, ತಾನು ಹೇಗೆ ಹ್ಯಾಕ್ ಮಾಡಿದ ಎಂದು ತಿಳಿಸಿಕೊಡುವ "Ghost in the Wires" ಎಂಬ ಪುಸ್ತಕ ಹೊರತಂದು ಸಾಕಷ್ಟು ಹೆಸರುವಾಸಿಯಾಗಿದ್ದಾನೆ.

ಜಾರ್ಜ್ ಹೊತ್ಜ್ - 22 ವರ್ಷದ ಈತ ಆಪಲ್ ನ ಐಫೋನ್ ಅನ್ನು ಜೈಲ್ ಬ್ರೇಕ್ ಮಾಡಿದ್ದ ಹಾಗು ಸೋನಿ ಪ್ಲೇ ಸ್ಟೇಶನ್ 3 ಅನ್ನೇ ಹ್ಯಾಕ್ ಮಾಡಿದ್ದ ಭೂಪ. ಸೋನಿ ಈತನ ಮೇಲೆ ಕೇಸ್ ಜಡಿದ ಮೇಲೆ ಸುಮ್ಮನಾದ ಈತನಿಗೆ ಫೆಸ್ ಬುಕ್ ಕರೆದು ಕೆಲಸ ಕೊಟ್ಟಿದೆ.

ರಾಬರ್ಟ್ ಮೊರಿಸ್- 1988 ರಲ್ಲಿ ಅಂತರ್ಜಾಲದ ಮೂಲಕ ಸಾವಿರಾರು ಕಂಪ್ಯೂಟರುಗಳನ್ನು ಕ್ರಾಶ್ ಆಗುವಂತೆ ಮಾಡಿದ್ದ ಈತನಿಗೆ 10 ಸಾವಿರ ಡಾಲರ್ ದಂಡ ವಿಧಿಸಲಾಗಿತ್ತು. ಸದ್ಯಕ್ಕೆ ಈತ MIT ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾನೆ.

ಮಾಕ್ಸ್ ಬಟ್ಲರ್- ಮಾಜಿ FBI ಮಾಹಿತಿದಾರನಾಗಿದ್ದ ಈತ ಕದ್ದ ಕ್ರೆಡಿಟ್ ಕಾರ್ಡ್ ಗಳನ್ನು ನಿರ್ವಹಿಸುವ CardersMarket ಹೆಸರಿನ ವೆಬ್ಸೈಟ್ ಹೊಂದಿದ್ದ. ತನ್ನ ಸಹಚರರು, ಕದ್ದ ಕ್ರೆಡಿಟ್ ಕಾರ್ಡ್ ಉಪಯೋಗಿಸುವಾಗ ಸಿಕ್ಕಿಹಾಕಿಕೊಂಡು ಕೊನೆಗೆ ತಾನೂ 13 ವರ್ಷ ಜೈಲು ವಾಸ ಅನುಭವಿಸಬೇಕಾಯ್ತು. ಹೆಚ್ಚೂ ಕಡಿಮೆ 20 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ಉಪಯೋಗಿಸಿ ಬಟ್ಲರ್ ದೋಚಿದ ಮೊತ್ತ 86 ಕೋಟಿ ಡಾಲರ್!

ಕೆವಿನ್ ಪೌಲ್ಸೆನ್- ಲಾಸ್ ಎಂಜಲೀಸ್ ರೇಡಿಯೋ ಒಮ್ಮೆ ಸ್ಪರ್ಧೆ ಏರ್ಪಡಿಸಿತ್ತು. ಅದರಂತೆ 102 ನೇ ಲಕ್ಕಿ ಕಾಲರ್ ಗೆ ಪಾರ್ಶ್ ಕಾರ್ ಬಹುಮಾನ ಘೋಷಿಸಿತ್ತು. ಆ ಕಾರ್ ತಾನೇ ಗೆಲ್ಲಬೇಕು ಎಂದು ಪಣ ತೊಟ್ಟ ಕೆವಿನ್ ಪೌಲ್ಸೆನ್ ನಗರದ ಎಲ್ಲಾ ಫೋನು ಲೈನುಗಳನ್ನು ಹ್ಯಾಕ್ ಮಾಡಿ ತಾನೇ ಆ 102 ನೇ ಕಾಲರ್ ಆಗುವಂತೆ ಮಾಡಿ ಕಾರ್ ಅನ್ನು ಗೆದ್ದಿದ್ದ. ಇದಕ್ಕಾಗಿ 5 ವರ್ಷ ಸೆರೆಮನೆ ವಾಸ ಅನುಭವಿಸಿದ್ದ ಕೆವಿನ್, wired.com ನ ಸಂಪಾದಕ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+