ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬರಿ 4899 ರೂಪಾಯಿ

By Varun
|
ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬರಿ 4899 ರೂಪಾಯಿ

ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್, ಐಬಾಲ್, ಇಂಟೆಕ್ಸ್ ನಂತರ ಭಾರತದ ಕಂಪ್ಯೂಟರ್ ಉತ್ಪಾದಕ ಚಾಂಪಿಯನ್ ಕಂಪ್ಯೂಟರ್ಸ್ ಈಗ ಟ್ಯಾಬ್ಲೆಟ್ ಉತ್ಪಾದನೆಗೂ ಕೈ ಹಾಕಿದ್ದು, ತನ್ನ ಮೊದಲ 7 ಇಂಚ್ ಸ್ಕ್ರೀನ್ ಇರುವ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ WTab ಅನ್ನು ಹೊರತಂದಿದೆ.

ನೆನ್ನೆ ತಾನೇ ಲಾವಾ ಕಂಪನಿ ಕೂಡಾ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಅನ್ನು ಹೊರತಂದಿದ್ದು, ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಕಡಿಮೆ ಬಜೆಟ್ ಟ್ಯಾಬ್ಲೆಟ್ ಗಳು ಹೊರಬರುತ್ತಿವೆ.

WTab, ಚಾಂಪಿಯನ್ ಕಂಪ್ಯೂಟರ್ಸ್ ನ ಮೊದಲ ಟ್ಯಾಬ್ಲೆಟ್ ಆಗಿದ್ದು, ಇದರ ಫೀಚರುಗಳು ಈ ರೀತಿ ಇವೆ:

 • 7 ಇಂಚ್ ನ ಫೈವ್ ಪಾಯಿಂಟ್ ಕೆಪಾಸಿಟಿವ್ ಟಚ್ ಸ್ಕ್ರೀನ್

 • 1.5 GHz ARM ಕಾರ್ಟೆಕ್ಸ್ A8 ಪ್ರೊಸೆಸರ್

 • 480 X 800 ಪಿಕ್ಸೆಲ್ ರೆಸೊಲ್ಯೂಶನ್

 • 512MB ರಾಮ್

 • 4GB ಆಂತರಿಕ ಮೆಮೊರಿ

 • ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ

 • ಮೆಮೊರಿ

 • ವೀಡಿಯೊ ಕರೆ ಮಾಡಬಹುದಾದ 1 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರಾ

 • USB ಪೋರ್ಟ್ ಮೂಲಕ 3G ಬೆಂಬಲ

 • ವೈಫೈ ಸಂಪರ್ಕ

 • 320 ತೂಕವಿದ್ದು, ಹಗುರವಾಗಿದೆ

 • 4-5 ಗಂಟೆಗಳ ಬ್ಯಾಟರಿ ಬ್ಯಾಕಪ್ ಹಾಗು 1 ವರ್ಷದ ವಾರಂಟಿ

ಈ ಟ್ಯಾಬ್ಲೆಟ್ ಬಹುತೇಕ ಆನ್ಲೈನ್ ಮಳಿಗೆಗಳಲ್ಲಿ ಹಾಗು ರೀಟೈಲ್ ಅಂಗಡಿಗಳಲ್ಲಿ ಸಿಗಲಿದ್ದು, 4,899 ರೂಪಾಯಿಗೆ ಕೊಳ್ಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X