Home
ಕಂಪ್ಯೂಟರ್‌‌

ಶಿಯೋಮಿಯಿಂದ ಮೊದಲ ಗೇಮಿಂಗ್ ಲ್ಯಾಪ್‌ಟಾಪ್..! ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆ..!

By Srinidhi

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತು ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ಈಗಾಗಲೇ ಖ್ಯಾತಿಯನ್ನು ಗಳಸಿಕೊಂಡಿರುವ ಚೀನಾ ಮೂಲದ ಶಿಯೋಮಿ ಕಂಪನಿ, ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿಯೂ ಸದ್ದು ಮಾಡುತ್ತಿದೆ. ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವ ಸಲುವಾಗಿ ಒಂದರ ಹಿಂದೆ ಒಂದರಂತೆ ಆಪಲ್ ಮ್ಯಾಕ್‌ ಬುಕ್ಕಿಗೆ ಸೆಡ್ಡು ಹೊಡೆಯುವ ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡುತ್ತಿದೆ.

ಶಿಯೋಮಿಯಿಂದ ಮೊದಲ ಗೇಮಿಂಗ್ ಲ್ಯಾಪ್‌ಟಾಪ್..! ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆ..!

ಇದೇ ಮಾದರಿಯಲ್ಲಿ ಶಿಯೋಮಿ ಮೊದಲ ಗೇಮಿಂಗ್ ಲಾಪ್‌ಟಾಪ್ ವೊಂದನ್ನು ಲಾಂಚ್ ಮಾಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಮುಂದಾಗಿದೆ. ಗೇಮಿಂಗ್ ಲ್ಯಾಪ್‌ಟಾಪ್‌ಗಳ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶಿಯೋಮಿ ಪವರ್ ಫುಲ್ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದ್ದು, ಮಿ ನೋಟ್‌ಬುಕ್‌ ಏರ್‌ ಹೊಸ ಮಾದರಿಯಲ್ಲಿ ಕಾಣಿಸಿಕೊಂಡಿದೆ.

ಎರಡು ಮಾದರಿಯಲ್ಲಿ ಲಭ್ಯ:

ಎರಡು ಮಾದರಿಯಲ್ಲಿ ಲಭ್ಯ:

ಶಿಯೋಮಿ ಬಿಡುಗಡೆ ಮಾಡಿರುವ ಮಿ ನೋಟ್ ಬುಕ್ ಏರ್‌ ಒಟ್ಟು ಎರಡು ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, 12.5 ಇಂಚಿನ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಗೇಮಿಂಗ್ ಲ್ಯಾಪ್‌ಟಾಪ್‌ 15.6 ಇಂಚಿನಲ್ಲಿ ಕಾಣಿಸಿಕೊಳ್ಳಲಿದ್ದು, ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

7ನೇ ತಲೆಮಾರಿನ ಪ್ರೋಸೆಸರ್:

7ನೇ ತಲೆಮಾರಿನ ಪ್ರೋಸೆಸರ್:

ಶಿಯೋಮಿ ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ ಇಂಟೆಲ್ 7ನೇ ತಲೆಮಾರಿನ ಪ್ರೋಸೆಸರ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಅಲ್ಲದೇ ನವಿಡಾ ಜಿಪೋರ್ಸ್ GTX 1060 ಗ್ರಾಫಿಕ್ಸ್ ಕಾರ್ಡ್ ಅನ್ನು ಹೆಚ್ಚಿನ ಗ್ರಾಫಿಕ್ಸ್ ಬೇಡುವ ಆಟಗಳನ್ನು ಆಡುವ ಸಲುವಾಗಿ ನೀಡಿದೆ ಎನ್ನಲಾಗಿದೆ.

ಸ್ಟೋರೆಜ್:

ಸ್ಟೋರೆಜ್:

ಶಿಯೋಮಿ ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ 16GB RAM ಅನ್ನು ಕಾಣಬಹುದಾಗಿದೆ. ಇದರೊಂದಿಗೆ 256GB SSD ಮತ್ತು 1TB HDD ಅನ್ನು ಅಳವಡಿಸಲಾಗಿದೆ. ಇದು ಹೆಚ್ಚಿನ ಗೇಮ್‌ಗಳನ್ನು ಸ್ಟೋರ್ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.

ಬ್ಯಾಕ್‌ಲೈಟ್ ಕೀಬೋರ್ಡ್:

ಬ್ಯಾಕ್‌ಲೈಟ್ ಕೀಬೋರ್ಡ್:

ಇದಲ್ಲದೇ ಶಿಯೋಮಿ ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ ಬ್ಯಾಕ್‌ಲೈಟ್ ಕೀಬೋರ್ಡ್ ಅನ್ನು ನೀಡಲಾಗಿದ್ದು, ಗೇಮ್ ಆಡುವ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದು 16 ಮಿಲಿಯನ್ ಬಣ್ಣಗಳನ್ನು ಸಪೋರ್ಟ್ ಮಾಡಲಿದೆ. ಅಲ್ಲದೇ ಹೆಚ್ಚು ಸಮಯ ಬಳಕೆ ಮಾಡಿದರು ಬಿಸಿಯಾಗದಂತೆ ತಡೆಯಲು ಎರಡು ಕೂಲಿಂಗ್ ಪ್ಯಾನ್‌ ಅನ್ನು ಒಳಗೊಂಡಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಲ್ಯಾಪ್‌ಟಾಪ್ ಬೆಲೆ:

ಲ್ಯಾಪ್‌ಟಾಪ್ ಬೆಲೆ:

ಏಪ್ರಿಲ್ ನಿಂದ ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಲ್ಯಾಪ್‌ಟಾಪ್‌ಗಳ ಬೆಲೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿದೆ. ಟಾಪ್ ಎಂಡ್ ಆವೃತ್ತಿ $8999ಕ್ಕೆ ಹಾಗೂ ಆರಂಭಿಕ ಆವೃತ್ತಿ $954ಕ್ಕೆ ದೊರೆಯಲಿದೆ.

Best Mobiles in India

English summary
Xiaomi launched its first-ever gaming laptop and we almost missed it. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+