Subscribe to Gizbot

ಆಪಲ್ ಮ್ಯಾಕ್‌ ಬುಕ್ಕಿಗೆ ಸೆಡ್ಡು ಹೊಡೆಯುವ ಮಿ ನೋಟ್‌ಬುಕ್ ಪ್ರೋ...!

Written By:

ಸ್ಮಾರ್ಟ್‌ಫೋನ್ ಹಾಗೂ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚೀನಾ ಮೂಲದ ಶಿಯೋಮಿ, ಚೀನಾ ಮಾರುಕಟ್ಟೆಗೆ ಪವರ್ ಫುಲ್ ಲ್ಯಾಪ್‌ಟಾಪ್‌ವೊಂದನ್ನು ಲಾಂಚ್ ಮಾಡಿದ್ದು, ಮಿ ನೋಟ್ ಬುಕ್ ಪ್ರೋ ಹೊಸ ಅಲೆಯನ್ನು ಮಾರುಕಟ್ಟೆಯಲ್ಲಿ ಹುಟ್ಟುಹಾಕಲಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಈ ಲ್ಯಾಪ್‌ಟಾಪ್ ಆಪಲ್ ಮ್ಯಾಕ್‌ ಬುಕ್ಕಿಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಕೇಳಿಬಂದಿದೆ.

ಆಪಲ್ ಮ್ಯಾಕ್‌ ಬುಕ್ಕಿಗೆ ಸೆಡ್ಡು ಹೊಡೆಯುವ ಮಿ ನೋಟ್‌ಬುಕ್ ಪ್ರೋ...!

ಅತೀ ತೆಳುವಾದ ವಿನ್ಯಾಸವನ್ನು ಹೊಂದಿರುವ ಮಿ ನೋಟ್ ಬುಕ್ ಪ್ರೋ, ವಿಂಡೋಸ್‌ ಸಫೋರ್ಟ್ ಮಾಡಲಿದ್ದು, TN ಟೆಕ್ನಾಲಜಿಯ ಡಿಸ್‌ಪ್ಲೇ ಹೊಂದಿದೆ. ಆಪಲ್ ಸಹ ಇದೇ ಮಾದರಿಯ ಸ್ಕ್ರಿನ್‌ಗಳನ್ನು ಮ್ಯಾಕ್‌ ಬುಕ್ಕಿನಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. 15.6 ಇಂಚಿನ್ ಡಿಸ್‌ಪ್ಲೇ ಇದಾಗಿದ್ದು, ಗೊರಿಲ್ಲಾ ಕ್ಲಾಸ್ 3 ಸುರಕ್ಷತೆಯನ್ನು ಅಳವಡಿಸಲಾಗಿದೆ.

ಮಿ ನೋಟ್ ಬುಕ್ ಪ್ರೋ ದಲ್ಲಿ 8ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GHz ವೇಗದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಲ್ಯಾಪ್‌ಟಾಪ್ ಬಿಸಿಯನ್ನು ತಣಿಸುವ ಸಲುವಾಗಿ ಎರಡು ಫ್ಯಾನ್‌ಗಳನ್ನು ಅಳವಡಿಸಲಾಗಿದೆ. 1.9 ಕೆಜಿ ತೂಕವನ್ನು ಹೊಂದಿದೆ.

ಆಪಲ್ ಮ್ಯಾಕ್‌ ಬುಕ್ಕಿಗೆ ಸೆಡ್ಡು ಹೊಡೆಯುವ ಮಿ ನೋಟ್‌ಬುಕ್ ಪ್ರೋ...!

ಅಲ್ಲದೇ ಮ್ಯಾಕ್ ಬುಕ್ ಮಾದರಿಯಲ್ಲಿ ದೊಡ್ಡದಾದ ಕೀ ಪ್ಯಾಡ್ ಅನ್ನು ಹೊಂದಿದ್ದು, ಟಚ್ ಪ್ಯಾಡ್ ಅನ್ನು ಸಹ ಒಳಗೊಂಡಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಈ ಆಯ್ಕೆ ಬೇರೆ ಯಾವುದೇ ಲ್ಯಾಪ್ ಟಾಪ್‌ನಲ್ಲಿ ಇಲ್ಲ ಎನ್ನಲಾಗಿದೆ. ಇದರಲ್ಲಿ 60W ಬ್ಯಾಟರಿಯನ್ನು ನೀಡಲಾಗಿದ್ದು, ಹೆಚ್ಚಿನ ಬ್ಯಾಕಪ್ ನೀಡಲಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ಮಿ ನೋಟ್ ಬುಕ್ ಪ್ರೋ ದೊರೆತಲಿದ್ದು, ಕೋರ್ i7 16GB RAM, ಕೋರ್ i7 8GB RAM ಮತ್ತು ಕೋರ್ i5 8GB RAM ಆವೃತ್ತಿಗಳು ಲಭ್ಯವಿದ್ದು, ಇವುಗಳಲ್ಲಿ 256GB SSDಯನ್ನು ಕಾಣಬಹುದಾಗಿದೆ. ಅಲ್ಲದೇ ಉತ್ತಮ ಗ್ರಾಫಿಕ್ಸ್‌ಗಾಗಿ ಜಿಫೋರ್ಸ್ MX150 ಗ್ರಾಫಿಕ್ಸ್ ಕಾರ್ಡ್ ಅನ್ನು ಅಳವಡಿಸಲಾಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಬೆಲೆಗಳು: ಕೋರ್ i7 16GB RAM ಆವೃತ್ತಿಯೂ ರೂ.68000, ಕೋರ್ i7 8GB RAM ರೂ.63000 ಮತ್ತು ಕೋರ್ i5 8GB RAM ಆವೃತ್ತಿ ರೂ.54,000ಕ್ಕೆ ಲಭ್ಯವಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಮಿ ನೋಟ್ ಬುಕ್ ಪ್ರೋ ದೊರೆಯುವ ಸಾಧ್ಯತೆ ಇದೆ.

English summary
Xiaomi Mi Notebook Pro with 8th-gen Core i7 CPU launched, hopes to beat MacBook Pro. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot