Subscribe to Gizbot

ಶಿಯೋಮಿ ತಯಾರಿಸುತ್ತಿದೆಯೇ ಸ್ನ್ಯಾಪ್ಡ್ರಾಗನ್ 835 SoC ಹೊಂದಿರುವ ವಿಂಡೋಸ್ 10 ಲ್ಯಾಪ್ಟಾಪ್?

Posted By: Tejaswini P G

ಶಿಯೋಮಿ ಸ್ನ್ಯಾಪ್ಡ್ರಾಗನ್ 845 SoC ಹೊಂದಿರುವ ಮುಂದಿನ ಪೀಳಿಗೆಯ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಲಾಂಚ್ ಮಾಡಲಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಶಿಯೋಮಿ ಯ ಬತ್ತಳಿಕೆಯಿಂದ ಇನ್ನೊಂದು ಬಾಣ ಬರಲಿರುವ ಸಾಧ್ಯತೆಯೂ ಇರುವಂತಿದೆ.

ಶಿಯೋಮಿ ತಯಾರಿಸುತ್ತಿದೆಯೇ ಸ್ನ್ಯಾಪ್ಡ್ರಾಗನ್ 835 SoC ಹೊಂದಿರುವ ವಿಂಡೋಸ್ 10 ಲ್ಯ

Fudzilla ದ ಇತ್ತೀಚಿನ ವರದಿಯೊಂದರ ಅನುಸಾರ ಚೀನಾದ ಶಿಯೋಮಿ ಕಂಪೆನಿಯು ನೂತನ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ ಚಿಪ್ಸೆಟ್ ಹೊಂದಿರುವ ಹೊಸ ಲ್ಯಾಪ್ಟಾಪ್ಗಳನ್ನೂ ಬಿಡುಗಡೆ ಮಾಡುವ ಹುನ್ನಾರದಲ್ಲಿದೆ. 2016 ರಲ್ಲಿ ಶಿಯೋಮಿಯು ತನ್ನ ಮೊತ್ತ ಮೊದಲ ಲ್ಯಾಪ್ಟಾಪ್ ಆದ ಮಿ ನೋಟ್ಬುಕ್ ಏರ್ ಅನ್ನು ಲಾಂಚ್ ಮಾಡಿತ್ತು.

ನಂತರ ಕಂಪೆನಿಯು ಆ ಲ್ಯಾಪ್ಟಾಪ್ ನಲ್ಲಿ 4G ಸಿಮ್ ಸ್ಲಾಟ್ ನೀಡುವ ಮೂಲಕ ಲ್ಯಾಪ್ಟಾಪ್ ನ ಸುಧಾರಿತ ಆವೃತ್ತಿಯನ್ನೂ ಹೊರ ತಂದಿತ್ತು. ಈಗ ಬರುತ್ತಿರುವ ಸುದ್ದಿಯ ಅನುಸಾರ ಮುಂದಿನ ವರ್ಷ ಶಿಯೋಮಿ ನೂತನ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಲಿದ್ದು, ವಿಂಡೋಸ್ 10 ಹೊಂದಿರುವ ಈ ಲ್ಯಾಪ್ಟಾಪ್ ಸ್ನ್ಯಾಪ್ಡ್ರಾಗನ್ 835 SpC ಹೊಂದಿರಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಿಯೋಮಿ ಲ್ಯಾಪ್ಟಾಪ್ಗಳು ಇಂಟೆಲ್ ಪ್ರಾಸೆಸರ್ಗಳನ್ನು ಬಳಸುತ್ತಿದ್ದು, ಈ ಲ್ಯಾಪ್ಟಾಪ್ಗಳು ಚೀನಾದ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಿದೆ. ಕೆಲವು ಮಾರಾಟಗಾರರು ಇದನ್ನು ಜಾಗತಿಕ ಮಾರುಕಟ್ಟೆಗೂ ರವಾನಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಶಿಯೋಮಿ ಲ್ಯಾಪ್ಟಾಪ್ಗಳು ಒಳ್ಳೆ ಸದ್ದನ್ನೇ ಮಾಡುತ್ತಿದೆ. ಮಿ ನೋಟ್ಬುಕ್ ಮಾಡೆಲ್ಗಳು ಗಿಗಾಬಿಟ್ LTE ಕನೆಕ್ಟಿವಿಟಿ ಹೊಂದಿದ್ದು ಉತ್ತಮ ಬ್ಯಾಟರಿ ಬಾಳಿಕೆಯನ್ನೂ ನೀಡುತ್ತದೆ.

1,590 ರೂ.ಗೆ 'ಐಟೆಲ್ ಎ20' 4G ಸ್ಮಾರ್ಟ್‌ಫೋನ್!!

ಭಾರತದಲ್ಲಿ ಕೈಗೆಟಕುವ ಡೇಟಾ ಪ್ಲಯಾನ್ಗಳು ಲಭ್ಯವಿದ್ದು, ಶಿಯೋಮಿಯು ಭಾರತದಲ್ಲಿ ಹೆಸರುವಾಸಿ ಬ್ರ್ಯಾಂಡ್ ಆಗಿರುವ ಹಿನ್ನಲೆಯಲ್ಲಿ ಮಿ ನೋಟ್ಬುಕ್ ಮಾಡೆಲ್ಗಳು ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನು ಚಿಪ್ ತಯಾರಕರಾದ ಕ್ವಾಲ್ಕಮ್ ಕುರಿತು ಹೇಳುವುದಾದರೆ, ಕ್ವಾಲ್ಕಮ್ ತನ್ನ ಗ್ರಾಹಕರಿಗೆ ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಸದಾ ಕನೆಕ್ಟೆಡ್ ಆಗಿರುವ ಆಶ್ವಾಸನೆ ನೀಡುತ್ತಿದೆ. ಶಿಯೋಮಿ ಮತ್ತು ಕ್ವಾಲ್ಕಮ್ ತಮ್ಮ ಸಹಯೋಗವನ್ನು ಲ್ಯಾಪ್ಟಾಪ್ ವಿಭಾಗಕ್ಕೂ ವಿಸ್ತರಿಸಿದರೆ ಅವರು ಗ್ರಾಹಕರಿಗೆ ಇನ್ನಷ್ಟು ಅಗ್ಗದ ಡೇಟಾ ಪ್ಲ್ಯಾನ್ ಮತ್ತು ಉತ್ತಮ ಕಂಪ್ಯೂಟಿಂಗ್ ಅನುಭವವನ್ನು ನೀಡಲು ಸಾಧ್ಯವಿದೆ.

ಇತ್ತೀಚೆಗಷ್ಟೆ ನಡೆದ ಸ್ನ್ಯಾಪ್ಡ್ರಾಗನ್ ಟೆಕ್ನಾಲಜಿ ಸಮ್ಮಿಟ್ ನಲ್ಲಿ HP ಮತ್ತು ಏಸಸ್ ಸಂಸ್ಥೆಗಳು ಸ್ನ್ಯಾಪ್ಡ್ರಾಗನ್ 835 SoC ಹೊಂದಿರುವ ತಮ್ಮ ಆಲ್ವೇಸ್ ಕನೆಕ್ಟೆಡ್ PCಗಳನ್ನು ಘೋಷಿಸಿದೆ. ಏಸಸ್ ತಮ್ಮ ನೋವಾಗೋ ಲ್ಯಾಪ್ಟಾಪ್ ಅನ್ನು ಘೋಷಿಸಿದ್ದು, ಇದು 8GB RAM ಮತ್ತು ಸ್ನ್ಯಾಪ್ಡ್ರಾಗನ್ 835 SoC ಹೊಂದಿರಲಿದೆ.

ಇನ್ನು ಇದರ ಬ್ಯಾಟರಿ ಲೈಫ್ ಬಗ್ಗೆ ಹೇಳುವುದಾದರೆ, ಒಮ್ಮೆ ಚಾರ್ಜ್ ಮಾಡಿದರೆ ಈ ಲ್ಯಾಪ್ಟಾಪ್ 22 ಘಂಟೆಗಳ ಕಾಲ ನಿರಂತರ ಓಡಲಿದೆ. ಅಂತೆಯೇ HP ಯ ಎನ್ವೀ x2 2ಇನ್1 ಲ್ಯಾಪ್ಟಾಪ್ ಕೂಡ ಸ್ನ್ಯಾಪ್ಡ್ರಾಗನ್ 835 SoC ಹೊಂದಿರಲಿದ್ದು ಮುಂಬರುವ CES 2018 ಟೆಕ್ ಶೋ ನಲ್ಲಿ ಇದು ಅನಾವರಣಗೊಳ್ಳಲಿದೆ.

English summary
Xiaomi is speculated to be working on a Windows 10 laptop with the Snapdragon 835 SoC on board.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot