ಎಕ್ಸ್ ಟೆಕ್ಸ್ 7 ಇಂಚ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

Posted By: Varun
ಎಕ್ಸ್ ಟೆಕ್ಸ್ 7 ಇಂಚ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

ಈ ವರ್ಷ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಬರೀ ಹೊಸ ಕಂಪನಿಗಳದ್ದೇ ಭರಾಟೆ. ಆಕಾಶ್ ಟ್ಯಾಬ್ಲೆಟ್ ಅನ್ನು ಸರಕಾರ ಅದ್ಯಾವಾಗ ಬಿಡುಗಡೆ ಮಾಡುತ್ತೆ ಅಂತ ಹೇಳ್ತೋ ಗೊತ್ತಿಲ್ಲ, ಆ ದಿನದಿಂದ ದಿನಕ್ಕೊಂದು ಕಂಪನಿಗಳು ತಾವೂ ಯಾಕೆ ಟ್ರೈ ಮಾಡಬಾರದು ಅಂತ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಹೊರತರುತ್ತಿದ್ದಾರೆ.

ಈ ಪಟ್ಟಿಗೆ ಹೊಸ ಸೇರ್ಪಡೆ, ಎಕ್ಸ್ ಟೆಕ್ಸ್ "ಮೈಟ್ಯಾಬ್ಲೆಟ್". ಆಂಡ್ರಾಯ್ಡ್ 4.0 ತಂತ್ರಾಂಶದ 7 ಇಂಚ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

ಗೊಗಲ್ ಸ್ಟೋರ್ ಆಪ್ಸ್, ಟಿವಿಗೆ ಕನೆಕ್ಟ್ ಮಾಡಬಹುದಾದ HDMI ಪೋರ್ಟ್ ಕೂಡಾ ಹೊಂದಿರುವ ಈ ಟ್ಯಾಬ್ಲೆಟ್ ನ ಇತರೇ ಪ್ರಮುಖ ಫೀಚರುಗಳು ಈ ರೀತಿ ಇವೆ:

 • 1.5 GHz, ಸಿಪಿಯು

 • 16GB ಆಂತರಿಕ ಹಾರ್ಡ್ ಡಿಸ್ಕ್ ಡ್ರೈವ್

 • 1GBRAM

 • 2 ಮೆಗಾಪಿಕ್ಸೆಲ್ಕ್ಯಾಮೆರಾ

 • 7 ಇಂಚು ಮಲ್ಟಿ ಟಚ್ ಸ್ಕ್ರೀನ್

 • HDMI ಔಟ್ಪುಟ್

 • ಐಸ್ಕ್ರೀಮ್ ಸ್ಯಾಂಡ್ವಿಚ್ 4.0.3 ಓಎಸ್

 • 48 GB ಗೆ ವಿಸ್ತರಿಸಬಹುದಾದ ಮೆಮೊರಿ

 • ಮಿನಿ ಮತ್ತು ಯುಎಸ್ಬಿಪೋರ್ಟ್

 • ಮಿನಿ SD ಕಾರ್ಡ್ ಸ್ಲಾಟ್

 • 800 X 480ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್

 • TF ಕಾರ್ಡ್ ಸ್ಲಾಟ್

 • ವೈಫೈ
 

ಕಪ್ಪು, ಬಿಳಿ ಹಾಗು ಪಿಂಕ್ ಬಣ್ಣಗಳಲ್ಲಿ ಬರುವ ಈ ಟ್ಯಾಬ್ಲೆಟ್ ನ ಬೆಲೆ7,500 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot