6 ಸಾವಿರಕ್ಕೆ ಜೆನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

Posted By: Varun
6 ಸಾವಿರಕ್ಕೆ ಜೆನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

ಹೊಸ ಹೊಸ ಟ್ಯಾಬ್ಲೆಟ್ ಗಳು ಮಾರುಕಟ್ಟೆಯಲ್ಲಿ ಬರುತ್ತಿವೆ. ಮೊಬೈಲ್ ಕಂಪನಿಗಳೂ ಇತ್ತೀಚಿಗೆ ಅವುಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಿದ್ದು ಕಾರ್ಬನ್ ಮೊಬೈಲ್, ಮೈಕ್ರೋಮ್ಯಾಕ್ಸ್ ನಂತರ ಈಗ ಜೆನ್ ಮೊಬೈಲ್ ಕೂಡ ತನ್ನದೇ ಆದ ಜೆನ್ ಮೊಬೈಲ್ ಅಲ್ಟ್ರಾ ಟ್ಯಾಬ್ A100 ಹೆಸರಿನ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶವಿರುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

ಮನರಂಜನೆಗೆ ಹೇಳಿಮಾಡಿಸಿದಂಥ ಈ ಟ್ಯಾಬ್ಲೆಟ್ನಲ್ಲಿ ಆನ್ಲೈನ್ ಕಂಟೆಂಟ್, ಇ-ಪೇಪರ್, ಇ-ಮ್ಯಾಗಜೀನ್, ಹಾಗು ಲಕ್ಷಾ೦ತರ ಹಾಡುಗಳನ್ನು ಕೇಳಬಹುದಾದ ರೀಡರ್ ಹಬ್, ಮ್ಯೂಸಿಕ್ ಹಬ್ ಇದರಲ್ಲಿ ಪ್ರೀಲೋಡ್ ಆಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬ್ರೌಸ್ ಮಾಡಬಹುದಾಗಿದೆ.

ಇನ್ನು ಇಂಟರ್ನೆಟ್ ಬ್ರೌಸಿಂಗ್ ಗೆ ಸಹಾಯಕವಾಗಿರುವ HTML 5 ಹಾಗು ಫ್ಲಾಶ್ 10 ಕೂಡ ಇದರಲ್ಲಿದ್ದು, ಇದರ ಇತರೆ ಫೀಚರುಗಳು ಇಲ್ಲಿವೆ:

  • 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್, 800×480 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ

  • ಆಂಡ್ರಾಯ್ಡ್ 4.0.3 ತಂತ್ರಾಂಶ

  • 1.2 GHz ಪ್ರೋಸೆಸರ್, 400 GPU ನೊಂದಿಗೆ

  • Standard ರಾಮ್

  • 32GB ವರೆಗೂ ವಿಸ್ತರಿಸಬಹುದಾದಂಥ ಮೆಮೊರಿ

  • 1.3 MP ಮುಂಬದಿಯ ಕ್ಯಾಮರಾ, ಡಿಜಿಟಲ್ ಜೂಮ್ ನೊಂದಿಗೆ

  • 2800 mAh ಬ್ಯಾಟರಿ (14 ಗಂಟೆ ಬ್ಯಾಕಪ್ ವೈಫೈ ಜೊತೆ; 3.5 ಗಂಟೆ ಬ್ಯಾಕಪ್- ವೀಡಿಯೋ)

  • 295 ಗ್ರಾಂ ತೂಕ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot