ಝೆನ್‌ನ ನೂತನ ಅಲ್ಟ್ರಾಟ್ಯಾಬ್‌ ಎ900 ಬಿಡುಗಡೆ

By Vijeth Kumar Dn
|

ಝೆನ್‌ನ ನೂತನ ಅಲ್ಟ್ರಾಟ್ಯಾಬ್‌ ಎ900 ಬಿಡುಗಡೆ

ಇಂದು ಬಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿನ ಬಗೆಬಗೆಯ ಆಂಡ್ರಾಯ್ಡ್‌ ಐಸಿಎಸ್‌ ಚಾಲಿತ ಟ್ಯಾಬ್ಲೆಟ್‌ಗಳು ಹೇರಳವಾಗಿ ಲಭ್ಯವಿದ್ದರೂ ಕೂಡ ಹೆಚ್ಚು ಹೆಚ್ಚು ತಯಾರಕರುಗಳು ಕಡಿಮೆ ದರದಲ್ಲಿನ ನೂತನ ಟ್ಯಾಬ್ಲೆಟ್‌ಗಳನ್ನು ಪರಿಚಯಿಸುತ್ತಲೇ ಇದ್ದಾರೆ ಇದರಿಂದಾಗಿ ಇಂದು ಗ್ರಾಹಕತೆದುರು ತರಾವರಿ ಆಯ್ಕೆಯ ಟ್ಯಾಬ್ಲೆಟ್‌ ಗಳು ಬಂದು ನಿಂತಿವೆ. ಅಂದಹಾಗೆ ಈ ಸಾಲಿಗೆ ನೂತನವಾಗಿ ದೆಹಲಿ ಮೂಲದ ಸಂಸ್ಥೆಯಾದ ಝೆನ್‌ ಮೊಬೈಲ್ಸ್‌ ತನ್ನಯ ನೂತನ ಅಲ್ಟ್ರಾಟ್ಯಾಬ್‌ ಎ900 ಬಿಡುಗಡೆ ಮಾಡಿದ್ದು ಜುಲೈತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿದ್ದ ಅಲ್ಟ್ರಾಟ್ಯಾಬ್‌ ಎ100 ನ ಯಶಸ್ಸಿನ ಬಳಿಕ ಈ ನೂತನ ಟ್ಯಾಬ್ಲೆಟ್‌ ಬಿಡುಗಡೆಗೆ ಸಂಸ್ಥೆ ಮುಂದಾಗಿದೆ.

ಅಂದಹಾಗೆ ಮಾರುಕಟ್ಟೆಗೆ ಇದೀಗ ತಾನೆ ಪ್ರವೇಶ ಪಡೆದಿರುವ ಮತ್ತೊಂದು ಅಗ್ಗದ ಬೆಲೆಯ ಟ್ಯಾಬ್ಲೆಟ್‌ ಆದಂತಹ ಝೆನ್‌ ಅಲ್ಟ್ರಾಟ್ಯಾಬ್‌ A900 ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ದರ್ಶಕ: ಅಲ್ಟ್ರಾಟ್ಯಾಬ್‌ A900 ನಲ್ಲಿ 9 ಇಂಚಿನ ಟಚ್‌ಸ್ಕ್ರೀನ್‌ ಹಾಗೂ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಡ್ಯುಯೆಲ್‌ ಕೋರ್‌ 1.5GHz ಪ್ರೊಸೆಸರ್‌ ಹಾಗೂ ಕ್ವಾಡ್‌ ಕೋರ್‌ ಮೇಲ್‌ 400 GPU ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಉಳಿದ ಎಲ್ಲಾ ಬಜೆಟ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ಗಳಂತೆಯೆ ಆಂಡ್ರಾಯ್ಡ್‌ ICS ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಸ್ಟೋರೇಜ್‌: 4GB ಆಂತರಿಕ ಸ್ಟೋರೇಜ್‌, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕ್ಯಾಮೆರಾ: ವಿಡಿಯೋ ಚಾಟಿಂಗ್‌ ಗಾಗಿ 1.3MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಕನೆಕ್ಟಿವಿಟಿ: ಅಲ್ಟ್ರಾಟ್ಯಾಬ್‌ A900 ನಲ್ಲಿ ಡಾಂಗಲ್‌ ಮೂಲಕ 3G, Wi-Fi 802.11 b/g/n ಹಾಗೂ ಮೈಕ್ರೋ USB ಪೋರ್ಟ್‌ ಹೊಂದಿದೆ.

ಬ್ಯಾಟರಿ: 4,000 mAh ಬ್ಯಾಟರಿ ಇದ್ದು 14 ಗಂಟೆಗಳ Wi-Fi ಯೂಸೇಜ್‌ ಹಾಗೂ 3.5 ಗಂಟೆಗಳ 720p ವಿಡಿಯೀ ಪ್ಲೇ ಬ್ಯಾಕ್‌ ಹೊಂದಿದೆ.

ಇತರೇ ಫೀಚರ್ಸ್‌

ಝೆನ್‌ ಅಲ್ಟ್ರಾಟ್ಯಾಬ್‌ A900 ನಲ್ಲಿ ಮುಂಚಿತವಾಗಿಯೇ ಸೋಷಿಯಲ್‌ ನೆಟ್ವರ್ಕಿಂಗ್‌ ಹಾಗೂ ನಿಮಂಬಜ್‌ ಸೇರಿದಂತೆ ಮಿಗ್‌ 33 ಚಾಟ್‌ ಆಪ್ಷನ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ಐಬಿಬೊ- ತೀನ್‌ ಪತ್ತಿ ಹಾಗೂ ರಮ್ಮಿ ಗಳಂತಹ ಗೇಮ್‌ಗಳನ್ನು ಹೊಂದಿದೆ. ಇದರ ಹೊರತಾಗಿ ಲೈವ್‌ ಟಿವಿ ಸಹ ನೋಡ ಬಹುದಾಗಿದೆ.

ಬೆಲೆ

ಅಲ್ಟ್ರಾಟ್ಯಾಬ್‌ A900 ರೂ.7,999 ದರದಲ್ಲಿ ಹೋಮ್‌ ಶಾಪ್‌18 ನಲ್ಲಿ ಲಭ್ಯವಿದೆ.

Read In English...

<strong>ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌</strong>ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X