5,999 ರೂ.ದರದಲ್ಲಿ ಝೆನ್‌ಫೋಕಸ್ ಮೈಝೆನ್‌ಟ್ಯಾಬ್ 708ಬಿ ಲಭ್ಯವಿದೆ

ನೂತನ ಟ್ಯಾಬ್ಲೆಟ್‌ನ ಬಿಡುಗಡೆಯ ನಂತರ ಮಾತನಾಡಿದ ಝೆನ್‌ಫೋಕಸ್ ಸಂಸ್ಥೆಯ ಮುಖ್ಯಸ್ಥರಾದ ಮೈಕ್ ಧಾಲ್ ಮಾತನಾಡಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೂತನ ಟ್ಯಾಬ್ಲೆಟ್ ಒದಗಿಸುವುದು ಸುಲಭದ ಮಾತಲ್ಲ ಅದಕ್ಕಾಗಿ ಈ ನಿಟ್ಟಿನಲ್ಲಿ ಸಂಸ್ಥೆಯು ಶ್ರಮವಹಿಸಿ ಟ್ಯಾಬ್ಲೆಟ್‌ಗಳಲ್ಲಿ ಬೇಡದ ಫೀಚರ್ಸ್‌ಗಳನ್ನು ತೆಗೆದುಹಾಕಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್ ಸಿದ್ಧ ಪಡಿಸಿರುವುದಾಗಿ ತಿಳಿಸಿದರು. ಅಂದಹಾಗೆ ಇದೀಗತಾನೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಮೈಝೆನ್‌ಟ್ಯಾಬ್ 708ಬಿ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ಫೀಚರ್ಸ್ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಝೆನ್‌ಫೋಕಸ್ ಮೈಝೆನ್ 708ಬಿ ಟ್ಯಾಬ್ಲೆಟ್‌ನ ವಿಶೇಷತೆ
ದರ್ಶಕ ಹಾಗು ಸುತ್ತಳತೆ: ಮೈಝೆನ್‌ಟ್ಯಾಬ್ 708ಬಿ ಗಾತ್ರದಲ್ಲಿ 193 x 121 x 8.5 mm ಸುತ್ತಳತೆಯೊಂದಿಗೆ 7 ಇಂಚಿನ ಕೆಪಾಸಿಟೀವ್ ಟಚ್‌ಸ್ಕ್ರೀನ್ ನೊಂದಿಗೆ 5 ಪಾಯಿಂಟ್ ಮಲ್ಟಿ-ಟಚ್ ಹಾಗೂ 800 x 480 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ.
ಪ್ರೊಸೆಸರ್: ಮೈಝೆನ್‌ಟ್ಯಾಬ್ 708ಬಿ ನಲ್ಲಿ ಬಾಕ್ಸ್‌ಚಿಪ್ ಎ13 ಚಿಪ್‌ಸೆಟ್ ನೀಡಲಾಗಿದ್ದು 1GHz ನಿಂದ 1.2GHz ಸ್ಪೀಡ್ ನೀಡುವುದಲ್ಲದೆ ಮೇಲ್-400 ಜಿಪಿಯು ಹೊಂದಿದೆ. ಇದಲ್ಲದೆ ARM ಕಾರ್ಟೆಕ್ಸ್ A8 ಪ್ರೊಸೆಸರ್ ನೀಡಲಾಗಿದೆ.
ಆಪರೇಟಿಂಗ್ ಸಿಸ್ಟಂ: ಬಜೆಟ್ ಟ್ಯಾಬ್ಲೆಟ್ ಆದ್ದರಿಂದ ಆಂಡ್ರಾಯ್ಡ್ 4.0.3 ಐಸಿಎಸ್ ಪ್ಲಾಟ್‌ಫಾರ್ಮ್ ನೀಡಲಾಗಿದೆ.
ಕ್ಯಾಮೆರಾ: ಕೇವಲ ವಿಡಿಯೋ ಕರೆಗಾಗಿ ಮುಂಬದಿಯ 0.3MP ವಿಜಿಎ ಕ್ಯಾಮೆರಾ ನೀಡಲಾಗಿದ್ದು ಹಿಂಬದಿಯ ಕ್ಯಾಮೆರಾ ನೀಡಲಾಗಿಲ್ಲ.
ಸ್ಟೋರೇಜ್: 4ಜಿಬಿ ಆಂತರಿಕ ನ್ಯಾನೋ ಫ್ಲಾಷ್ ಸ್ಟೋರೇಜ್ ಹಾಗೂ 512ಎಂಬಿ RAM ನೀಡಲಾಗಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.
ಕನೆಕ್ಟಿವಿಟಿ: ಡಾಂಗಲ್ ಮೂಲಕ 3ಜಿ ಸಂಪರ್ಕ, ಒಟಿಜಿ, ವೈ-ಫೈ ಹಾಗೂ ಮೈಕ್ರೋ ಯುಎಸ್‌ಬಿ USB 2.0 ಫೀಚರ್ಸ್ ನೀಡಲಾಗಿದೆ.
ಬ್ಯಾಟರಿ: 2,350 mAh ಬ್ಯಾಟರಿಯೊಂದಿಗೆ 4.5 ಗಂಟೆಗಳ ಬ್ಯಾಕಪ್ ನೀಡುತ್ತದೆ.
ಬೆಲೆ ಹಾಗೂ ಲಭ್ಯತೆ: ಝೆನ್‌ಫೋಕಸ್ ಮೈಝೆನ್‌ಟ್ಯಾಬ್ 708ಬಿ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ರೂ. 6,999 ದರದಲ್ಲಿ ಲಭ್ಯವಿದ್ದು, ಸ್ನಾಪ್ ಡೀಲ್‌ನಲ್ಲಿ ವಿಶೇಷ ಆಫರ್‌ನಲ್ಲಿ ರೂ. 5,999 ದರದಲ್ಲಿ ಖರೀದಿಸ ಬಹುದಾಗಿದೆ.


Click it and Unblock the Notifications