ಝಡ್ ಟಿಇ ಹಗುರ ಲ್ಯಾಪ್ ಟಾಪ್ ಅನಾವರಣ

By Super
|

ಝಡ್ ಟಿಇ ಹಗುರ ಲ್ಯಾಪ್ ಟಾಪ್ ಅನಾವರಣ
ಝಡ್ ಟಿಇ ಕಂಪನಿಯು ಆಂಡ್ರಾಯ್ಡ್ ಆಧರಿತ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಅನಾವರಣ ಮಾಡಿದೆ. ZTE Light ಸಾಕಷ್ಟು ಆಕರ್ಷಕ ಫೀಚರುಗಳನ್ನೊಳಗೊಂಡ ಸಣ್ಣ ಟ್ಯಾಬ್ಲೆಟ್. ಈ ಟ್ಯಾಬ್ಲೆಟ್ ಕಂಪ್ಯೂಟರನ್ನು ಕಂಪನಿ ಮಾರುಕಟ್ಟೆಗೆ ಇನ್ನೂ ಪರಿಚಯಿಸಿಲ್ಲ. ಹೀಗಾಗಿ ಇದರ ದರದ ಕುರಿತು ಮಾಹಿತಿ ದೊರಕಿಲ್ಲ.

ಆದರೂ ಈ ಟ್ಯಾಬ್ಲೆಟ್ ಟೆಕ್ ಮಾಹಿತಿ ದೊರಕಿದೆ. ಇದರ ತೂಕ 389 ಗ್ರಾಂ ಇದೆ. ಇತರ ಭಾರದ ಟ್ಯಾಬ್ಲೆಟ್ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಇದು ತುಂಬಾ ಹಗುರ ಮತ್ತು ಆಕರ್ಷಕ. ಈ ಟ್ಯಾಬ್ಲೆಟ್ ಮುಂಭಾಗದಲ್ಲಿ ಮೂರು ಟಚ್ ಸೆನ್ಸಿಟಿವ್ ಬಟನ್ ಇದೆ.

ಇದರ ವಿನ್ಯಾಸವೇ ಆಕರ್ಷಕ. ಇದರಲ್ಲಿ 3.5 ಮಿ.ಮೀ ಜಾಕ್ ಮತ್ತು ಆಂತರಿಕ ಸ್ಪೀಕರ್ ಇದೆ. ಹಿಂಭಾಗದ ಕವರ್ ತೆಗೆದು ಸಿಮ್ ಮತ್ತು ಬ್ಯಾಟರಿ ಹಾಕಬಹುದು. ಇದರ ಡಿಸ್ ಪ್ಲೇ 7 ಇಂಚು ಗಾತ್ರದಾಗಿದೆ. ಈ ಟ್ಯಾಬ್ಲೆಟ್ ಸ್ಕ್ರೀನ್ ಎಲ್ ಸಿಡಿ ಮಟಚ್ ಸ್ಕ್ರೀನ್ ಬೆಂಬಲಿತ ಮಲ್ಟಿಟಚ್ ತಂತ್ರಜ್ಞಾನ ಹೊಂದಿದೆ. ಇದರ ಸ್ಕ್ರೀನ್ 480 x 800 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ.

ಝಡ್ ಟಿಇ ಲೈಟ್ ಟ್ಯಾಬ್ಲೆಟ್ ಕಂಪ್ಯೂಟರಿನಲ್ಲಿ ಎರಡು ಕ್ಯಾಮರಾಗಳಿವೆ. ಕ್ಯಾಮರಾಕ್ಕೆ ಪ್ಲಾಷ್ ಲೈಟ್ ಇಲ್ಲ. ಹಿಂಭಾಗದಲ್ಲಿ 3 ಮೆಗಾಫಿಕ್ಸೆಲ್ ಮತ್ತು ಮುಂಭಾಗದಲ್ಲಿ 0.3 ಮೆಗಾಫಿಕ್ಸೆಲ್ ಕ್ಯಾಮರಾವಿದೆ.

ಈ ಟ್ಯಾಬ್ಲೆಟ್ ಕಂಪ್ಯೂಟರ್ Qualcomm MSM 7227 ಪ್ರೊಸೆಸರ್ ಹೊಂದಿದ್ದು, 800 ಮೆಗಾಹರ್ಟ್ಸ್ ವೇಗದಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಇದರ ಸಿಸ್ಟಮ್ ಮೆಮೊರಿ ಸಂಗ್ರಹ ಗಾತ್ರ 523 ಎಂಬಿ. ಬಾಹ್ಯ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಟ್ಯಾಬ್ಲೆಟ್ ಜಿಎಸ್ಎಂ ಬೆಂಬಲಿತವಾಗಿದೆ.

ಈ ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X