ವಿ55 ಟ್ಯಾಬ್ಲೆಟ್ ಯಾವಾಗ ಬರುತ್ತೆ ಕಣ್ರಿ?

ಸದ್ಯ ನೂತನ ಟ್ಯಾಬ್ಲೆಟ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಇದರಲ್ಲಿ ಆಂಡ್ರಾಯ್ಡ್ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಮತ್ತೊಂದು ವರದಿಯ ಪ್ರಕಾರ ಇತ್ತೀಚಿನ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್(ಇದು ಹೊಸ ಅಪರೇಟಿಂಗ್ ಸಿಸ್ಟಮ್ ಹೆಸರು) ಇರುವ ಸಾಧ್ಯತೆಯಿದೆ.
ಸದ್ಯ ಆನ್ ಲೈನ್ ನಲ್ಲಿ ಲೀಕ್ ಆಗಿರುವ ಚಿತ್ರ ನೋಡಿದರೆ ನೂತನ ಗ್ಯಾಡ್ಜೆಟ್ ವಿನ್ಯಾಸದ ಕುರಿತು ಅರಿವಾಗುತ್ತದೆ. ಇದು ನೋಡಲು ಚಿಕ್ಕದಾಗಿದ್ದು, ಆಕರ್ಷಕವಾಗಿದೆ. ಒಂದು ಮೂಲದ ಪ್ರಕಾರ ಈ ಟ್ಯಾಬ್ಲೆಟ್ ಸಿಂಗಲ್ ಕೋರ್ ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ ಎಸ್ ಒಸಿ ಪ್ರೊಸೆಸರ್ ಹೊಂದಿರಲಿದೆ.
RAM ವಿಷ್ಯದಲ್ಲೂ ಒಂದಿಷ್ಟು ಊಹಾಪೋಹಗಳಿವೆ. ಅಂದರೆ ಇದು 512 ಎಂಬಿ RAM ಹೊಂದಿರಲಿದೆಯಂತೆ. ಇದು ಅತ್ಯಧಿಕ ಸಂಗ್ರಹ ಸಾಮರ್ಥ್ಯ ಹೊಂದಿರಲಿದೆ. ಇದರ ಡಿಸ್ ಪ್ಲೇ 7 ಇಂಚಿನದ್ದಾಗಿದ್ದು, 1280 x 800 ಪಿಕ್ಸೆಲ್ ರೆಸಲ್ಯೂಷನ್ ಇರಲಿದೆ ಎಂದು ಗ್ಯಾಡ್ಜೆಟ್ ಗುರು ಹೇಳುತ್ತಾರೆ.
ಆದರೆ ಇದರಲ್ಲಿ ಇಂಥದ್ದೇ ಫೀಚರ್ಸ್ ಮತ್ತು ವಿಶೇಷತೆಗಳು ಇರಲಿವೆ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದರ ದರ ಕೂಡ ಕೈಗೆಟುಕುವ ಮಟ್ಟದಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








