Home
Deal of the day

Realme: ಕೇವಲ ಎರಡೇ ದಿನ.. 6000mAh ಬ್ಯಾಟರಿಯ ಹೊಸ ಫೋನಿಗೆ ಭಾರೀ ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಇದು ಅದೃಷ್ಟ ಅಂದ್ರೆ.. ಯಾರಿಗುಂಟು ಯಾರಿಗಿಲ್ಲ..! ಇತ್ತೀಚಿಗೆ ಬಿಡುಗಡೆಯಾದ ರಿಯಲ್‌ಮಿ 5G ಮೊಬೈಲ್‌ ಖರೀದಿ ಮೇಲೆ ಬೊಂಬಾಟ ಆಫರ್. ಹೌದು, ನೀವು ಬಜೆಟ್ ಸ್ನೇಹಿ ಮೊಬೈಲ್ ಅಥವಾ 20 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಅವಕಾಶ. ಮಾರ್ಚ್ 19 ರಂದು ಬಿಡುಗಡೆಯಾದ ರಿಯಲ್‌ಮಿ P3 5G (Realme P3 5G) ಫೋನಿನ ಫ್ಲಾಶ್ ಸೇಲ್ ಪ್ರಾರಂಭವಾಗಿದೆ. ನೀವು ಈ ಫೋನಿನ ಎಲ್ಲಾ ರೂಪಾಂತರಗಳ ಮೇಲೆ 1,200 ರೂ.ಗಳ ಫ್ಲಾಟ್ ರಿಯಾಯಿತಿ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ

ರಿಯಲ್‌ಮಿ P3 5G ಫೋನ್ 6GB RAM + 128GB, 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ನಿಮಗೆ ಬ್ಯಾಂಕ್ ಆಫರ್ ಸಹ ನೀಡುತ್ತಿದೆ. ಇದು ಗೇಮಿಂಗ್ ಮತ್ತು ಸಂಪರ್ಕಕ್ಕಾಗಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 6.67 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ.

Realme: ಕೇವಲ ಎರಡೇ ದಿನ.. ಹೊಸ ಫೋನಿಗೆ ಭಾರೀ ಆಫರ್.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ P3 5G ಫೀಚರ್ಸ್

ರಿಯಲ್‌ಮಿ P3 5G ಮೊಬೈಲ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,400 × 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 1500Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ ಮತ್ತು 2,000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 810 ಜಿಪಿಯು ಸಹ ಹೊಂದಿದೆ.

ರಿಯಲ್‌ಮಿ P3 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನಿನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Take a Poll

ರಿಯಲ್‌ಮಿ P3 5G ಫೋನ್ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನ್ ಜಿಟಿ ಬೂಸ್ಟ್ ಹೊಂದಿದೆ. ಇದು ಎಐ (AI) ಮೋಷನ್ ಕಂಟ್ರೋಲ್ ಮತ್ತು ಎಐ ಅಲ್ಟ್ರಾ ಟಚ್ ಕಂಟ್ರೋಲ್ ಸೇರಿದಂತೆ ಹಲವು ಎಐ ಚಾಲಿತ ವರ್ಧನೆಗಳನ್ನು ಒಳಗೊಂಡಿದೆ. ಈ ಫೋನಿನ ಆಫರ್ ಬೆಲೆ ತಿಳಿಯಲು ಮುಂದೆ ಓದಿ.

ರಿಯಲ್‌ಮಿ P3 5G ಬೆಲೆ ಮತ್ತು ಆಫರ್

ರಿಯಲ್‌ಮಿ P3 5G ಫೋನಿನ 6GB RAM + 128GB ಸ್ಟೋರೇಜ್ ಬೆಲೆ 16,999 ರೂ. ಆಗಿದೆ. 8GB RAM + 128GB ಬೆಲೆ 17,999 ರೂ. ಮತ್ತು 8GB RAM + 256GB ವೇರಿಯಂಟ್ 19,999 ರೂ.ಗೆ ಬಿಡುಗಡೆಯಾಗಿದೆ. ಪ್ರಸ್ತುತ, ಮೂಲ ಮಾದರಿಯು 15,799 ರೂ.ಗೆ ಮಾರಾಟವಾಗುತ್ತಿದೆ. 8GB + 128GB ರೂಪಾಂತರವು 16,799 ರೂ. ಮತ್ತು 256GB ಅನ್ನು 18,799 ರೂ.ಗೆ ಖರೀದಿಸಬಹುದು.

ಈ ರಿಯಾಯಿತಿ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಬ್ಯಾಂಕ್ ಆಫರ್ ಬಗ್ಗೆ ಹೇಳುವುದಾದರೆ, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ 2,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಕಂಪನಿಯು ಎಕ್ಸ್‌ಚೇಂಜ್ ಬೋನಸ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ಸಹ ನೀಡುತ್ತಿದೆ. ನೀವು ಸುಲಭ ಕಂತುಗಳಲ್ಲಿ ಈ ಫೋನ್ ಖರೀದಿಸಬಹುದು.

Best Mobiles in India

English summary
15 percent discount on realme P3 5G in flipkart Limited Period Sale: Know offers, price specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+