Home
Deal of the day

ಬನ್ನಿ ಬ್ರೋ..! ಹೊಸ ಫೋನಿನ Vivo ಬೆಲೆ ಇಳಿಕೆ; 6500mAh ಬ್ಯಾಟರಿ.. 50MP ಸೋನಿ ಕ್ಯಾಮೆರಾ.. ಆಫರ್ ಏನಿದೆ?

ವಿವೋ ಕಳೆದ ತಿಂಗಳು ವಿವೋ Y39 5G (Vivo Y39 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದೀಗ, ಈ ಫೋನಿನ ಬೆಲೆ ದಿಢೀರನೆ ಇಳಿಕೆಯಾಗಿದೆ. ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ, ಈ ಫೋನ್ ಶೇ. 22 ರಷ್ಟು ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಕ್ಯಾಶ್‌ಬ್ಯಾಕ್ ಆಫರ್ ಸಹ ನೀಡಲಾಗುತ್ತಿದೆ. ಈ ಫೋನಿಗೆ ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ Y39 5G ಮೊಬೈಲ್ ಲೋಟಸ್ ಪರ್ಪಲ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.68 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 6500mAh ಬ್ಯಾಟರಿ, ಎಐ ಸ್ಕ್ರೀನ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಮತ್ತು ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

ಹೊಸ Vivo ಫೋನಿನ ಬೆಲೆ ಇಳಿಕೆ; 6500mAh ಬ್ಯಾಟರಿ, ಸೋನಿ ಕ್ಯಾಮೆರಾ.. ಆಫರ್ ಏನಿದೆ

ವಿವೋ Y39 5G ಹೊಸ ಬೆಲೆ ಮತ್ತು ಆಫರ್

ವಿವೋ Y39 5G ಫೋನಿನ 8GB RAM + 128GB ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಶೇ. 22 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ನೀವು 16,999 ರೂ. ಬೆಲೆಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಇಎಂಐ ಮೂಲಕ ಈ ಫೋನ್ ಖರೀದಿಸಿದರೆ, ಹೆಚ್ಚುವರಿಯಾಗಿ 1000 ರೂ. ರಿಯಾಯಿತಿ ಸಹ ಲಭ್ಯವುದೆ. ಒಟ್ಟಾರೆಯಾಗಿ ನೀವು ಈ ಫೋನನ್ನು ಕೇವಲ 15,999 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದು ಫ್ಲಿಪ್‌ಕಾರ್ಟ್ ಹೊರತುಪಡಿಸಿ, ಅಮೆಜಾನ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.

ವಿವೋ Y39 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ Y39 5G ಸ್ಮಾರ್ಟ್‌ಫೋನ್ 6.68 ಇಂಚಿನ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 1608 × 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಪಂಚ್ ಹೋಲ್ ಶೈಲಿಯ ಸ್ಕ್ರೀನ್ 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಮತ್ತು TÜV ರೈನ್‌ಲ್ಯಾಂಡ್ ಐ ಪ್ರೊಟೆಕ್ಷನ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ Y39 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ವಿವೋ 5G ಫೋನ್ 8GB RAM ಹೊಂದಿದೆ. ಈ ಮೊಬೈಲ್ 128GB ಮತ್ತು 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ.

ಹೊಸ Vivo ಫೋನಿನ ಬೆಲೆ ಇಳಿಕೆ; 6500mAh ಬ್ಯಾಟರಿ, ಸೋನಿ ಕ್ಯಾಮೆರಾ.. ಆಫರ್ ಏನಿದೆ

ಕ್ಯಾಮೆರಾ ಸೆಟಪ್

ವಿವೋ Y39 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ Y39 5G ಸ್ಮಾರ್ಟ್‌ಫೋನ್ 6500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 44W ವೇಗದ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ. ಈ ವಿವೋ 5G ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ಬ್ಲೂಟೂತ್ 5.1, ವೈ-ಫೈ, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
22 percent discount on Vivo Y39 5G with 6500mAh Battery in flipkart: check price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+