Home
Deal of the day

ನಿಮ್ಮ ಗರ್ಲ್ ಫ್ರೆಂಡ್​ಗೆ ಗಿಫ್ಟ್ ಕೊಡಬಹುದು! 50MP ಕ್ಯಾಮೆರಾ.. 256GB ಸ್ಟೋರೇಜ್.. ಕಡಿಮೆ ಬೆಲೆ, ಆಫರ್‌ ಏನಿದೆ?

ಹೊಸ ರಿಯಲ್‌ಮಿ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಒಳ್ಳೆಯ ಆಫರ್‌ ಇದೆ. ಸ್ಟೈಲಿಶ್ ಲುಕ್ ಹೊಂದಿರುವ ರಿಯಲ್‌ಮಿ 13+ 5G (Realme 13+ 5G) ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಹೌದು, ನೀವು ಈ ಸ್ಮಾರ್ಟ್‌ಫೋನ್‌ ಖರೀದಿ ಆಕರ್ಷಕ ರಿಯಾಯಿತಿ ಸಹ ಪಡೆಯಬಹುದು. ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸದೇ ಈ ಆಫರ್‌ನ ಲಾಭ ಪಡೆಯಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ 13+ 5G ಫೋನ್ ಅಮೆಜಾನ್‌ನಲ್ಲಿ (Amazon) ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 80W ಅಲ್ಟ್ರಾ ಚಾರ್ಜಿಂಗ್ ಒಳಗೊಂಡಿದೆ.

Realme 13+ 5G ಬೆಲೆ ಇಳಿಕೆ! 50MP ಕ್ಯಾಮೆರಾ, 256GB ಸ್ಟೋರೇಜ್.. ಆಫರ್ ಏನಿದೆ?

ರಿಯಲ್‌ಮಿ 13+ 5G ಬೆಲೆ ಮತ್ತು ಆಫರ್‌ಗಳು

ರಿಯಲ್‌ಮಿ 13+ 5G ಫೋನಿನ 8GB RAM ಸ್ಟೋರೇಜ್‌ ರೂಪಾಂತರದಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನಿನ 128GB ಸ್ಟೋರೇಜ್ ರೂಪಾಂತರದ ಮೇಲೆ 1,899 ರೂ. ಮತ್ತು 256GB ಸ್ಟೋರೇಜ್ ವೇರಿಯಂಟ್ ಖರೀದಿ ಮೇಲೆ 1,609 ರೂ. ರಿಯಾಯಿತಿ ಲಭ್ಯವಿದೆ. ನೀವು ಎರಡೂ ರೂಪಾಂತರಗಳನ್ನು ಕ್ರಮವಾಗಿ 19,100 ರೂ. ಮತ್ತು 21,390 ರೂ.ಗೆ ಖರೀದಿಸಬಹುದು. ಅಮೆಜಾನ್‌ನಲ್ಲಿ ರಿಯಲ್‌ಮಿ 13+ 5G ಫೋನಿನ ವಿವಿಧ ಬಣ್ಣದ ರೂಪಾಂತರಗಳನ್ನು ಬೇರೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಫೋನಿನ 256GB ಸ್ಟೋರೇಜ್ ರೂಪಾಂತರದ ವಿಕ್ಟರಿ ಗೋಲ್ಡ್ ಬಣ್ಣದ ಮೇಲೆ ಹೆಚ್ಚು ರಿಯಾಯಿತಿ ಲಭ್ಯವಿದೆ. ಬಳಿಕ ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣದಲ್ಲಿ ಡಿಸ್ಕೌಂಟ್ ಸಿಗುತ್ತದೆ. ಹಾಗೆಯೇ 128GB ಸ್ಟೋರೇಜ್ ವೇರಿಯಂಟ್‌ನ ಡಾರ್ಕ್ ಪರ್ಪಲ್ ಬಣ್ಣದಲ್ಲಿ ಹೆಚ್ಚು ರಿಯಾಯಿತಿ ಲಭ್ಯವಿದೆ. ಬಳಿಕ ವಿಕ್ಟರಿ ಗೋಲ್ಡ್ ಮತ್ತು ಸ್ಪೀಡ್ ಗ್ರೀನ್ ಮೇಲೆಯೂ ಆಕರ್ಷಕ ಡಿಸ್ಕೌಂಟ್ ಸಿಗುತ್ತದೆ.

ರಿಯಲ್‌ಮಿ 13+ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು Samsung E4 ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2400 × 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ 13 ಪ್ಲಸ್ 5G ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 7300 ಎನರ್ಜಿ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಫೋನ್ ಗ್ರಾಫಿಕ್ಸ್‌ಗಾಗಿ ಮಾಲಿ G615 ಜಿಪಿಯು ಸಹ ಹೊಂದಿದೆ.

Realme 13+ 5G ಬೆಲೆ ಇಳಿಕೆ! 50MP ಕ್ಯಾಮೆರಾ, 256GB ಸ್ಟೋರೇಜ್.. ಆಫರ್ ಏನಿದೆ?

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ 13+ 5G 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಸೂಪರ್ ಬ್ಯಾಟರಿ

ರಿಯಲ್‌ಮಿ 13+ 5G 5G ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಅಲ್ಟ್ರಾ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕೇವಲ 31 ನಿಮಿಷಗಳಲ್ಲಿ ಶೇ.20 ರಿಂದ 100 ರಷ್ಟು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ ಈ ಫೋನ್, IP65 ರೇಟಿಂಗ್ ಪಡೆದದಿದೆ.

Best Mobiles in India

English summary
27 percent discount on realme 13+ 5G with 8GB RAM in amazon Sale: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+