Home
Deal of the day

ಅಮೆಜಾನ್ ಆಫರ್..! 5160mAh ಬ್ಯಾಟರಿ.. 50MP ಕ್ಯಾಮೆರಾ.. ಶೇ.27 ರಷ್ಟು ರಿಯಾಯಿತಿ ಲಭ್ಯ! ಯಾವ ಫೋನ್?

ರೆಡ್ಮಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ ರೆಡ್ಮಿ 14C 5G (Redmi 14C 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಇದರ ಬಿಡುಗಡೆ ಬೆಲೆ 10 ಸಾವಿರ ರೂ.ಗಿಂತ ಕಡಿಮೆ ಇದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸಿದೆ. ಪ್ರಸ್ತುತ, ಈ ರೆಡ್ಮಿ 14C 5G ಮೊಬೈಲ್ ಅಮೆಜಾನ್‌ನಲ್ಲಿ (Amazon) ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರೆಡ್ಮಿ 14C 5G ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 5160mAh ಬ್ಯಾಟರಿ ಮತ್ತು 18W ಸ್ಪೀಡ್‌ ಚಾರ್ಜಿಂಗ್ ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ನೀವು ಸ್ಟಾರ್‌ಗೇಜ್ ಬ್ಲಾಕ್, ಸ್ಟಾರ್‌ಲೈಟ್ ಬ್ಲೂ ಮತ್ತು ಸ್ಟಾರ್‌ಡಸ್ಟ್ ಪರ್ಪಲ್‌ ಬಣ್ಣದಲ್ಲಿ ಖರೀದಿಸಬಹುದು.

ಅಮೆಜಾನ್ ಆಫರ್..! ಈ Redmi 5G ಫೋನಿನ ಬೆಲೆ ಇಳಿಕೆ.. 27% ರಿಯಾಯಿತಿ.. ಯಾವ ಫೋನ್?

ರೆಡ್ಮಿ 14C 5G ಹೊಸ ಬೆಲೆ ಮತ್ತು ಆಫರ್

ರೆಡ್ಮಿ 14C 5G ಫೋನಿನ 4GB RAM + 64GB ಸ್ಟೋರೇಜ್ ಆಯ್ಕೆಯು 9,999 ರೂ.ಗೆ ಮಾರಾಟವಾಗುತ್ತಿದೆ. ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರವು 10,999 ರೂ.ಗೆ ಲಭ್ಯವಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್ 11,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಈ ರೆಡ್ಮಿ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನಲ್ಲಿ ಶೇ.27 ರಷ್ಟು ರಿಯಾಯಿತಿಯೊಂದಿಗೆ ಖರೀದಿಸಬಹುದು. ನೀವು ಕೇವಲ 9,499 ರೂ.ಗೆ ಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ಗೆ 284 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಸಹ ಲಭ್ಯವಿದೆ. ನೀವು, ಮತ್ತಷ್ಟು ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು.

ರೆಡ್ಮಿ 13 5G ವೈಶಿಷ್ಟ್ಯಗಳು

ರೆಡ್ಮಿ 13 5G ಮೊಬೈಲ್ 6.88 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1,600 x 720 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ದರ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಈ ರೆಡ್ಮಿ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಶಿಯೋಮಿ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್‌ ಗ್ರಾಫಿಕ್ಸ್‌ಗಾಗಿ, ಅಡ್ರಿನೊ 613 ಜಿಪಿಯು ಸಹ ಹೊಂದಿದೆ.

ಅಮೆಜಾನ್ ಆಫರ್..! ಈ Redmi 5G ಫೋನಿನ ಬೆಲೆ ಇಳಿಕೆ.. 27% ರಿಯಾಯಿತಿ.. ಯಾವ ಫೋನ್?

ರೆಡ್ಮಿ 13 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ರೆಡ್ಮಿ 5G ಮೊಬೈಲ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.4, ಎಫ್‌ಎಂ ರೇಡಿಯೋ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
27 percent discount on Redmi 14C 5G with 4GB RAM in amazon: check new Price, Offer, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+