Home
Deal of the day

ನಿಮ್ಮದೇ ದುನಿಯಾ..! ಶೇ.27 ರಷ್ಟು ರಿಯಾಯಿತಿ.. 1000 ಬ್ಯಾಂಕ್ ಆಫರ್.. 12000ಕ್ಕಿಂತ ಕಡಿಮೆ.. ಯಾವ ಫೋನ್?

ವಿವೋ ಸ್ಮಾರ್ಟ್‌ಫೋನ್ ಪ್ರಿಯರು ಖುಷಿ ಪಡುವ ಸುದ್ದಿ ಇದೆ. ಕಂಪನಿಯು ತನ್ನ 'Y' ಸರಣಿಯ 5G ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ಹೌದು, ವಿವೋ Y28s 5G (Vivo Y28s 5G) ಮೊಬೈಲ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಬನ್ನಿ, ಈ ಫೋನಿಗೆ ಯಾವೆಲ್ಲಾ ಆಫರ್‌ ಲಭ್ಯವಿದೆ, ಹೊಸ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ನೀವು 12,000 ರೂ. ಬಜೆಟ್‌ನಲ್ಲಿ ಹೊಸ 5G ಮೊಬೈಲ್ ಖರೀದಿಸಲು ಬಯಸಿದರೆ, ವಿವೋ Y28s 5G ಫೋನ್ ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.56 ಇಂಚಿನ 90Hz ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ IP64 ರೇಟಿಂಗ್, 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

Vivo: 27% ರಿಯಾಯಿತಿ.. 1000 ಬ್ಯಾಂಕ್ ಆಫರ್.. 12000ಕ್ಕಿಂತ ಕಡಿಮೆ; ಯಾವ ಫೋನ್?

ವಿವೋ Y28s 5G ಹೊಸ ಬೆಲೆ

ವಿವೋ Y28s 5G ಫೋನಿನ 4GB RAM + 128GB ಸ್ಟೋರೇಜ್ ವೇರಿಯಂಟ್ 13,999 ರೂ.ಗೆ ಬಿಡುಗಡೆಯಾಗಿತ್ತು. 6GB RAM + 128GB ಸ್ಟೋರೇಜ್ ಬೆಲೆ 15,499 ರೂ. ಆಗಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ಹೊಂದಿರುವ ಫೋನನ್ನು 16,999 ರೂ.ಗೆ ಪರಿಚಯಿಸಲಾಗಿತ್ತು. ಈ ವಿವೋ ಫೋನ್ ವಿಂಟೇಜ್ ರೆಡ್ ಮತ್ತು ಟ್ವಿಂಕ್ಲಿಂಗ್ ಪರ್ಪಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 4GB RAM + 128GB ಸ್ಟೋರೇಜ್ ಹೊಂದಿರುವ ಈ ವಿವೋ Y28S 5G ಫೋನನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಶೇ.27 ರಷ್ಟು ರಿಯಾಯಿತಿಯೊಂದಿಗೆ 12,999 ರೂ.ಗಳಿಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ, ಈ ಫೋನ್ ಖರೀದಿಸಿದರೆ 1000 ರೂ. ರಿಯಾಯಿತಿ ಸಹ ಲಭ್ಯವಿದೆ. ಇದರೊಂದಿಗೆ ನೀವು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 11,999 ರೂ.ಗೆ ಖರೀದಿಸಬಹುದು.

ವಿವೋ Y28S 5G ವೈಶಿಷ್ಟ್ಯಗಳು

ವಿವೋ Y28S 5G ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 1612 × 720 ಪಿಕ್ಸೆಲ್ ರೆಸಲ್ಯೂಶನ್‌, 90Hz ರಿಫ್ರೆಶ್ ದರ ಮತ್ತು 840 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಗ್ಲೋಬಲ್ ಡಿಸಿ ಡಿಮ್ಮಿಂಗ್ ಮತ್ತು ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಸಹ ಹೊಂದಿದೆ. ಈ ವಿವೋ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ Funtouch OS 14 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 8GB ವಿಸ್ತೃತ RAM ತಂತ್ರಜ್ಞಾನವನ್ನು ಹೊಂದಿದೆ. ನೀವು 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

Vivo: 27% ರಿಯಾಯಿತಿ.. 1000 ಬ್ಯಾಂಕ್ ಆಫರ್.. 12000ಕ್ಕಿಂತ ಕಡಿಮೆ; ಯಾವ ಫೋನ್?

ವಿವೋ Y28S 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ, 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಈ ವಿವೋ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ವಿವೋ Y28S 5G ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಎಫ್ಎಂ ರೇಡಿಯೋ, 3.5mm ಆಡಿಯೊ ಜ್ಯಾಕ್, 150% ವಾಲ್ಯೂಮ್ ಬೂಸ್ಟ್ ಮತ್ತು ಸ್ಪ್ಲಿಟ್ ಸ್ಕ್ರೀನ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ 5G, ವೈ-ಫೈ, ಬ್ಲೂಟೂತ್ 5.4 ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
27 percent discount on Vivo Y28s 5G with 4GB RAM in flipkart: check out price, offers, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+