ಮತ್ತೆ ಬೆಲೆ ಕುಸಿತ! 50MP ಸೋನಿ ಕ್ಯಾಮೆರಾ.. 5500mAh ಬ್ಯಾಟರಿ.. 3,750 ಡಿಸ್ಕೌಂಟ್; ಯಾವ ಫೋನ್?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ದುಬಾರಿ ಬೆಲೆ ಎಂಬ ಕಾರಣಕ್ಕೆ ಕೆಲವರು ಈ ಮೊಬೈಲ್ ಖರೀದಿಸಲ್ಲ. ಅಂತಹವರಿಗೆ ಕಡಿಮೆ ಬೆಲೆಯಲ್ಲಿ ಒನ್‌ಪ್ಲಸ್ 5G ಮೊಬೈಲ್ ಖರೀದಿಸುವ ಉತ್ತಮ ಅವಕಾಶವಿದೆ. ಹೌದು, ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G (OnePlus Nord CE 4 Lite 5G) ಫೋನಿನ ಬೆಲೆ ಇಳಿಕೆ ಮಾಡಿದೆ. ನಿಮಗೆ 3,000 ರೂ.ಗಳ ರಿಯಾಯಿತಿ ಸಿಗುತ್ತದೆ. ಜೊತೆಗೆ 750 ರೂ. ಬ್ಯಾಂಕ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಇದೆ. ಈ ಮೊಬೈಲ್ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಇದನ್ನು ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಲಾಗುತ್ತಿದೆ.

ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಹೊಸ ಬೆಲೆ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನಿನ 8GB RAM + 128GB ಸ್ಟೋರೇಜ್ ಬೆಲೆ 19,999 ರೂ. ಆಗಿದೆ. ಪ್ರಸ್ತುತ, ಇದು 17,999 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, ಇದರ ಬೆಲೆ 2,000 ರೂ. ಇಳಿಕೆಯಾಗಿದೆ. ಜೊತೆಗೆ 1,000 ರೂ.ಗಳ ಹೆಚ್ಚುವರಿ ರಿಯಾಯಿತಿ ಸಹ ನೀಡಲಾಗುತ್ತಿದೆ. ಈ ರಿಯಾಯಿತಿಯ ಬಳಿಕ, ಇದರ ಬೆಲೆ 16,999 ರೂ.ಗೆ ಇಳಿಕೆಯಾಗಲಿದೆ. ನೀವು ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಅಥವಾ ಎಟಿಎಂ ಕಾರ್ಡ್‌ಗಳ ಮೇಲೆ 750 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಮೂಲಕ ಕೇವಲ 17,249 ರೂ.ಗೆ ಈ ಫೋನನ್ನು ಖರೀದಿಸಬಹುದು. ಈ ಆಫರ್ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಮತ್ತು ಮತ್ತು ಅಮೆಜಾನ್‌ನಲ್ಲಿ ಲಭ್ಯವಿದೆ.
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ವೈಶಿಷ್ಟ್ಯಗಳು
ಅಮೋಲೆಡ್ ಡಿಸ್ಪ್ಲೇ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನ್ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಇದು 1080 × 2400 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನನ್ನು ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್ 14.0 ಜೊತೆಗೆ ಕೆಲಸ ಮಾಡುತ್ತದೆ.

RAM ಮತ್ತು ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಇದರಲ್ಲಿ 8GB ವರ್ಚುವಲ್ RAM ಸಹ ಇದೆ. ನೀವು ಭೌತಿಕ RAM ಜೊತೆಗೆ 16GB ಬಳಸಬಹುದು. ಈ ಫೋನಿನಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.
ಡ್ಯುಯಲ್ ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಮತ್ತು EIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬಿಗ್ ಬ್ಯಾಟರಿ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ 5W ರಿವರ್ಸ್ ಚಾರ್ಜಿಂಗ್ ಸಹ ಇದೆ.


Click it and Unblock the Notifications








