Home
Deal of the day

3500ಕ್ಕಿಂತ ಹೆಚ್ಚು ಡಿಸ್ಕೌಂಟ್! 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. 12000ಕ್ಕಿಂತ ಕಡಿಮೆಗೆ Realme ಫೋನ್

ರಿಯಲ್‌ಮಿ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯಲು ಆಗಾಗ್ಗೆ ಬಂಪರ್ ಆಫರ್‌ಗಳನ್ನು ನೀಡುತ್ತದೆ. ಅದರಂತೆ ಪ್ರಸ್ತುತ, ರಿಯಲ್‌ಮಿ ನಾರ್ಜೋ 70x 5G (Realme NARZO 70x 5G) ಫೋನಿನ ಬೆಲೆಯನ್ನು ದಿಢೀರ್ ಇಳಿಕೆ ಮಾಡಿದೆ. ಹೌದು, ಈ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಶೇ.39 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ ಬಿಡುಗಡೆ ಬೆಲೆಗಿಂತ ಅಗ್ಗವಾಗಿ ಮಾರಾಟ ಮಾಡಲಾಗುತ್ತಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳು ಇಲ್ಲಿವೆ ನೋಡಿ.

ರಿಯಲ್‌ಮಿ ನಾರ್ಜೋ 70x 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್ ಮತ್ತು 128GB ಸ್ಟೋರೇಜ್ ಒಳಗೊಂಡಿದೆ. ನೀವು ಪ್ರಸ್ತುತ, ಈ ಫೋನಿನ ಖರೀದಿ ಮೇಲೆ 3,500 ರೂ.ಗಿಂತ ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

12000ಕ್ಕಿಂತ ಕಡಿಮೆ! 3500 ಡಿಸ್ಕೌಂಟ್.. ಕಮ್ಮಿ ಬೆಲೆಗೆ Realme ಫೋನ್

ರಿಯಲ್‌ಮಿ ನಾರ್ಜೋ 70x 5G ಬೆಲೆ ಮತ್ತು ಆಫರ್‌ಗಳು

ರಿಯಲ್‌ಮಿ ನಾರ್ಜೋ 70x 5G ಫೋನನ್ನು ಅಮೆಜಾನ್‌ನಲ್ಲಿ (Amazon) ಭಾರೀ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಈ ಫೋನ್ 3,501 ರೂ. ಡಿಸ್ಕೌಂಟ್‌ ಪಡೆದಿದೆ. ನೀವು ರಿಯಾಯಿತಿಯೊಂದಿಗೆ 11,498 ರೂ.ಗೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಈ ಆಫರ್‌ನ ಲಾಭ ಪಡೆಯಲು ಯಾವುದೇ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ.

ಪ್ರಸ್ತುತ ಅಮೆಜಾನ್‌ನಲ್ಲಿ ರಿಯಲ್‌ಮಿ ನಾರ್ಜೋ 70x 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು 13,498 ರೂ.ಗೆ ಮಾರಾಟವಾಗುತ್ತಿದೆ. ಈ ಮೊಬೈಲ್ ಖರೀದಿ ಮೇಲೆ 2,000 ರೂ. ರಿಯಾಯಿತಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಐಸ್ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ರಿಯಲ್‌ಮಿ ನಾರ್ಜೊ 70x 5G ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ 70x 5G ಫೋನ್ 6.72 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್ಪ್ಲೇ ಹೊಂದಿದೆ. ಇದು 1080 x 2400 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 800 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಈ ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G57 ಜಿಪಿಯು ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ನೊಂದಿಗೆ ಕೆಲಸ ಮಾಡುತ್ತದೆ.

12000ಕ್ಕಿಂತ ಕಡಿಮೆ! 3500 ಡಿಸ್ಕೌಂಟ್.. ಕಮ್ಮಿ ಬೆಲೆಗೆ Realme ಫೋನ್

ರಿಯಲ್‌ಮಿ ನಾರ್ಜೊ 70x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಫೋನ್ 8GB RAM + 128GB ಸ್ಟೋರೇಜ್‌ ಹೊಂದಿದೆ. RAM ಅನ್ನು ಹೆಚ್ಚಿಸಲು ಡೈನಾಮಿಕ್ ಬೆಂಬಲವೂ ಇದೆ. ನೀವು ಹೆಚ್ಚುವರಿ RAM ಬಳಸಬಹುದು.

ರಿಯಲ್‌ಮಿ ನಾರ್ಜೊ 70x 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಜೊತೆಗೆ ರೈನ್ ವಾಟರ್ ಟಚ್ ಫೀಚರ್, ಏರ್ ಗೆಸ್ಚರ್ ಫೀಚರ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ 5G, 4G, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
39 Percent Discount Realme NARZO 70x with 8GB RAM in amazon: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+